ತೋಟಗಾರಿಕೆ ಮೇಳಕ್ಕೆ ಕ್ಷಣಗಣನೆ
Team Udayavani, Feb 5, 2020, 3:07 AM IST
ಬೆಂಗಳೂರು: ದೇಶದ ಅತಿದೊಡ್ಡ ತೋಟಗಾರಿಕಾ ಮೇಳಕ್ಕೆ ಈಗ ಕ್ಷಣಗಣನೆ. ಇಲ್ಲಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಬುಧವಾರದಿಂದ ನಡೆಯಲಿರುವ ನಾಲ್ಕು ದಿನಗಳ ನಾಲ್ಕನೇ ರಾಷ್ಟ್ರೀಯ ತೋಟಗಾರಿಕೆ ಕೃಷಿ ಮೇಳಕ್ಕೆ ಸಕಲ ರೀತಿ ಸಜ್ಜಾಗಿದೆ.
ಸಿಪ್ಪೆ ಸಹಿತ ತಿನ್ನುವ ಬಟಾಣಿ, ಕೆಜಿಗಟ್ಟಲೆ ತೂಗುವ ಸೀತಾಫಲ-ಸೀಬೆ, ಹೂವಿನೊಂದಿಗೆ ಸಸಿಗಳನ್ನೂ ನೀಡುವ ಹೂವುಗಳು, ನೆರೆ ಮತ್ತು ಬರ ಎರಡನ್ನೂ ಸಹಿಸಿಕೊಳ್ಳುವ ಸಾಮರ್ಥ್ಯವುಳ್ಳ ತರಕಾರಿ ತಳಿಗಳು ಇಂತಹ ಹತ್ತುಹಲವು ಕೌತುಕಗಳ ಕೇಂದ್ರಬಿಂದು ತೋಟಗಾರಿಕೆ ಮೇಳ ಆಗಿದೆ.
ದೇಶದ ಮೂಲೆ ಮೂಲೆಗಳಿಂದ ಸಾವಿರಾರು ರೈತರು, ವಿಜ್ಞಾನಿಗಳು, ತಂತ್ರಜ್ಞರು ಈ ಮೇಳಕ್ಕೆ ಸಾಕ್ಷಿಯಾಗಲಿದ್ದಾರೆ. 80ಕ್ಕೂ ಅಧಿಕ ತರಕಾರಿಗಳು, 25 ಹಣ್ಣುಗಳು, 30 ಹೂವಿನ ಬೆಳೆಗಳು ಸೇರಿದಂತೆ 150ಕ್ಕೂ ಅಧಿಕ ಪ್ರಾತ್ಯಕ್ಷಿಕೆಗಳು, 250ಕ್ಕೂ ಅಧಿಕ ಮಳಿಗೆಗಳು, ವಿಶೇಷ ವಿನ್ಯಾಸದ ಕೆರೆ-ಹೊಂಡಗಳು, ಸಮಗ್ರ ಕೃಷಿ ಪದ್ಧತಿ, ತೋಟಗಾರಿಕೆ ತಂತ್ರಜ್ಞಾನಗಳು ಸೇರಿದಂತೆ ತೋಟ ಗಾರಿಕೆ ಲೋಕವೇ ಅನಾವರಣಗೊಳ್ಳಲಿದೆ.
ಕೇಂದ್ರದ ಮಹತ್ವಾಕಾಂಕ್ಷಿ ರೈತರ ಆದಾಯ ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ಅಗ್ಗದ ಬೆಲೆಯಲ್ಲಿ ಹೈಟೆಕ್ ಬೇಸಾಯ ತಂತ್ರಜ್ಞಾನಗಳನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐ ಎಚ್‌ಆರ್) ಈ ಮೇಳದಲ್ಲಿ ಪರಿಚಯಿಸಲಾಗುತ್ತಿದೆ. ಕಳೆದ ಬಾರಿ 55 ಬೆಳೆಗಳ 289 ತಳಿಗಳನ್ನು ಪ್ರದರ್ಶಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ಪಟ್ಟಿಗೆ ಇನ್ನೂ 15-20 ತಳಿಗಳು ಸೇರ್ಪಡೆಯಾಗಿವೆ.
ಈ ಬಾರಿಯ ಮೇಳದ ಶೀರ್ಷಿಕೆ “ಕೃಷಿಯನ್ನು ಉದ್ದಿಮೆಯ ನ್ನಾಗಿಸಲು ತೋಟಗಾರಿಕೆ’ ಆಗಿದೆ. ಇದಕ್ಕೆ ಪೂರಕವಾಗಿ ಕೃಷಿ ಯನ್ನು ಉದ್ಯಮವನ್ನಾಗಿ ಮಾಡಿ ಕೊಂಡ 425ಕ್ಕೂ ಅಧಿಕ ಕಂಪನಿಗಳು ಐಐಎಚ್‌ಆರ್‌ನಿಂದಲೇ 850ಕ್ಕೂ ಅಧಿಕ ತಂತ್ರಜ್ಞಾನ ಗಳಿಗೆ ಪರವಾನಗಿ ಪಡೆದಿವೆ. ಅವುಗಳ ಉತ್ಪನ್ನಗಳ ಪ್ರದರ್ಶನವೂ ಇಲ್ಲಿ ಇರಲಿದೆ.
ಕೇವಲ ಎಂಟು ತಂತ್ರಜ್ಞಾನಗಳು ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಸುಮಾರು 13 ಸಾವಿರ ಕೋಟಿ ರೂ. ಆದಾಯ ತಂದುಕೊಡುತ್ತಿವೆ. ಒಂದಲ್ಲಾ ಎರಡಲ್ಲ ಕಳೆದ ಐದು ವರ್ಷಗಳಿಂದ ಈ ಆದಾಯ ಸತತವಾಗಿ ಹರಿದುಬರುತ್ತಿದೆ. ಸಂಸ್ಥೆ ಅಭಿವೃದ್ಧಿಪಡಿ ಸಿದ ಅವುಗಳ ಪ್ರದರ್ಶನವನ್ನೂ ಇಲ್ಲಿ ಕಾಣ ಬಹುದು. 25ಕ್ಕೂ ಹೆಚ್ಚು ರಾಜ್ಯಗಳಿಂದ 50 ಸಾವಿರಕ್ಕೂ ಅಧಿಕ ರೈತರು ಭೇಟಿ ನೀಡುವ ನಿರೀಕ್ಷೆ ಇದೆ.
ಪ್ರವೇಶ ಉಚಿತ: ಯಶವಂತಪುರ, 8ನೇ ಮೈಲಿ, ಜಾಲಹಳ್ಳಿ ಕ್ರಾಸ್ ಮತ್ತಿತರ ಕಡೆಯಿಂದ ಹೆಸರಘಟ್ಟಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸೇವೆ
ಮೇಳದ ಸಮಯ: ಬೆಳಗ್ಗೆ 10ರಿಂದ ಸಂಜೆ 6
ಪ್ರದರ್ಶನದ ಆಕರ್ಷಣೆ
-ಬಿತ್ತನೆ ಬೀಜಗಳು ಮತ್ತು ನರ್ಸರಿ ಗಿಡಗಳು
-ರಸಗೊಬ್ಬರ/ ಸಸ್ಯ ಔಷಧಿಗಳು
-ತೋಟಗಾರಿಕೆ ಉಪಕರಣಗಳು
-ಹಸಿರುಮನೆ, ನೆರಳು ಮನೆ ಒಳಗೊಂಡ ನಿಖರ ಕೃಷಿ ವಿಧಾನಗಳು
-ನಗರ ತೋಟಗಾರಿಕೆ ಕಾರ್ಯಾಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.