ಶೇ.75 ಶುಲ್ಕ ತಾತ್ಕಾಲಿಕ ಪಾವತಿಗೆ ಕೋರ್ಟ್ ಆದೇಶ
Team Udayavani, Aug 2, 2018, 12:28 PM IST
ಬೆಂಗಳೂರು: ರಾಜ್ಯದ ಡೀಮ್ಡ್ (ಸ್ವಾಯತ್ತ) ವಿವಿಗಳ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಡೀಮ್ಡ್ ವಿವಿಗಳು ನಿಗದಿಪಡಿಸಿರುವ ಒಟ್ಟು ಶುಲ್ಕದಲ್ಲಿ ಶೇ.75ರಷ್ಟು ತಾತ್ಕಾಲಿಕವಾಗಿ ಪಾವತಿಸಬೇಕು ಎಂದು ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ.
ಈ ಆದೇಶವು ಶುಲ್ಕ ನಿಗದಿ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಒಂದೊಮ್ಮೆ ಸರ್ಕಾರದ ಶುಲ್ಕ ನಿಗದಿ ಸಮಿತಿಯ ವರದಿಯಂತೆ ಶುಲ್ಕ ಪ್ರಮಾಣ ಅಂತಿಮ ಗೊಂಡರೆ, ಡೀಮ್ಡ್ ವಿವಿಗಳು ವಿದ್ಯಾರ್ಥಿಗಳು ಪಾವತಿಸಿದ ಹೆಚ್ಚುವರಿ ಶುಲ್ಕವನ್ನು ಹಿಂಪಾವತಿಸಬೇಕು
ಅಥವಾ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕಕ್ಕೆ ಹೊಂದಾಣಿಕೆ ಮಾಡಬೇಕು. ಹಾಗೊಂದು ವೇಳೆ ಡೀಮ್ಡ್ ವಿವಿಗಳು ನಿಗದಿಪಡಿಸಿದ ಶುಲ್ಕ ಪ್ರಮಾಣ ಅಂತಿಮಗೊಂಡರೆ ಉಳಿಕೆ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ನ್ಯಾ. ಶೈಲೇಂದ್ರಕುಮಾರ್ ನೇತೃತ್ವದ ಶುಲ್ಕ ನಿಗದಿ ಸಮಿತಿಯು ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿಗದಿಡಪಸಿದ್ದ ಒಟ್ಟು ಶುಲ್ಕದ ಪ್ರಮಾಣದಲ್ಲಿ ಶೇ.8ರಷ್ಟು ಮಾತ್ರ ಹೆಚ್ಚಿಸಿದ್ದನ್ನು ಪ್ರಶ್ನಿಸಿ ಮೈಸೂರಿನ ಜೆ.ಎಸ್. ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಯೂನಿವರ್ಸಿಟಿ ಹಾಗೂ ಇತರೆ ನಾಲ್ಕು ಡೀಮ್ಡ್ ವಿವಿಗಳ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಬೋಪಣ್ಣ ಹಾಗೂ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ, ಈ ಮಧ್ಯಂತರ ಆದೇಶ ಕೊಟ್ಟಿತು.
ಶುಲ್ಕ ಪ್ರಮಾಣವನ್ನು ಶೇ.40ರಷ್ಟು ಹೆಚ್ಚಳ ಮಾಡುವಂತೆ ಕೋರಿದ್ದರೂ, ಅದನ್ನು ಪರಿಗಣಿಸಿದೇ ರಾಜ್ಯ ಸರ್ಕಾರದ ಶುಲ್ಕ ನಿಯಂತ್ರಣ ಸಮಿತಿಯು ಕೇವಲ ಶೇ.8ರಷ್ಟು ಶುಲ್ಕ ಹೆಚ್ಚಿಸಿರುವುದು ನ್ಯಾಯ ಸಮ್ಮತವಾಗಿಲ್ಲ ಎಂದು ಡೀಮ್ಡ್ ವಿವಿಗಳು ಕೋರಿದ್ದವು. ಜೊತೆಗೆ ನಮ್ಮದು ಡೀಮ್ಡ್ ವಿವಿಗಳಾಗಿದ್ದು, ಸರ್ಕಾರಿ ಕಾಲೇಜುಗಳೊಂದಿಗೆ ಹೋಲಿಕೆ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಡೀಮ್ಡ್ ವಿವಿಗಳು ಮತ್ತು ಖಾಸಗಿ ಕಾಲೇಜುಗಳು ತಮ್ಮ ಶುಲ್ಕ ನಿಗದಿ ಸಮಿತಿ ನಿಗದಿಪಡಿಸಿರುವ ಒಟ್ಟು ಶುಲ್ಕ ಪ್ರಮಾಣದ ಪೈಕಿ ಶೇ.75ರಷ್ಟು ಶುಲ್ಕ ತಮ್ಮಲ್ಲಿನ ಮೆಡಿಕಲ… ಹಾಗೂ ಎಂಜಿನಿಯರ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ತಾತ್ಕಲಿಕವಾಗಿ ಪಾವತಿಸಿಕೊಳ್ಳಬಹುದು. ಈ ಶುಲ್ಕ ಅರ್ಜಿಗಳ ಕುರಿತ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಡೀಮ್ಡ್ ವಿವಿಗಳ ಶುಲ್ಕ ಹೆಚ್ಚಾಗಿದೆ ಎಂಬ ತೀರ್ಪು ಬಂದರೆ, ಹೆಚ್ಚುವರಿ ಶುಲ್ಕ ಹಿಂಪಾವತಿಸಬೇಕು ಇಲ್ಲವೇ ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೊಂದಾಣಿಕೆ ಮಾಡಬೇಕು.
ಒಂದೊಮ್ಮೆ ಶುಲ್ಕ ನ್ಯಾಯಸಮ್ಮತವಾಗಿದೆ ಎಂಬ ಆದೇಶವಾದರೆ, ಹೆಚ್ಚುವರಿ ಶುಲ್ಕ ವಿದ್ಯಾರ್ಥಿಗಳು ಪಾವತಿಸಬೇಕು. ಇದಕ್ಕಾಗಿ ಉಳಿದ ಶೇ.25ರಷ್ಟು ಶುಲ್ಕವನ್ನು ಪಾವತಿಸುವ ದೃಢೀಕರಣ ಮುಚ್ಚಳಿಕೆಯನ್ನು ಡೀಮ್ಡ್ ವಿವಿಗಳು ಪ್ರವೇಶದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪಡೆದುಕೊಂಡಿರಬೇಕು ಎಂದು ಮಧ್ಯಂತರ ಆದೇಶದಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.