![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Sep 23, 2021, 2:12 PM IST
ಬೆಂಗಳೂರು: ರಾಜ್ಯ ಸರ್ಕಾರ 6 ತಿಂಗಳ ಹಿಂದೆ ಘೋಷಿಸಿದಂತೆ ಸ್ಥಾನಿಕ ವೈದ್ಯರಿಗೆ ಕೊರೊನಾ ಅಪಾಯ ಭತ್ಯೆ ಶೀಘ್ರವೇ ನೀಡುವಂತೆ ಕರ್ನಾಟಕ ಸ್ಥಾನಿಕ ವೈದ್ಯರ ಸಂಘ (ಕೆಎಆರ್‌ಡಿ) ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ಮಾತನಾಡಿರುವ ಸಂಘದ ಅಧ್ಯಕ್ಷೆ ಡಾ. ನಮ್ರತಾ, ಸ್ಥಾನಿಕ ವೈದ್ಯರೂ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ರೋಗಿಗಳ ಜೀವ ಉಳಿಸಿದ ವೈದ್ಯರನ್ನು ಸರ್ಕಾರ ಕಡೆಗಣಿಸಿದೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಮೂಲಕ ಸಾವಿನ ಪ್ರಮಾಣ ತಗ್ಗಿಸುವಲ್ಲಿ ಸ್ಥಾನಿಕ ವೈದ್ಯರು ಸಹ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸರ್ಕಾರ ಕೂಡಲೇ ಕೋವಿಡ್ ಅಪಾಯ ಭತ್ಯೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿರೆ. ಶೈಕ್ಷಣಿಕ ಶುಲ್ಕ ಪರಿಷ್ಕರಣೆಯಿಂದಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಪಡೆದವರಿಗೆ ತಾರತಮ್ಯವಾಗುತ್ತಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಈ ನಿಲುವು ಸರಿಯಲ್ಲ ಎಂದ ಅವರು, ಕೋವಿಡ್ ವೇಳೆಶ್ರಮಿಸಿದ ಸ್ಥಾನಿಕ ವೈದ್ಯರ (ಪಿಜಿ/ಎಸ್‌ಎಸ್) ಸೇವೆ ಪರಿಗಣಿಸಿ ಶೈಕ್ಷಣಿಕ ಶುಲ್ಕವನ್ನು 2018ರಂತೆ ಪುನರ್ ಪರಿಷ್ಕರಿಸಬೇಕು ಎಂದರು.
You seem to have an Ad Blocker on.
To continue reading, please turn it off or whitelist Udayavani.