ಫಲಿತಾಂಶ ತಿಳಿಯಲು ಕ್ಷಣಗಣನೆ
Team Udayavani, May 15, 2018, 12:22 PM IST
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ 26 ವಿಧಾನಸಭಾ ಕ್ಷೇತ್ರಗಳ ಮತ ಏಣಿಕೆ ಕೇಂದ್ರಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ಆರಂಭವಾಗಲಿದೆ.
ಜಯನಗರ ಹಾಗೂ ರಾಜರಾಜೇಶ್ವರಿ ನಗರ ಹೊರತುಪಡಿಸಿ 26 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಮತದಾನ ಪ್ರಕ್ರಿಯೆ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ. ಮತ ಏಣಿಕೆಯು ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜು, ವಸಂತನಗರದ ಮೌಂಟ್ ಕಾರ್ಮಲ್ ಕಾಲೇಜು, ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜು ಹಾಗೂ ಶೇಷಾದ್ರಿ ರಸ್ತೆಯ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜುಗಳನ್ನು ಗುರುತಿಸಲಾಗಿದೆ.
ಮತ ಎಣಿಕೆ ಪ್ರಕ್ರಿಯೆ ಹೇಗೆ?: ಮತ ಏಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಿ ಮೊದಲಿಗೆ ಅಂಚೆ ಮತಗಳ ಏಣಿಕೆಯಾಗಲಿದ್ದು, ಬೆಳಗ್ಗೆ 8.30ಕ್ಕೆ ಇವಿಎಂಗಳ ಮತ ಏಣಿಕೆಯಾಗಲಿದೆ. ಅದಕ್ಕೂ ಮೊದಲು ಎಲ್ಲ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಇವಿಎಂಗಳಿಗೆ ಹಾಕಲಾಗಿರುವ ಮೊಹರು ತೆಗೆಯದಿರುವುದು ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರದಲ್ಲಿ ಪ್ರತಿಯೊಂದು ವಿಧಾನಸಭೆಗೆ ನಿಗದಿಪಡಿಸಿರುವ 14 ಟೇಬಲ್‌ಗಳಲ್ಲಿ ಇವಿಎಂಗಳು ಪೂರೈಕೆಯಾಗಲಿದ್ದು, ಮತ ಏಣಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಚುನಾವಣಾಧಿಕಾರಿಗಳು ಮೊದಲಿಗೆ ಇವಿಎಂಗಳಲ್ಲಿ ದಾಖಲಾಗಿರುವ ಒಟ್ಟು ಮತಗಳನ್ನು ಪಡೆಯಲಿದ್ದು, ನಂತರದಲ್ಲಿ ಅಭ್ಯರ್ಥಿವಾರು ದಾಖಲಾಗಿರುವ ಮತಗಳ ವಿವರವನ್ನು ಬರೆದುಕೊಳ್ಳಲಿದ್ದಾರೆ. ಅಂತಿಮ ಸುತ್ತಿನ ನಂತರದಲ್ಲಿ ಯಾವುದೇ ದೋಷವಿಲ್ಲ ಎಂದು ಕಂಡಬಂದಾಗ ಚುನಾವಣಾಧಿಕಾರಿಗಳು ಅಭ್ಯರ್ಥಿಗಳು ಪಡೆದ ಮತಗಳ ಮಾಹಿತಿ ನೀಡಲಿದ್ದಾರೆ.
ಸಿಬ್ಬಂದಿಗೆ ಕೊನೆಯ ಹಂತದ ತರಬೇತಿ: ಮತ ಏಣಿಕೆ ಪಕ್ರಿಯೆಗೆ ಆಯ್ಕೆಯಾಗಿರುವ ಸಿಬ್ಬಂದಿಗೆ ಈಗಾಗಲೇ ಎರಡು ಬಾರಿ ತರಬೇತಿ ನೀಡಲಾಗಿದ್ದು, ಸೋಮವಾರ ಸಂಜೆಯೂ ನಗರದ ವಿವಿಧ ಭಾಗಗಳಲ್ಲಿ ತರಬೇತಿ ಏರ್ಪಡಿಸಲಾಗಿತ್ತು. ನೂರಾರು ಸಿಬ್ಬಂದಿ ತರಬೇತಿ ಪಡೆಯಲು ಬಂದರೂ ತರಬೇತಿ ನೀಡಬೇಕಾದ ಚುನಾವಣಾಧಿಕಾರಿಗಳು ಬರದ ಹಿನ್ನೆಲೆಯಲ್ಲಿ ಸಿಬ್ಬಂದಿಯಲ್ಲಿ ಗೊಂದಲ ಉಂಟಾಗಿತ್ತು ಎಂದು ಕೆಲವರು ದೂರಿದ್ದಾರೆ.
ಯಾವ ಕ್ಷೇತ್ರದ ಮತ ಏಣಿಕೆ ಎಲ್ಲಿ?: ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ
ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ: ಕೆ.ಆರ್.ಪುರ, ಮಹಾಲಕ್ಷ್ಮಿ ಬಡಾವಣೆ, ಮಲ್ಲೇಶ್ವರ, ಹೆಬ್ಟಾಳ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ.ರಾಮನ್ ನಗರ
ಎಸ್‌ಎಸ್‌ಎಂಆರ್‌ವಿ ಕಾಲೇಜು, ಜಯನಗರ: ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿ.ಟಿ.ಎಂ.ಬಡಾವಣೆ, ಬೊಮ್ಮನಹಳ್ಳಿ
ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶೇಷಾದ್ರಿ ರಸ್ತೆ: ಯಲಹಂಕ, ಯಶವಂತಪುರ, ಟಿ.ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.