ನಿಕೋಲಸ್‌ರಿಂದ ದೇಶಿ ಕಲೆ ವಿಶ್ವವಿಖ್ಯಾತ
Team Udayavani, Oct 10, 2019, 3:03 AM IST
ಬೆಂಗಳೂರು: ರಷ್ಯಾದಿಂದ ಭಾರತಕ್ಕೆ ವಲಸೆ ಬಂದಂತ ಶ್ರೇಷ್ಠ ಕಲಾವಿದ ಹಾಗೂ ದಾರ್ಶನಿಕನಾಗಿದ್ದ ನಿಕೋಲಸ್ ರೋರಿಚ್ ಅವರು ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವಂತ ನೂರಾರು ಕಲಾಕೃತಿ ರಚಿಸಿರುವುದು ಶ್ಲಾಘನೀಯ ಸಂಗತಿ ಎಂದು ಭಾರತದ ಆಹಾರ ನಿಗಮದ ಅಧ್ಯಕ್ಷ ಡಿ.ವಿ. ಪ್ರಸಾದ್ ಹೇಳಿದರು.
ಕರ್ನಾಟಕ ಚಿತ್ರ ಕಲಾ ಪರಿಷತ್‌ನ ಡಿ. ದೇವರಾಜ್ ಅರಸ್ ಗ್ಯಾಲರಿಯಲ್ಲಿ ಶ್ರೇಷ್ಠ ರಷ್ಯನ್ ಕಲಾವಿದ ಹಾಗೂ ದಾರ್ಶನಿಕ ನಿಕೋಲಸ್ ರೋರಿಚ್ ಅವರ 145ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ರಷ್ಯಾದ ಮಾಸ್ಕೋದಲ್ಲಿನ ಓರಿಯಂಟಲ್ ಆರ್ಟ್ ಮ್ಯೂಜಿಯಂ, ಕರ್ನಾಟಕ ಚಿತ್ರಕಲಾ ಪರಿಷತ್ನ ಸಹಯೋಗದಲ್ಲಿ ಚೆನ್ನೈ ರಷ್ಯನ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರದಿಂದ ರಷ್ಯಾ-ಭಾರತದ ಉತ್ತಮ ಕಲೆ ಮತ್ತು ಸ್ನೇಹದ ಬೆಳಕು’ ಕಾರ್ಯಕ್ರದಡಿಯ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ರಷ್ಯಾದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ನಿಕೋಲಸ್ ಮೂಲತಃ ಚಿತ್ರ ಕಲಾವಿದರಾಗಿದ್ದರು. ಹೀಗಾಗಿ ಸಾವಿರಾರು ಶ್ರೇಷ್ಠ ಕಲಾಕೃತಿಗಳ ಮೂಲಕ ರಷ್ಯಾ ಹಾಗೂ ಭಾರತದಲ್ಲಿ ನಿಕೋಲಸ್ ರೋರಿಚ್ ತಮ್ಮದೇಯಾದ ಘನತೆ, ಗೌರವ ಪಡೆದಿದ್ದಾರೆ ಎಂದರು.
ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ, ದಾರ್ಶನಿಕ ನಿಕೋಲಸ್ ರೋರಿಚ ಕುರಿತಾದ ಸಾವಿರಾರು ಕಲಾಕೃತಿಯಲ್ಲಿ ಕೆಲವನ್ನು ಮಾತ್ರ ಆಯ್ಕೆ ಮಾಡಿದ್ದು, 30ಕ್ಕೂ ಅಧಿಕ ಕಲಾಕೃತಿಗಳನ್ನು ಅ. 9-13 ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ನ ಡಿ.ದೇವರಾಜ್ ಅರಸ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು. ಹಿರಿಯ ಕಲಾವಿದ ಕೆ. ಚಂದ್ರನಾಥ ಆಚಾರ್ಯ, ಚೆನ್ನೈನ ರಷ್ಯನ್ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರದ ನಿರ್ದೇಶಕ ಗೆನ್ನಾಡಿ ರಾಗ್ಲೆàವ್ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.