ಲೇಕ್‌ ವ್ಯೂವ್‌ : ಸೋಂಕಿತರ ಸಂಖ್ಯೆ 109ಕೆ ಏರಿಕೆ

ಕ್ಲಸ್ಟರ್ ಮಾದರಿ ಸೋಂಕು ಹೆಚ್ಚುವ ಸಾಧ್ಯತೆ ! ಅಗತ್ಯ ಕೊರೊನಾ ಮಾರ್ಗಸೂಚಿ ಪಾಲನೆಗೆ ಸಲಹೆ

Team Udayavani, Feb 18, 2021, 2:34 PM IST

Covid

ಬೆಂಗಳೂರು: ಬೊಮ್ಮನಹಳ್ಳಿಯ ಎಸ್‌ಎನ್‌ಎನ್‌ ರಾಜ್‌ ಲೇಕ್‌ ವ್ಯೂವ್‌ ವಸತಿ ಸಮುತ್ಛಯದಲ್ಲಿ ಬುಧ ವಾರ ಮತ್ತೆ ಆರು ಜನ ರಲ್ಲಿ ಕೊರೊನಾ ದೃಢಪಟ್ಟಿದ್ದು, ಆತಂಕದ ವಾತಾ ವ ರಣ ಸೃಷ್ಟಿಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ.

ವಸತಿ ಸಮುತ್ಛಯದಲ್ಲಿ ಮದುವೆ ವಾರ್ಷಿಕೋತ್ಸವ ಸಂಭ್ರಮಾಚರಣೆ ವೇಳೆ ಡೆಹರಾಡೂನ್‌ನಿಂದ ಬಂದ ವರೂ ಸೇರಿದ್ದರು. ಇವರಿಂದ ಇತರರಿಗೂ ಸೋಂಕು ದೃಢ ಪಟ್ಟಿದೆ. ವಸತಿ ಸಮು ತ್ಛಯದಲ್ಲಿರುವ 1,375 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಬುಧವಾರದ ವರೆ ಗೆ 109 ಜನ ರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ದೃಢ ಪಟ್ಟ 109 ಮಂದಿಯಲ್ಲಿ ಎಲ್ಲರೂ ಲಕ್ಷಣ ರಹಿತ ಸೋಂಕಿತರಾಗಿದ್ದಾರೆ.

ವಸತಿ ಸಮುತ್ಛಯದ ಒಳಗೇ ಪ್ರಾವಿಜನ್‌ ಸ್ಟೋರ್‌ ಇದ್ದು, ಇಲ್ಲಿಂದಲೇ ಹಣ್ಣು ಹಾಗೂ ತರಕಾರಿಯನ್ನು ನಿವಾ ಸಿ ಗಳು ಖರೀದಿ ಮಾಡುತ್ತಿದ್ದಾರೆ. ಔಷಧಿ ಬೇಕಾದರೆ ಮಾತ್ರ ಬಿಬಿಎಂಪಿ ಪೂರೈಕೆ ಮಾಡುತ್ತಿದೆ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ರಾಮಕೃಷ್ಣ ತಿಳಿಸಿದರು.

ವಸತಿ ಸಮು ತ್ಛ ಯದ ನಿವಾಸಿಗಳು ಅನಗತ್ಯವಾಗಿ ಓಡಾಡದಂತೆ ನಿರ್ಬಂಧಿಸಲಾ ಗಿದ್ದು, ಸಿಸಿ ಟಿವಿ ಮೂಲಕ ನಿಗಾ ವಹಿಸಲಾಗಿದೆ. ಸೋಂಕು ದೃಢ ಪ ಟ್ಟ ವ ರಲ್ಲಿ ಬಹುತೇಕರಿಗೆ ಸೋಂಕಿನ ಲಕ್ಷಣ ಇಲ್ಲ. ಆದರೆ, ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲ ರೀತಿ ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಈವರೆಗೂ ಲಸಿಕೆಯಿಂದ  16 ಮಂದಿಗೆ ಅಡ್ಡ ಪರಿಣಾಮ ಬೆಂಗಳೂರು: ಕೊರೊನಾ ಲಸಿಕೆ ವಿತರಣೆ ಆರಂಭದಿಂದ ಫೆ.17 ವರೆಗೂ ರಾಜ್ಯದಲ್ಲಿ 16 ಗಂಭೀರ ಅಡ್ಡಪರಿಣಾಮ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಬಳ್ಳಾರಿ ಮತ್ತು ಶಿವಮೊಗ್ಗ ಇಬ್ಬರು ಪುರುಷರು, ಬೆಳಗಾವಿ ಮಹಿಳೆ ಸೇರಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಇವರ ಸಾವಿಗೆ ಲಸಿಕೆ ಕಾರಣವಲ್ಲ ಎಂಬುದು ವೈದ್ಯಕೀಯ ತನಿಖೆಯಿಂದ ದೃಢಪಟ್ಟಿದೆ. ಉಳಿದ 13 ಪ್ರಕರಣಗಳಲ್ಲಿ ಆತಂಕದಿಂದ ಅಡ್ಡಪರಿಣಾಮ ಕಾಣಿಸಿಕೊಂಡಿದ್ದು, 12 ಮಂದಿಗೆ ಈಗಾಗಲೇ ಗುಣಮುಖರಾಗಿದ್ದಾರೆ. ಕೊಪ್ಪಳದ ಗಂಗಾವತಿಯ 35 ವರ್ಷದ ಆಶಾ ಕಾರ್ಯಕರ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡನೇ ಅಲೆ ಅಲ್ಲ; ರೂಪಾಂತರ ಇಲ್ಲ ಬೆಂಗಳೂರು: ನರ್ಸಿಂಗ್‌ ಕಾಲೇಜುಗಳು ಮತ್ತು  ಅಪಾರ್ಟ್‌ಮೆಂಟ್‌ಗಳಲ್ಲಿ ಏಕಾಏಕಿ ವರದಿಯಾಗಿರುವ ಕೊರೊನಾ ಪ್ರಕರಣಗಳು ಎರಡನೇ ಅಲೆ ಅಲ್ಲ  ಎಂದು ವೈರಾಣು ತಜ್ಞ ಮತ್ತು ಕೊರೊನಾ ನಿಯಂತ್ರಣ ಸರ್ಕಾರದ ಸಲಹಾ ಸಮಿತಿ ಸದಸ್ಯ ಡಾ.ವಿ.ರವಿ  ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆದ ಮಾಧ್ಯಮ ಕಾರ್ಯಗಾರದಲ್ಲಿ ಮಾತನಾಡಿ, ನಿರಂತರವಾಗಿ ಕೆಲ ಪ್ರದೇಶದಲ್ಲಿ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿ ಪರಿಸ್ಥಿತಿ ಕೈ ಮೀರಿದರೆ ಅದನ್ನು ಕೊರೊನಾ ಎರಡನೇ ಅಲೆ ಎನ್ನಲಾಗುತ್ತದೆ. ಸದ್ಯ ಬೆಂಗಳೂರು ಮತ್ತು ಮಂಗಳೂರಿನ ಎರಡು ಮೆಡಿಕಲ್‌ ಕಾಲೇಜು ಮತ್ತು ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲೆ ಸೀಮಿತ ಅವಧಿಯಲ್ಲಿ ಏಕಾಏಕಿ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು. ಹೀಗಾಗಿ, ಇವುಗಳನ್ನು ಕೊರೊನಾ ಎರಡನೇ ಅಲೆ ಎನ್ನಲು ಸಾಧ್ಯವಿಲ್ಲ. ಒಂದು ವೇಳೆ ಆ ಪ್ರದೇಶ ಅಥವಾ ಸುತ್ತಮುತ್ತಲಿನಲ್ಲಿ ಮುಂದಿನ ದಿನಗಳಲ್ಲಿಯೂ ಪ್ರಕರಣಗಳು ಹೆಚ್ಚುತ್ತಲೇ ಸಾಗಿದರೇ ಎರಡನೇ ಅಲೆ ಎನ್ನಬಹುದು ಎಂದರು.

ದಕ್ಷಿಣ ಆಫ್ರಿಕ, ಬ್ರೆಜಿಲ್‌ ರೂಪಾಂತರ ಇಲ್ಲ : ಡಿಸೆಂಬರ್‌ನಿಂದ ಈವರೆಗೂ 86 ಮಂದಿಯ ಗಂಟಲು ದ್ರವವನ್ನು ವಂಶವಾಹಿನಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 25 ಮಂದಿಯಲ್ಲಿ ಬ್ರಿಟನ್‌ ರೂಪಾಂತರ ಕೊರೊನಾ ವೈರಸ್‌ ಪತ್ತೆಯಾಗಿದೆ. ಈಗಾಗಲೇ ಇವರೆಲ್ಲಾ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೂ ದಕ್ಷಿಣ  ಆಫ್ರಿಕ ಮತ್ತ ಬ್ರೆಜಿಲ್‌ ರೂಪಾಂತರ ಕೊರೊನಾ ವೈರಸ್‌ ಪತ್ತೆಯಾಗಿಲ್ಲ ಎಂದು ವೈರಾಣು ತಜ್ಞ ಡಾ.ವಿ.ರವಿ ತಿಳಿಸಿದರು.

ಬುಧ ವಾರ 2,529 ಮಂದಿಗೆ ಲಸಿಕೆ ನಗ ರ ದಲ್ಲಿ ಬುಧ ವಾರ 1,591 ಜನ ಆರೋಗ್ಯ ಕಾರ್ಯಕರ್ತರು (ಎರಡನೇ ಸುತ್ತಿನ ಲಸಿಕೆ) ಸೇರಿ ದಂತೆ ಒಟ್ಟು 2,529 ಜನ ಕೋವಿಡ್‌ ಲಸಿಕೆ ಹಾಕಿ ಸಿ ಕೊಂಡಿ ದ್ದಾರೆ. 218 ಆರೋಗ್ಯ ಕಾರ್ಯಕರ್ತರು ಹಾಗೂ 720 ಕೋವಿಡ್‌ ಫ್ರೆಂಟ್‌ ಲೈನ್‌ ವಾರಿಯರ್ಸ್‌ ಸೇರಿದಂತೆ ಒಟ್ಟು 938  ಮಂದಿ ಮೊದಲ ಸುತ್ತಿನ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಬಿಬಿ ಎಂಪಿ ಆಯುಕ್ತ ಎನ್‌. ಮಂಜು ನಾಥ್‌ ಪ್ರಸಾದ್‌ ತಿಳಿ ಸಿ ದ್ದಾರೆ.

ಮತ್ತೆಕ್ಲಸ್ಟರ್ ಗಳಲ್ಲಿ ಭೀತಿ : ನಗರದಲ್ಲಿ ಮತ್ತೆ ಕ್ಲಸ್ಟರ್‌ ಗಳಲ್ಲಿ (ಒಂದು ನಿರ್ದಿಷ್ಟ ಪ್ರದೇ ಶ ದಲ್ಲಿ ಹೆಚ್ಚು ಕೊರೊನಾ ಸೋಂಕು ಪ್ರಕರಣ) ಸೋಂಕು ಭೀತಿ ಎದು ರಾ ಗಿದೆ. ಈ ಹಿಂದೆ ಪಾದರಾಯನಪುರ ಹಾಗೂ ಹೊಂಗ ಸಂದ್ರ ಸೇರಿದಂತೆ ನಗರದ ಕೆಲವು ನಿರ್ದಿಷ್ಟ ಪ್ರದೇ ಶ ದಲ್ಲಿ ಸೋಂಕು ಹೆಚ್ಚಿತ್ತು. ನಂತರ ಉಳಿದ ಭಾಗಕ್ಕೂ ಹಬ್ಬಿತು. ಈಗ ಕ್ಲಸ್ಟರ್‌ ಮಾದರಿ ಸೋಂಕು ಕಾಣಿ ಸಿ ಕೊಂಡರೆ, ಕೊರೊನಾ ಹಬ್ಬುವ ಸಾಧ್ಯತೆ ಹೆಚ್ಚು. ಅಲ್ಲದೆ, ಬಿಸಿಲು ಮಿಶ್ರಿತ ಗಾಳಿ ಕಾರಣದಿಂದ ಸಾಂಕ್ರಾಮಿಕ ರೋಗ ಹೆಚ್ಚುವ ಸಾಧ್ಯ ತೆಯೂ ಇದೆ. ಈ ವೇಳೆಯಲ್ಲಿ ನಿರ್ಲಕ್ಷ್ಯ ವಹಿ ಸದೆ ಎಚ್ಚರಿಕೆಯಿಂದ ಪರೀ ಕ್ಷೆ ಗೆ ಒಳ ಪ ಡ ಬೇಕು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಹೇಳಿದ್ದಾರೆ.

ಟಾಪ್ ನ್ಯೂಸ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್‌ ಬಂತು: ನ.29ಕ್ಕೆ ಸಿನಿಮಾ ತೆರೆಗೆ

police-ban

Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ದಾಳಿ; ಜಿಂಕೆ ಮಾಂಸ ವಶ

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

7

Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.