ಫೇಸ್ಬುಕ್ ಬಳಕೆ ವಿಚಾರಕ್ಕೆ ದಂಪತಿ ಆತ್ಮಹತ್ಯೆ
Team Udayavani, Jun 12, 2018, 11:45 AM IST
ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ಬುಕ್ ಬಳಕೆ ಸಂಬಂಧ ನಡೆಯುತ್ತಿದ್ದ ಜಗಳದಿಂದ ಬೇಸತ್ತು ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಹಾಸನ ಮೂಲದ ಅನೂಪ್ (34) ಮತ್ತು ಸೌಮ್ಯಾ (23) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಸೌಮ್ಯಾ ಅವರು ಫೇಸ್ಬುಕ್ ಬಳಕೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ವಿಚಾರವಾಗಿ ದಂಪತಿ ನಡುವೆ ಭಾನುವಾರ ರಾತ್ರಿ ಜಗಳ ನಡೆದಿದ್ದು, ಸೋಮವಾರ ಬೆಳಗ್ಗೆ ಇಬ್ಬರು ಪ್ರತ್ಯೇಕ ಕೊಠಡಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತನಿಖೆ ನಂತರ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದರು.
ಹಾಸನದ ಅನೂಪ್ ಕಳೆದ 10 ವರ್ಷಗಳಿಂದ ಬಾಗಲುಗುಂಟೆ ಠಾಣೆ ವ್ಯಾಪ್ತಿಯ ರಾಮಯ್ಯ ಲೇಔಟ್ನಲ್ಲಿ ವಾಸವಾಗಿದ್ದು, ಪೀಣ್ಯದ ಕೋಳಿ ಫಾರಂವೊಂದರಲ್ಲಿ ಕೆಲಸ ಮಡುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಸೌಮ್ಯಾರನ್ನು ವಿವಾಹವಾಗಿದ್ದು, ಗಂಡು ಮಗು ಇದೆ. ವರ್ಷದ ಹಿಂದೆ ಕರಿಯಪ್ಪ ಎಂಬುವವರ ನೆಲಮಹಡಿಯ ಮನೆಯನ್ನು ಆರು ಲಕ್ಷ ರೂ.ಗೆ ಭೋಗ್ಯಕ್ಕೆ ಪಡೆದುಕೊಂಡಿದ್ದ ಅನೂಪ್, ಕುಟುಂಬದೊಂದಿಗೆ ವಾಸವಿದ್ದರು ಎಂದು ಪೊಲೀಸರು ತಿಳಿಸಿದರು.
ಫೇಸ್ಬುಕ್ ಜಗಳ: ಅನೂಪ್ ಮತ್ತು ಸೌಮ್ಯಾ ಫೇಸ್ಬುಕ್ ಬಳಸುತ್ತಿದ್ದರು. ಆದರೆ, ಸೌಮ್ಯಾ ಅವರು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸದಾ ಹೊಸ ಸ್ನೇಹಿತರನ್ನು ಮಾಡಿಕೊಂಡು, ಚಾಟ್ನಲ್ಲಿ ನಿರತರಾಗಿರುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು.
ಭಾನುವಾರ ರಾತ್ರಿ ಕೂಡ ಇದೇ ವಿಚಾರವಾಗಿ ಇಬ್ಬರೂ ವಾಗ್ವಾದ ನಡೆಸಿದ್ದರು. ತಡರಾತ್ರಿ ಮನೆಯಿಂದ ಹೊರಬಂದ ಸೌಮ್ಯಾ, ಪತಿ ವಿರುದ್ಧ ಆರೋಪ ಮಾಡಿದ್ದರು. ಬಳಿಕ ಮನೆ ಮಾಲೀಕ ಕರಿಯಪ್ಪ ಅವರು ವಿಚಾರಿಸಿ ಮನೆಯೊಳಗೆ ಹೋಗುವಂತೆ ದಂಪತಿಗೆ ತಾಕೀತು ಮಾಡಿದ್ದರು.
ನಂತರ ಅನೂಪ್, ಸೌಮ್ಯಾ ಅವರ ಸಹೋದರ ರವಿಚಂದ್ರ ಅವರಿಗೆ ಕರೆ ಮಾಡಿ, “ನಿಮ್ಮ ಸಹೋದರಿ ಹೆಚ್ಚು ಫೇಸ್ಬುಕ್ ಬಳಕೆ ಮಾಡುತ್ತಾಳೆ. ಸದಾ ಅದರಲ್ಲೇ ಮುಳುಗಿರುತ್ತಾಳೆ. ಯಾವ ಕೆಲಸವನ್ನೂ ಮಾಡುವುದಿಲ್ಲ. ಈಕೆಯ ಸಹವಾಸ ಸಾಕಾಗಿದ್ದು, ಕರೆದುಕೊಂಡು ಹೋಗು’ ಎಂದು ಹೇಳಿದ್ದರು.
ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಸೌಮ್ಯಾ ಕೂಡ ರವಿಚಂದ್ರ ಅವರಿಗೆ ಕರೆ ಮಾಡಿ, “ಅನೂಪ್ ನನ್ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿದ್ದು, ಕೂಡಲೇ ಬಂದು ನನ್ನನ್ನು ಕರೆದುಕೊಂಡು ಹೋಗು’ ಎಂದು ಕೋರಿದ್ದರು. ಮಧ್ಯಾಹ್ನದ ಹೊತ್ತಿಗೆ ಬರುವುದಾಗಿ ರವಿಚಂದ್ರ ಹೇಳಿದ್ದರು.
ಅದರಂತೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ಸಹೋದರಿ ಮನೆಗೆ ಬಂದ ರವಿಚಂದ್ರ, ಬಹಳಷ್ಟು ಬಾರಿ ಬೆಲ್ ಮಾಡಿದರೂ ಬಾಗಿಲು ತೆರೆದಿಲ್ಲ. ಇಬ್ಬರ ಮೊಬೈಲ್ಗಳಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಬಳಿಕ ಮನೆ ಮಾಲೀಕರು ಹಾಗೂ ಸ್ಥಳೀಯರ ನೆರವಿನಿಂದ ಮನೆ ಬಾಗಿಲು ಒಡೆದು ಒಳ ಹೋದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ದಂಪತಿಯ ಮೂರು ವರ್ಷದ ಪುತ್ರ ಘಟನೆ ವೇಳೆ ಮಲಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.