ಉದ್ಯಾನಗಳಲ್ಲಿ ಜಾಥಾ ನಿಷೇಧಕ್ಕೆ ನ್ಯಾಯಾಲಯ ಮೊರೆ
Team Udayavani, Oct 6, 2017, 11:45 AM IST
ಬೆಂಗಳೂರು: ಕಬ್ಬನ್‌ಪಾರ್ಕ್ ಮತ್ತು ಲಾಲ್‌ಬಾಗ್ ಉದ್ಯಾನಗಳಲ್ಲಿ ಸರ್ಕಾರಿ ಅಥವಾ ಖಾಸಗಿ ಮ್ಯಾರಾಥಾನ್, ಜಾಥಾ, ನಡಿಗೆ ನಡೆಸುವುದಕ್ಕೆ ನಿಷೇಧ ಹೇರುವಂತೆ ಕೋರಿ ಹೈಕೋರ್ಟ್ ಮೊರೆ ಹೋಗುವುದಾಗಿ ಕಬ್ಬನ್‌ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದ್ದಾರೆ.
ಕಬ್ಬನ್‌ಪಾರ್ಕ್‌ನಲ್ಲಿ ಈಗಾಗಲೇ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಈ ನಡುವೆ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಮ್ಯಾರಾಥಾನ್, ಜಾಥಾ, ನಡಿಗೆ ಆಯೋಜಿಸುತ್ತಿದ್ದು, ಇಲ್ಲಿನ ಜೀವಸಂಕುಲಗಳಿಗೆ ಹಾನಿಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಲಿಕಾನ್ ಸಿಟಿಯ ಬಹುತೇಕ ಬಡಾವಣೆಗಳು ಶಬ್ದ, ವಾಯು ಮಾಲಿನ್ಯಕ್ಕೊಳಗಾಗಿವೆ. ಸಾಕಷ್ಟು ಸಸ್ಯ ಮತ್ತು ಪ್ರಾಣಿಸಂಕುಲ ಒಳಗೊಂಡಿರುವ ಲಾಲ್‌ಬಾಗ್ ಮತ್ತು ಕಬ್ಬನ್‌ಪಾರ್ಕ್‌ಗೆ ಶುದ್ಧಗಾಳಿ ಹುಡುಕುತ್ತಾ ಸಾವಿರಾರು ಮಂದಿ ಮುಂಜಾನೆ ಮತ್ತು ಸಂಜೆ ವೇಳೆ ವಾಯುವಿಹಾರಕ್ಕೆ ಬರುತ್ತಾರೆ.
ಖಾಸಗಿ ಕಂಪನಿಗಳು ವ್ಯವಹಾರಿಕ ಉದ್ದೇಶದಿಂದ ಮ್ಯಾರಾಥಾನ್‌ಗಳನ್ನು ಆಯೋಜಿಸುವ ಮೂಲಕ ಇಲ್ಲಿನ ಶುದ್ಧ ಪರಿಸರ ಮಲಿನಗೊಳ್ಳುವಂತೆ ಮಾಡುತ್ತಿವೆ. ಸರ್ಕಾರ ಈ ಉದ್ಯಾನಗಳಲ್ಲಿ ಯಾವುದೇ ರೀತಿಯ ಮ್ಯಾರಾಥಾನ್, ಜಾಥಾ, ನಡಿಗೆಗಳಿಗೆ ಅವಕಾಶ ನೀಡಬಾರದು ಎಂದು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.