ಖೋಟಾ ನೋಟು ಕೇಸ್: ಮೂವರಿಗೆ ಜೈಲು ಶಿಕ್ಷೆ
6 ವರ್ಷ ಜೈಲು, ತಲಾ 10 ಸಾವಿರ ರೂ. ದಂಡ, ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ
Team Udayavani, Dec 4, 2020, 9:08 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಖೋಟಾ ನೋಟು ದಂಧೆ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದಮೂವರು ಆರೋಪಿಗಳಿಗೆ ಆರು ವರ್ಷ ಜೈಲು ಹಾಗೂ ತಲಾ 10 ಸಾವಿರ ರೂ.ದಂಡ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಪಶ್ಚಿಮ ಬಂಗಾಳದ ಮೊಹಮದ್ ಸಾಜಿದ್ ಅಲಿ, ಅಬ್ದುಲ್ ಖಾದಿರ್, ದೇವನಹಳ್ಳಿ ವಿಜಯಪುರದ ಎಂ.ಎನ್ ರಾಜು ಶಿಕ್ಷೆಗೆ ಗುರಿಯಾದವರು. 2018ರಅಗಸ್ಟ್‌ನಲ್ಲಿಮಾದನಾಯಕಹಳ್ಳಿಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಪತ್ತೆಯಾದ ಖೋಟಾನೋಟು ದಂಧೆಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದ ಎನ್‌ಐಎ ಅಧಿಕಾರಿಗಳು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ಆರ್‌ಹುಲಗಿ ಅವರು, ಆರೋಪಿಗಳ ವಿರುದ್ಧಪ್ರಾಸಿಕ್ಯೂಶನ್ ಸಲ್ಲಿಸಿದ್ದ ಸಾಕ್ಷ್ಯಾಧಾರಗಳುಹಾಗೂ ಪ್ರಾಸಿಕ್ಯೂಶನ್ ಪರ ವಕೀಲರ ವಾದವನ್ನು ಪುರಸ್ಕರಿಸಿದ್ದಾರೆ. ಜತೆಗೆ,ಆರೋಪಿಗಳು ದೇಶದ ಆರ್ಥಿಕತೆಗೆ ಧಕ್ಕೆತರುವಂತಹ ಗಂಭೀರ ಕೃತ್ಯ ಎಸಗಿರುವಬಗ್ಗೆ ಸಾಕ್ಷ್ಯಾಧಾರಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟು ಆರೋಪಿಗಳಾದ ಮೊಹಮದ್ ಸಾಜಿದ್ ಅಲಿ, ಅಬ್ದುಲ್ ಖಾದಿರ್, ಎಂ.ಎನ್ ರಾಜುಗೆ ತಲಾ ಆರುವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಹೈದರಾಬಾದ್ ನಗರ ಪಾಲಿಕೆ ಚುನಾವಣೆ: ಇಂದು ಮತ ಎಣಿಕೆ, ಬಿಜೆಪಿ- ಟಿಆರ್ ಎಸ್ ಪ್ರತಿಷ್ಠೆ
ಪ್ರಕರಣದಲ್ಲಿ ಎನ್‌ಐಎ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪಿ. ಪ್ರಸನ್ನಕುಮಾರ್ ವಾದಿಸಿದ್ದರು. “ಪ್ರಕರಣದಲ್ಲಿನ ಮೊದಲ ಆರೋಪಿ ಸಾಜಿದ್ ಅಲಿ, ಎರಡನೇ ಆರೋಪಿ ಎಂ.ಎನ್ ರಾಜು, ಆರನೇ ಆರೋಪಿಅಬ್ದುಲ್ ಖಾದಿರ್‌ಗೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಪ್ರಕರಣದ ಇತರ ಆರೋಪಿಗಳಾದ ವನಿತಾ ಜೆ. ಹಾಗೂ ಇತರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣಾಪ್ರಕ್ರಿಯೆನಡೆಯುತ್ತಿದೆ’ಎಂದು ಸರ್ಕಾರಿ ವಿಶೇಷ ಅಭಿಯೋಜಕರಾದ ಪಿ.ಪ್ರಸನ್ನಕುಮಾರ್ ತಿಳಿಸಿದರು.
ಬಾಂಗ್ಲಾದಿಂದ ಬರುತ್ತಿತ್ತು ಖೋಟಾನೋಟು! :
ರಾಜ್ಯದಲ್ಲಿ ಖೋಟಾನೋಟು ದಂಧೆ ಚಲಾವಣೆ ಸುಳಿವು ಆಧರಿಸಿ ತನಿಖೆ ನಡೆಸುತ್ತಿದ್ದ ಎನ್‌ಐಎ ಅಧಿಕಾರಿಗಳು 2018ರ ಆಗಸ್ಟ್ 8ರಂದು ಅಲೂರಿನ ಫ್ಲ್ಯಾಟ್‌ವೊಂದರ ಮೇಲೆ ದಾಳಿ ನಡೆಸಿದ್ದರು. ಜತೆಗೆ, ಸ್ಥಳದಲ್ಲಿದ್ದ ಮೊಹಮದ್ ಸಾಜಿದ್ ಅಲಿ, ಎಂ.ಎನ್ ರಾಜು, ಗಂಗಾಧರ್ ಕೋಲ್ಕರ್ ಎಂಬಾತನನ್ನು ಬಂಧಿಸಿ 2.50 ಲಕ್ಷ ರೂ. ಖೋಟಾನೋಟುಗಳನ್ನು ಜಪ್ತಿ ಮಾಡಿದ್ದರು. ಮುಂದುವರಿದ ತನಿಖೆಯಲ್ಲಿ ಶ್ರೀರಾಮಪುರದ ವನಿತಾ, ಅಬ್ದುಲ್ ಖಾದಿರ್‌ನನ್ನು ಬಂಧಿಸಿದ್ದರು.ಖೋಟಾನೋಟು ಚಲಾವಣೆ ದಂಧೆಯಲ್ಲಿ ಚಾಳಿಬಿದ್ದ ಆರೋಪಿಯಾಗಿರುವ ಎಂ.ಎನ್ ರಾಜು ಪಶ್ಚಿಮ ಬಂಗಾಳದ ಮಾಲ್ಡಾ ಮೂಲದ ಸಾಜಿದ್ ಸಂಪರ್ಕ ಬೆಳೆಸಿಕೊಂಡಿದ್ದ. ಸಾಜಿದ್ ಅಲಿ ಹಾಗೂ ಆತನ ಸಹಚರರು ಬಾಂಗ್ಲಾದಿಂದ ಖೋಟಾನೋಟುಗಳನ್ನು ತರಿಸಿ ಅವುಗಳನ್ನು ಬೆಂಗಳೂರಿಗೆ ತಲುಪಿಸುತ್ತಿದ್ದರು. ಅದೇ ನೋಟುಗಳನ್ನು ಪಡೆದ ರಾಜು ತನ್ನ ಸಹಚರರ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದಹಲವು ಭಾಗಗಳಲ್ಲಿ ಚಲಾವಣೆ ಮಾಡುತ್ತಿದ್ದ. ಹೀಗೆ,2018ರ ಆಗಸ್ಟ್ ಎಂಟರಂದು ಪಶ್ಚಿಮ ಬಂಗಾಳದಿಂದ ಖೋಟಾ ನೋಟು ತಂದಿದ್ದ ಸಾಜಿದ್ ಅಲಿ ಎಂ.ಎನ್ ರಾಜುವಿನ ಫ್ಲ್ಯಾಟ್‌ನಲ್ಲಿ ತಂಗಿದ್ದ ಮಾಹಿತಿ ಆಧರಿಸಿ ಎನ್‌ಐಎ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Toxic: ಯಶ್ ಬರ್ತ್ ಡೇಗೆ ʼಟಾಕ್ಸಿಕ್ʼನಿಂದ ಸಿಗಲಿದೆ ಬಿಗ್ ಅಪ್ಡೇಟ್; ಫ್ಯಾನ್ಸ್ ಥ್ರಿಲ್
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.