52 ಸದಸ್ಯರಿಗೆ ಕಾರ್ಪೊರೇಟರ್ “ನಂ.1′ ಪುರಸ್ಕಾರ
Team Udayavani, Jul 15, 2019, 3:06 AM IST
ಬೆಂಗಳೂರು: “ಶಾಸಕರು ಮತ್ತು ಸಂಸದರಿಗಿಂತ ಹೆಚ್ಚಾಗಿ ಸ್ಥಳೀಯ ಸಂಸ್ಥೆ ಸದಸ್ಯರಿಗೆ ಆಯಾ ಬೀದಿಗಳ ಸಮಸ್ಯೆ ತಿಳಿದಿರುತ್ತದೆ’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ಟೌನ್ ಹಾಲ್‌ನಲ್ಲಿ ಭಾನುವಾರ ಸಿಟಿಜನ್ಸ್ ಫಾರ್ ಬೆಂಗಳೂರು ಸಂಸ್ಥೆ ಹಮ್ಮಿಕೊಂಡಿದ್ದ “ಕಾರ್ಪೊರೇಟರ್ ನಂ.1 ನಮ್ಮ ಸಮಿತಿ ಪುರಸ್ಕಾರ ಪ್ರದಾನ’ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪಾಲಿಕೆ ಸದಸ್ಯರಿಗೆ ಜನ ಸಂಪರ್ಕ ಹೆಚ್ಚಾಗಿರುತ್ತದೆ. ವಾರ್ಡ್ ಸಮಿತಿಯಿಂದ ಪ್ರತಿಯೊಬ್ಬರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಅದನ್ನು ಸರ್ಮಪಕವಾಗಿ ಬಳಸಿಕೊಳ್ಳಬೇಕು’ ಎಂದರು.
2018ರಲ್ಲಿ ಪಾಲಿಕೆಯ ಸಭೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ ವಾರ್ಡ್ ಸಮಿತಿ ಸಭೆ ಹಮ್ಮಿಕೊಳ್ಳಬೇಕು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಇದರ ಪ್ರಕಾರ ಸಭೆಗಳನ್ನು ನಡೆಸಿದ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು,
ಅವರ ಸಮಸ್ಯೆಗಳನ್ನು ಪರಿಹರಿಸಿದ ಪಾಲಿಕೆಯ 52 ಸದಸ್ಯರನ್ನು ಜನಾಭಿಪ್ರಾಯದ ಆಧಾರದ ಮೇಲೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಇವರಲ್ಲಿ 27 ಜನಪಾಲಿಕೆ ಸದಸ್ಯರು ಭಾನುವಾರ ಪುರಸ್ಕಾರಾ ಸ್ವೀಕರಿಸಿದ್ದಾರೆ. ಪಾಲಿಕೆ ಸದಸ್ಯರಿಗೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರಶಸ್ತಿ ಫಲಕ ಪ್ರದಾನ ಮಾಡಿದರು.
ನಮ್ಮ ಸಮಿತಿ ಪುರಸ್ಕಾರ ಪಡೆದವರು: ಪಾಲಿಕೆ ಸದಸ್ಯರು, ವಾರ್ಡ್ ಕೆ.ಎ.ಮುನೀಂದ್ರ ಕುಮಾರ್ (ಜಕ್ಕೂರು), ಎಚ್.ಕುಸುಮಾ (ವಿದ್ಯಾರಣ್ಯಪುರ), ಕೆ.ನಾಗಭೂಷಣ್ (ಶೆಟ್ಟಿಹಳ್ಳಿ), ಉಮಾದೇವಿ ನಾಗರಾಜ್ (ಟಿ.ದಾಸರಹಳ್ಳಿ), ಎಂ.ಆನಂದ (ರಾಧಾಕೃಷ್ಣ ದೇವಸ್ಥಾನ), ಜಿ.ಇಂದಿರಾ, (ಸಂಜಯನಗರ), ಎಂ.ಪ್ರಮೀಳಾ (ಗಂಗಾನಗರ), ಎನ್.ರಾಜಶೇಖರ್ (ವಿ.ನಾಗೇನಹಳ್ಳಿ), ಇರ್ಷಾದ್ ಬೇಗಂ (ನಾಗವಾರ) , ಪಿ.ಆನಂದ (ಎಚ್‌ಬಿಆರ್‌ಬಡಾವಣೆ ), ರಾಧಮ್ಮ ವೆಂಕಟೇಶ್ (ಹೊರಮಾವು), ಪದ್ಮನಾಭ ರೆಡ್ಡಿ (ಕಾಚರಕನಹಳ್ಳಿ), ಎಸ್.ವಾಸುದೇವ (ದೊಡ್ಡಬಿದಿರಕಲ್ಲು),
ಎಂ.ಮಹದೇವ (ಮಾರಪ್ಪನಪಾಳ್ಯ), ಎನ್.ಜಯಗೋಪಾಲ್ (ಮಲ್ಲೇಶ್ವರ), ಆರ್.ಸಂಪತ್‌ರಾಜ್ (ಡಿ.ಜೆ.ಹಳ್ಳಿ), ಲಾವಣ್ಯ ಗಣೇಶ್ ರೆಡ್ಡಿ (ಲಿಂಗರಾಜಪುರ), ಮೀನಾಕ್ಷಿ (ಬೆನ್ನಿಗಾನಹಳ್ಳಿ), ಎಸ್.ರಾಜ (ವಿಜಿನಾಪುರ), ಎ.ಸಿ.ಹರಿಪ್ರಸಾದ್ (ಹೂಡಿ), ಶಿಲ್ಪಾ ಅಭಿಲಾಷ್ (ನ್ಯೂ ತಿಪ್ಪಸಂದ್ರ), ಜಿ.ಮಂಜುನಾಥ ರಾಜು (ಕಾಡುಮಲ್ಲೇಶ್ವರ ), ಬಿ.ಭದ್ರೇಗೌಡ (ನಾಗಪುರ), ಎಸ್.ಕೇಶವಮೂರ್ತಿ (ಮಹಾಲಕ್ಷಿಪುರ), ಎಂ.ಶಿವರಾಜು (ಶಂಕರಮಠ), ಆರ್.ಎಸ್.ಸತ್ಯನಾರಾಯಣ (ದತ್ತಾತ್ರೇಯ ದೇವಸ್ಥಾನ), ಅಬ್ದುಲ್ ರಕೀಬ್ ಜಾಕೀರ್ (ಪುಲಕೇಶಿನಗರ), ಎಸ್.ಆನಂದ ಕುಮಾರ್ (ಹೊಯ್ಸಳನಗರ), ಎಸ್.ಜಿ.ನಾಗರಾಜ್ (ವಿಜ್ಞಾನನಗರ), ಎಸ್.ಉದಯಕುಮಾರ್ (ಹಗದೂರು), ಶ್ವೇತಾ ವಿಜಯಕುಮಾರ್ (ದೊಡ್ಡನೆಕ್ಕುಂದಿ), ಎಸ್.ಸಂಪತ್ ಕುಮಾರ್, (ವಸಂತನಗರ), ಜಿ.ಕೃಷ್ಣಮೂರ್ತಿ (ರಾಜಾಜಿನಗರ), ಎಸ್.ಪಿ.ಹೇಮಲತಾ (ವೃಷಭಾವತಿನಗರ),
ಎಂ.ಬಿ.ದ್ವಾರಕಾನಾಥ್ (ಶಾಂತಲಾನಗರ), ಸಿ.ಆರ್.ಲಕ್ಷ್ಮೀ ನಾರಾಯಣ (ದೊಮ್ಮಲೂರು), ಎಂ.ಚಂದ್ರಪ್ಪ ರೆಡ್ಡಿ (ಕೋನೇನ ಅಗ್ರಹಾರ), ಪಿ.ಸೌಮ್ಯಾ (ಶಾಂತಿನಗರ), ಐಶ್ವರ್ಯಾ (ಬಿನ್ನಿಪೇಟೆ), ಟಿ.ರಾಮಚಂದ್ರ (ಈಜಿಪುರ), ಆಶಾ ಸುರೇಶ್ (ಬೆಳ್ಳಂದೂರು), ಗಂಗಾಂಬಿಕೆ ಮಲ್ಲಿಕಾರ್ಜುನ (ಜಯನಗರ), ಪೂರ್ಣಿಮಾ ರಮೇಶ್ (ಯಡಿಯೂರು), ಸರಸ್ವತಮ್ಮ ( ಜಕ್ಕಸಂದ್ರ), ಗುರುಮೂರ್ತಿ ರೆಡ್ಡಿ (ಎಚ್‌ಎಸಆರ್ ಲೇಔಟ್), ಕೆ.ಎನ್ ಲಕ್ಷ್ಮೀ ನಟರಾಜ್ ( ಜೆ.ಪಿ.ನಗರ), ಎಂ.ಮಾಲ (ಶಾಕಾಂಬರಿ ನಗರ) , ಶೋಭಾ ಜಗದೀಶ್ ಗೌಡ (ಮಂಗಮ್ಮನಪಾಳ್ಯ), ಎಂ.ಆಂಜನಪ್ಪ (ಬೇಗೂರು), ಎಸ್.ಶಶಿರೇಖಾ ಜಯರಾಮ್ (ಕೋಣನಕುಂಟೆ), ಕೆ.ಸೋಮಶೇಖರ್ (ಅಂಜನಾಪುರ), ಲೋಕೇಶ್ (ಮಲ್ಲಸಂದ್ರ).
ಜನಪ್ರತಿನಿಧಿಗಳು ಜನರೊಂದಿಗೆ ಒಡನಾಟ ಇಟ್ಟುಕೊಳ್ಳಲು ಸಮಿತಿಗಳು ಉತ್ತಮ ವೇದಿಕೆ. ಪಾಲಿಕೆ ಆಡಳಿತದಲ್ಲಿ ಪಾರದರ್ಶಕತೆ ತರಲು ಸಹ ವಾರ್ಡ್ ಸಮಿತಿ ಸಹಾಯಕವಾಗಿದೆ
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್
ಸಂವಿಧಾನದ 74ನೇ ತಿದ್ದುಪಡಿ ಅನ್ವಯ ಸರ್ಕಾರ ಪಾಲಿಕೆಗೆ ಶೇ. 50ರಷ್ಟು ಅಧಿಕಾರ ನೀಡಬೇಕು. ಇದರ ಬಗ್ಗೆ ಕಾನೂನು ತಜ್ಞರು ಸರ್ಕಾರದ ಗಮನಕ್ಕೆ ತರಬೇಕು
-ಪದ್ಮನಾಭ ರೆಡ್ಡಿ, ಪಾಲಿಕೆ ವಿರೋಧ ಪಕ್ಷದ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.