ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡಾಸ್ತ್ರ!

ಸುದ್ದಿ ಸುತ್ತಾಟ

Team Udayavani, Jul 8, 2019, 3:10 AM IST

sanchara

ಚಿತ್ರ: ಫ‌ಕ್ರುದ್ದೀನ್‌ ಎಚ್‌.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಮೊತ್ತವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಅದರಂತೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದರೆ ಅಥವಾ ವಾಹನ ಮತ್ತು ಚಾಲನೆಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿಲ್ಲದೇ ಇದ್ದರೆ ಕನಿಷ್ಠ 1000 ರೂ. ದಂಡ ಪಾವತಿಸಬೇಕಾಗುತ್ತದೆ. ಜು.20ರಿಂದ ಹೊಸ ದಂಡ ಮೊತ್ತ ಅನ್ವಯವಾಗಲಿದೆ. ಆದರೆ, ಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲ ಸೌಕರ್ಯ ಕಲ್ಪಿಸದೆಯೇ ಸರ್ಕಾರ ದಂಡ ಪ್ರಯೋಗ ಮಾಡುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಹೀಗಾಗಿ, ದಂಡ ಮೊತ್ತ ಹೆಚ್ಚಳ ಕ್ರಮವು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ನಿಯಂತ್ರಿಸುವುದೋ ಅಥವಾ ಲಂಚಗುಳಿತನ ಹೆಚ್ಚಿಸುವುದೋ ಎಂಬ ವಿಶ್ಲೇಷಣೆ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ.

ವಾಹನ ಸವಾರರೇ ಗಮನಿಸಿ; ಜುಲೈ 20ರಿಂದ ರಸ್ತೆಗಿಳಿಯುವ ಮುನ್ನ ನಿಮ್ಮ ವಾಹನಗಳ ವಿಮೆ, ಚಾಲನೆ ಪರವಾನಗಿ, ನೋಂದಣಿ ಪತ್ರ, ಮಾಲಿನ್ಯ ತಪಾಸಣೆ ಪ್ರಮಾಣಪತ್ರ ಸೇರಿ ಎಲ್ಲ ದಾಖಲೆಗಳೂ ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ! ಜತೆಗೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು, ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ವಾಹನ ಚಾಲನೆ ಮಾಡುವ ಅಭ್ಯಾಸವಿದ್ದರೆ ಬಿಡುವುದು ಒಳಿತು. ಒಂದೊಮ್ಮೆ ನೀವು ಹೀಗೆ ಮಾಡುತ್ತಾ, ದಾಖಲೆಗಳಿಲ್ಲದೇ ವಾಹನ ಚಾಲನೆ ಮಾಡಿ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದರೆ ಕನಿಷ್ಠ 1000 ರೂ.ಗಳನ್ನು ದಂಡವಾಗಿ ಪಾವತಿಸಲೇಬೇಕು. ಎರಡನೇ ಬಾರಿಯೂ ಸಂಚಾರ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ ಕಟ್ಟಬೇಕಾದೀತು!

ಸಂಚಾರ ನಿಯಮಗಳ ಉಲ್ಲಂಘನೆಯ ದಂಡದ ಮೊತ್ತವನ್ನು ಹೆಚ್ಚಳ ಮಾಡಿ ಜೂನ್‌ 25ರಂದು ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ದಿಢೀರ್‌ ದಂಡ ಹೆಚ್ಚಳದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಕೊಂಚ ಕಾಲಾವಕಾಶ ತೆಗೆದುಕೊಂಡಿರುವ ನಗರ ಸಂಚಾರ ಪೊಲೀಸರು ಜುಲೈ 20ರಿಂದ ದುಬಾರಿ ದಂಡದ “ಅಸ್ತ್ರ’ ಪ್ರಯೋಗಿಸಲಿದ್ದಾರೆ. ಸಂಚಾರ ನಿಯಮಗಳ ಉಲ್ಲಂಘನೆ ನಿಯಂತ್ರಿಸಲು ದುಬಾರಿ ದಂಡದ ಪ್ರಯೋಗ ನೆರವಾಗಬಲ್ಲದೇ, ದುಬಾರಿ ದಂಡದ ಬಗ್ಗೆ ಜನ ಹೇಳುವುದೇನು, ಸಂಚಾರ ಪೊಲೀಸರ ಜತೆಗೆ ಬಿಬಿಎಂಪಿ ಸೇರಿದಂತೆ ಸಕ್ಷಮ ಪ್ರಾಧಿಕಾರಗಳ ಕರ್ತವ್ಯಗಳೇನು, ಸರ್ಕಾರದ ನಿರ್ಧಾರದ ಬಗ್ಗೆ ಸಂಚಾರ ತಜ್ಞರು ಏನು ಹೇಳುತ್ತಾರೆ ಎಂಬುದೇ ಈ ವಾರದ ವಿಶೇಷ.

ಅಜಾಗರೂಕ ಚಾಲನೆ, ಹೆಚ್ಚುತ್ತಿರುವ ಅಪಘಾತಗಳು ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕುವ ಉದ್ದೇಶದಿಂದ ದಂಡದ ಮೊತ್ತ ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸರ್ಕಾರ ಹೆಚ್ಚಿಸಿರುವ ಮೊತ್ತ ಸಾಮಾನ್ಯ ಜನರಿಗೆ ಹೊರೆಯಾಗಲಿದೆ. ಸಮರ್ಪಕ ರಸ್ತೆಗಳು, ಪಾರ್ಕಿಂಗ್‌ ಸೌಲಭ್ಯ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯ ಕಲ್ಪಿಸದೇ ಸರ್ಕಾರ ಜನರ ಮೇಲೆ ದಂಡದ ಹೊರೆ ಹಾಕಲು ನಿರ್ಧರಿಸಿದೆ ಎಂಬ ಆರೋಪ ಕೇಳಿಬರುತ್ತಿದೆ.

ಲಂಚಕ್ಕೆ ಅವಕಾಶ ಮಾಡಕೊಡಲಿದೆಯೇ?: ಪಾರ್ಕಿಂಗ್‌ ನಿಷೇಧ ಸ್ಥಳಗಳಲ್ಲಿ ವಾಹನ ನಿಲುಗಡೆ, ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆಗೆ ಸಾವಿರ ರೂ. ದಂಡ, ನೋಂದಣಿ ಮಾಡಿಸದ ವಾಹನ ಚಾಲನೆ ವೇಳೆ ಮೊದಲ ಬಾರಿ ಸಿಕ್ಕಿಬಿದ್ದರೆ ಐದು ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ, ಈಗಾಗಲೇ ಟೋಯಿಂಗ್‌ ಮಾಡಿದ ವಾಹನಗಳ ಮಾಲೀಕರಿಂದ ಪೂರ್ಣ ಪ್ರಮಾಣದ ದಂಡ ಮೊತ್ತ ಪಡೆಯುವ ಬದಲಿಗೆ ಅದರ ಅರ್ಧದಷ್ಟು ಮೊತ್ತವನ್ನು ಲಂಚದ ರೂಪದಲ್ಲಿ ಪಡೆದು ವಾಹನ ಬಿಟ್ಟು ಕಳಿಸಲಾಗುತ್ತದೆ ಎಂಬ ಗಂಭೀರ ಆರೋಪವಿದೆ. ಇದೀಗ ದುಬಾರಿಯಾಗಿರುವ ದಂಡದ ಮೊತ್ತ ಭರಿಸಲು ಸಾಧ್ಯವಾಗದ, ಇಚ್ಛಿಸದ ವಾಹನ ಸವಾರರು ಪೊಲೀಸ್‌ ಅಧಿಕಾರಿಗಳಿಗೆ ಅರ್ಧದಷ್ಟು ಹಣ ನೀಡಿ ತಪ್ಪಿಸಿಕೊಳ್ಳುವವರೇ ಎಂಬ ಪ್ರಶ್ನೆಯೂ ಎದ್ದಿದೆ. ಹೀಗಾಗಿ, ದಂಡದ ಮೊತ್ತ ಸಂಗ್ರಹವನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸಲು ಸಂಚಾರ ಪೊಲೀಸ್‌ ವಿಭಾಗ ಕಾರ್ಯಗತವಾಗಬೇಕು ಎಂದು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರು ಹೇಳುವುದೇನು?: ಅಪಘಾತಗಳ ಸಂಖ್ಯೆ ಕಡಿಮೆ ಮಾಡುವುದು ಸೇರಿದಂತೆ ಹಲವು ಸದುದ್ದೇಶಗಳಿಂದ ದಂಡದ ಮೊತ್ತ ಹೆಚ್ಚಿಸಿರುವುದು ಉತ್ತಮ ಕ್ರಮ ಎಂದು ಒಪ್ಪಿಕೊಳ್ಳಬಹುದು. ಆದರೆ, ಬೆಂಗಳೂರಿನಂತಹ ಮಹಾನಗರದಲ್ಲಿ ರಸ್ತೆಗಳು ಕಿರಿದಾಗಿವೆ. ವಾಹನಗಳನ್ನು ನಿಲ್ಲಿಸಲು ಸಮರ್ಪಕ ಪಾರ್ಕಿಂಗ್‌ ಜಾಗಗಳ ವ್ಯವಸ್ಥೆ ಮಾಡಲಾಗಿಲ್ಲ. ಹೀಗಾಗಿ, ಸರ್ಕಾರ ಮೊದಲು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಸರಿಯಾದ ರಸ್ತೆ, ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವತ್ತ ಸರ್ಕಾರ ಗಮನಹರಿಸಬೇಕು ಎಂಬುದು ಸಂಚಾರ ತಜ್ಞರ ಅಭಿಪ್ರಾಯ.

ದಂಡ ಪಾವತಿಗೆ ಸಂಚಾರ ಪೊಲೀಸರು ಡಿಜಿಟಲ್‌ ಮಾಧ್ಯಮವನ್ನು ಹೆಚ್ಚು ಬಳಸಬೇಕು. ವಾಹನ ಸವಾರರು, ಚಾಲಕರು ಪಾವತಿಸುವ ದಂಡ ನೇರವಾಗಿ ಸರ್ಕಾರದ ಖಾತೆಗೆ ಜಮಾ ಆಗುವಂತೆ ತಂತ್ರಜ್ಞಾನ ರೂಪಿಸಬೇಕು. ಸಂಚಾರ ಪೊಲೀಸರು ಪ್ರತಿ ವರ್ಷ ಸರ್ಕಾರಕ್ಕೆ ಅಂದಾಜು 70 ಕೋಟಿ ರೂ.ಗಳನ್ನು ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತ ಸಂಗ್ರಹಿಸಿ ನೀಡುತ್ತಾರೆ. ಈ ಮೊತ್ತವನ್ನು ಸರ್ಕಾರ ಸಂಚಾರ ವ್ಯವಸ್ಥೆ ಸುಧಾರಣೆಗೆ ಮಾತ್ರ ಬಳಸಿದಾಗ ಒಂದಷ್ಟು ನಿರೀಕ್ಷಿತ ಫ‌ಲಿತಾಂಶ ಬರಲಿದೆ ಎಂದು ನಗರ ಸಂಚಾರ ತಜ್ಞ ಶ್ರೀಹರಿ ಅಭಿಪ್ರಾಯಪಡುತ್ತಾರೆ.

ಸಂಚಾರ ಪೊಲೀಸರ ಸಿದ್ಧತೆ: ದಂಡ ಮೊತ್ತ ಹೆಚ್ಚಳ ಹಾಗೂ ಸಂಚಾರ ನಿಯಮಗಳ ಕಡ್ಡಾಯ ಪಾಲನೆ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಮಾರ್ಗದರ್ಶನದಲ್ಲಿ ಮೂರು ವಿಭಾಗಗಳ ಡಿಸಿಪಿಗಳು, ಎಸಿಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳ ನೇತೃತ್ವದ ತಂಡಗಳು ಹಲವು ದಿನಗಳಿಂದ ನಡೆಸುತ್ತಿವೆ. ಕ್ಯಾಬ್‌ ಚಾಲಕರ ಸಂಘ, ಆಟೋಚಾಲಕರ ಸಂಘ, ಚಾಲಕರ ಜತೆ ಸರಣಿ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಮತ್ತೊಂದೆಡೆ, ನಗರದ 44 ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ದಂಡ‌ ಮೊತ್ತದ ಹೆಚ್ಚಳದ ಬಗ್ಗೆ ಪ್ರಮುಖ ಸ್ಥಳಗಳಲ್ಲಿ ನಾಮಫ‌ಲಕಗಳ ಅಳವಡಿಕೆ ಮಾಡಲಾಗುತ್ತಿದೆ. ಭಿತ್ತಿಪತ್ರ (ಪಾಂಪ್ಲೆಟ್ಸ್‌) ಹಂಚುವ ಕಾರ್ಯ ಕೂಡ ನಡೆಯುತ್ತಿದೆ.

ಜನರ ಸಹಕಾರ ಮುಖ್ಯ: ಅತಿ ಹೆಚ್ಚು ದಂಡ ಸಂಗ್ರಹ ಸಂಚಾರ ಪೊಲೀಸರ ಗುರಿಯಲ್ಲ. ವಾಹನ ಸವಾರರ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕಡ್ಡಾಯ ಪಾಲನೆ ನಮ್ಮ ಆಧ್ಯತೆಯಾಗಿದೆ ಎಂದು ಸಂಚಾರ ಪೊಲೀಸ್‌ ವಿಭಾಗ ಸ್ಪಷ್ಟಪಡಿಸಿದೆ. ಅಜಾಗರೂಕ ಚಾಲನೆ, ಸಂಚಾರ ನಿಯಮಗಳ ಉಲ್ಲಂಘನೆಯಿಂದ ಹಲವು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಈಗಾಗಲೇ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಹಿಂದಿನಿಂದಲೂ ಹಲವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈಗ ದಂಡದ ಮೊತ್ತ ಹೆಚ್ಚಳದ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಜನ ತಮ್ಮ ಜವಾಬ್ದಾರಿ ನಿಭಾಯಿಸಿದರೆ ನಮಗೆ ಹೆಚ್ಚು ಸಂತೋಷವಾಗಲಿದೆ ಎಂದು ಸಂಚಾರ ವಿಭಾಗದ ಹಿರಿಯ ಆಧಿಕಾರಿ ಹೇಳಿದ್ದಾರೆ.

ದಂಡವೇ ಪರಿಹಾರವಲ್ಲ: ಅಪಘಾತ, ಸಂಚಾರ ನಿಯಮಗಳ ಉಲ್ಲಂಘನೆ ತಪ್ಪಿಸಲು ಅತಿಹೆಚ್ಚು ದಂಡ ವಿಧಿಸುವುದು ಪರಿಹಾರವಲ್ಲ. ದಂಡ ಮೊತ್ತ ಹೆಚ್ಚಳದಿಂದ ಲಂಚಗುಳಿತನ ಹೆಚ್ಚಾಗಲು ಕಾರಣವಾಗಲಿದೆ. ಬೆಂಗಳೂರಿನಲ್ಲಿ 20ರಿಂದ 30 ಲಕ್ಷ ರೂ. ವಾಹನಗಳು ಸಂಚರಿಸುವ ಸಾಮರ್ಥ್ಯದ ರಸ್ತೆಗಳಿವೆ. ಆದರೆ, 70 ಲಕ್ಷ ವಾಹನಗಳು ಸಂಚರಿಸುತ್ತದೆ. ಹಾಗಾದರೆ ಅಗತ್ಯ ರಸ್ತೆಗಳನ್ನು ಕಲ್ಪಿಸಬೇಕಾದ ಸರ್ಕಾರ ಏನು ಮಾಡುತ್ತಿದೆ. ಬೆಂಗಳೂರಿನಲ್ಲಿ ಪಾರ್ಕಿಂಗ್‌ ಜಾಗವೇ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಅದನ್ನು ಬಿಟ್ಟು ಈಗ ದಂಡದ ಮೂಲಕ ವಾಹನ ಸವಾರರಿಗೆ ಹೊರೆಹಾಕಲು ನಿರ್ಧರಿಸಿರುವುದು ಯಾವ ನ್ಯಾಯ ಎಂದು ಬೆಂಗಳೂರು ಆಟೋಚಾಲಕರ ಸಂಘದ ಅಧ್ಯಕ್ಷ ರುದ್ರಮೂರ್ತಿ ಬೇಸರವ್ಯಕ್ತಪಡಿಸಿದರು.

ಅಗತ್ಯಬಿದ್ದರೆ ಕಾನೂನು ಹೋರಾಟ: ಸರ್ಕಾರ ಹೆಚ್ಚು ದಂಡ ನಿಗದಿಪಡಿಸುವ ಬದಲಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜನರಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಿತ್ತು. ಸಂಚಾರ ಪೊಲೀಸರು ಸಭೆಗಳನ್ನು ಕರೆದು ದಂಡದ ಮೊತ್ತದ ಬಗ್ಗೆ ವಿವರಣೆ ನೀಡುತ್ತಿದ್ದಾರೆ. ಜು.20ರಿಂದ ಹೊಸ ದಂಡದ ಮೊತ್ತ ಜಾರಿಗೊಳಿಸಲಿದ್ದಾರೆ. ಅಸೋಸಿಯೇಷನ್‌ಲ್ಲಿ ಈ ಬಗ್ಗೆ ತೀರ್ಮಾನಿಸಿ ಅಗತ್ಯ ಬಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ರುದ್ರಮೂರ್ತಿ ಹೇಳಿದರು.

ದಂಡ ಪಾವತಿ ಚೀಟಿ ತೋರಿಸಿ ಎಸ್ಕೇಪ್‌ ಆಗಲು ಅವಕಾಶವಿಲ್ಲ: ಹೆಲ್ಮೆಟ್‌ ರಹಿತ ಬೈಕ್‌ ಸವಾರರು ದಿನದಲ್ಲಿ ಒಮ್ಮೆ ಸಂಚಾರ ಪೊಲೀಸರಿಗೆ ಸಿಕ್ಕಿಬಿದ್ದಾಗ 100 ರೂ. ದಂಡ ಪಾವತಿಸಿ ರಸೀದಿ ಪಡೆಯುತ್ತಾರೆ. ಅದೇ ರಸೀದಿಯನ್ನು ದಿನವೆಲ್ಲಾ ತನ್ನನ್ನು ಹಿಡಿಯುವ ಸಂಚಾರ ಪೊಲೀಸರಿಗೆ ತೋರಿಸಿ ನಿಯಮ ಉಲ್ಲಂಘಿಸುತ್ತಲೇ ಸುತ್ತಾಡುತ್ತಾರೆ. ಇದಕ್ಕೆ ಸಂಚಾರ ಪೊಲೀಸರು ಕಡಿವಾಣ ಹಾಕುತ್ತಿಲ್ಲ ಎಂಬ ಆರೋಪವಿದೆ. ಆದರೆ, ಒಮ್ಮೆ ದಂಡ ಪಾವತಿಸಿದರೆ ಆ ದಿನವಿಡೀ ಮತ್ತೊಮ್ಮೆ ದಂಡ ಹಾಕುವಂತಿಲ್ಲ ಎಂಬ ನಿಯಮವೇನೂ ಇಲ್ಲ. ದಂಡ ಪಾವತಿ ಚೀಟಿ ಹೊಂದಿರುವ ಸವಾರ ಅಥವಾ ಚಾಲಕ ಅದೇ ದಿನ ಮತ್ತೊಮ್ಮೆ ನಿಯಮ ಉಲ್ಲಂಘಿಸಿದರೆ ದಂಡ ಪಾವತಿಸಲೇಬೇಕು. ದಿನದಲ್ಲಿ 10 ಬಾರಿ ನಿಯಮ ಉಲ್ಲಂಘಿಸಿದರೆ ಹತ್ತೊ ಬಾರಿ ದಂಡ ಪಾವತಿಸಬೇಕು ಎಂದು ಹಿರಿಯ ಸಂಚಾರ ಪೊಲೀಸ್‌ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಜನ ಸ್ವಯಂಪ್ರೇರಿತರಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ನಿಯಮಗಳ ಉಲ್ಲಂಘನೆಗೆ ಹೆಚ್ಚಳವಾಗಿರುವ ದಂಡದ ದರ ಹಾಗೂ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆಟೋ ಚಾಲಕರು, ಕ್ಯಾಬ್‌ ಬಾಲಕ ಸಂಘಟನೆಗಳ ಜತೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಜತೆಗೆ ಭಿತ್ತಿಪತ್ರಗಳನ್ನೂ ಹಂಚಲಾಗುತ್ತಿದೆ.
-ಪಿ.ಹರಿಶೇಖರನ್‌, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ

ಸಂಚಾರ ನಿಯಮಗಳ ಪಾಲನೆ ಎಲ್ಲರ ಕರ್ತವ್ಯ. ಆದರೆ, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮ ಪಾಲನೆ ಕಡ್ಡಾಯಕ್ಕೆ ದಂಡ ಮೊತ್ತ ಹೆಚ್ಚಳ ಪರಿಹಾರವಲ್ಲ. ಇದು ಸಾಮಾನ್ಯ ಜನರಿಗೆ ಹೊರೆಯಾಗುತ್ತದೆ. ಲಂಚಗುಳಿತನ ಜಾಸ್ತಿಯಾಗಿ, ಪೊಲೀಸ್‌ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಪೊಲೀಸರು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ, ಜನಸ್ನೇಹಿಯಾಗಿ ನಡೆದುಕೊಳ್ಳಬೇಕು.
-ತನ್ವೀರ್‌ ಪಾಷ, ಓಲಾ, ಉಬರ್‌ ಚಾಲಕರು, ಮಾಲೀಕರ ಸಂಘದ ರಾಜ್ಯಾಧ್ಯಕ್ಷ

ಹೆಚ್ಚಾಗಿರುವ ದಂಡದ ಮೊತ್ತ
ಪ್ರಸ್ತುತ ದಂಡ ಪರಿಷ್ಕೃತ ದಂಡ (ರೂ.ಗಳಲ್ಲಿ)
ಅಪಾಯಕಾರಿ ವಾಹನ ಚಾಲನೆ/ಮೊಬೈಲ್‌ ಬಳಕೆ 300-500 1,000 ರಿಂದ 2,000
ಅತೀವೇಗ ಚಾಲನೆ 300 500ರಿಂದ 1,000
ವಿಮೆ ರಹಿತ ವಾಹನ ಚಾಲನೆ 500 1,000
ನೋಂದಣಿ ರಹಿತ ಚಾಲನೆ 1,500-3,000 5,000ರಿಂದ 10,000
ಅರ್ಹತೆ ಪ್ರಮಾಣಪತ್ರ ಇಲ್ಲದೆ ಚಾಲನೆ 500-4,000 2,000ರಿಂದ 5,000
ಅಸುರಕ್ಷಿತ ಚಾಲನೆ/ನಿಷೇಧಿತ ಪ್ರದೇಶದಲ್ಲಿ ನಿಲುಗಡೆ 750 1,000

ನಿಯಮ ಉಲ್ಲಂಘನೆ ಪ್ರಕರಣಗಳು
ವರ್ಷ ಪ್ರಕರಣ
2017 99,22,437
2018 82,74,663
2019 35,41,350 (ಮೇ ಅಂತ್ಯ)

ಸಂಗ್ರಹಿಸಿದ ದಂಡದ ಮೊತ್ತ ವರ್ಷ ಮೊತ್ತ (ಕೋಟಿ ರೂ.)
2015 70.44
2016 66.97
2017 12.38
2018 81.25
2019 24.75 ( ಮೇ ಅಂತ್ಯ)

ಐದು ವರ್ಷಗಳಲ್ಲಿ ಅಪಘಾತಗಳು
ವರ್ಷ ಅಪಘಾತ ಮೃತರು ಗಾಯಾಳುಗಳು
2015 4828 740 4047
2016 5333 754 4193
2017 5064 609 4256
2018 4611 663 4129
2019 1955 307 1780

* ಮಂಜುನಾಥ ಲಘುಮೇನಹಳ್ಳಿ

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RRN-Muni

Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.