ದಾಖಲಾದ ನಾಲ್ಕೇ ದಿನದಲ್ಲಿ ಶೇ. 51 ಸಾವು


Team Udayavani, Oct 10, 2020, 12:20 PM IST

ದಾಖಲಾದ ನಾಲ್ಕೇ ದಿನದಲ್ಲಿ ಶೇ. 51 ಸಾವು

ಮಹಿಳೆಯಿಂದ ಕೋವಿಡ್ ಪರೀಕ್ಷೆಗೆ ಮಾದರಿ ಪಡೆದ ವೈದ್ಯರು

ಬೆಂಗಳೂರು: ರಾಜ್ಯದಲ್ಲಿ ಶೇ. 50ಕ್ಕೂ ಅಧಿಕ ಕೋವಿಡ್  ಸೋಂಕಿತರು ಆಸ್ಪತ್ರೆಗೆ ದಾಖಲಾದ ಕೇವಲ ನಾಲ್ಕು ದಿನಗಳಲ್ಲೇ ಸಾವನ್ನಪ್ಪಿದ್ದಾರೆ. ಈ ಪೈಕಿ ಶೇ. 17 ಸೋಂಕಿತರು ಆಸ್ಪತ್ರೆಗೆ ಆಗಮಿಸಿದ ದಿನವೇ ಮೃತಪಟ್ಟಿದ್ದಾರೆ!

– ಆಗಸ್ಟ್‌ನಲ್ಲಿ ಕೋವಿಡ್ ಸೋಂಕಿ ನಿಂದ ಮೃತಪಟ್ಟವರ ಸಂಖ್ಯೆಯನ್ನು ಆಧರಿಸಿ ಮೈಸೂರಿನ ಜೀವನ್‌ ರಕ್ಷಾ ಮ್ಯಾನೇಜ್‌ಮೆಂಟ್‌ ಕನ್ಸಲ್ಟಿಂಗ್‌ ಸಂಸ್ಥೆಯು ಅಧ್ಯಯನ ನಡೆಸಿದೆ. ಆ ತಿಂಗಳಲ್ಲಿ ಸಾವನ್ನಪ್ಪಿದ 2,697 ಸೋಂಕಿ ತರ ಪೈಕಿ ಶೇ.51 ಜನ ಆಸ್ಪತ್ರೆಗಳಿಗೆ ದಾಖಲಾಗಿ ನೂರು ತಾಸುಗಳಲ್ಲಿ ಸಾವನ್ನಪ್ಪಿದ್ದಾರೆ. ಕೋಲಾರದಲ್ಲಿ ಈ ಪ್ರಮಾಣ ನೂರರಷ್ಟಿದೆ (ಆಗಸ್ಟ್‌ನಲ್ಲಿ ಆ ಜಿಲ್ಲೆಯಲ್ಲಿ ಸಾವನ್ನಪ್ಪಿದವರೆಲ್ಲರೂ ನೂರು ತಾಸುಗಳಲ್ಲೇ ಮೃತ). ಶೇ. 17 ಜನ ದಾಖಲಾದ ದಿನವೇ ಮೃತಪಟ್ಟಿದ್ದಾರೆ. ಶೇ. 3 ರಷ್ಟು ಸೋಂಕಿತರು ಆಸ್ಪತ್ರೆಗೆ ಆಗಮಿಸುವಷ್ಟರಲ್ಲಿ ಕೊನೆಯುಸಿರೆಳೆದಿ ರುವುದು ಪತ್ತೆಯಾಗಿದೆ ಎಂದು ಜೀವನ್‌ರಕ್ಷಾ ಇನಿಷಿಯೇಟಿವ್‌ ಆಫ್ ಪ್ರಾಕ್ಸಿಮಾ ಸಂಚಾಲಕ ಮೈಸೂರು ಸಂಜೀವ್‌ ತಿಳಿಸಿದರು.

“ಕೋವಿಡ್‌-19 ಅವಧಿಯಲ್ಲಿ ಸಾವಿಗೆ ಕಾರಣವಾಗುವ ಅಂಶಗಳು’ ಕುರಿತ ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂಕಿ-ಅಂಶಗಳು ಕೋವಿಡ್ ವೈರಸ್‌ ಬಗ್ಗೆ ಸೋಂಕಿತರ ನಿರ್ಲಕ್ಷ್ಯ ಹಾಗೂ ಆಸ್ಪತ್ರೆಗಳಲ್ಲಿನ ವ್ಯವಸ್ಥೆಗಳಿಗೆ ಕನ್ನಡಿ ಹಿಡಿಯುತ್ತವೆ ಎಂದರು.

ಸಾವಿಗೀಡಾದವರಲ್ಲಿ ಬಹುತೇಕರು ವೈರಸ್‌ ಬಗ್ಗೆ ತಾತ್ಸಾರ ತೋರಿದ್ದು, ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ವ್ಯಾಪಕವಾಗಿ ವೈರಸ್‌ ಹರಡಿದ್ದರಿಂದ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ, ಕಲಬುರಗಿ, ಚಾಮರಾಜನಗರ ಮತ್ತು ಹಾಸನದಲ್ಲಿ ಕನಿಷ್ಠ ಶೇ. 18ರಿಂದ ಗರಿಷ್ಠ ಶೇ. 23 ಜನ ಆಸ್ಪತ್ರೆಗಳಿಗೆ ಬರುವಷ್ಟರಲ್ಲಿ ಮೃತರಾಗಿದ್ದಾರೆ. ಇನ್ನು ಹಲವು ಪ್ರಕರಣಗಳಲ್ಲಿ ಗ್ರಾಮೀಣ ಭಾಗದಲ್ಲಿನ ಸೌಲಭ್ಯಗಳ ಕೊರತೆ ಕಾರಣವಾಗಿವೆ. ಶೇ.40 ರೋಗಿಗಳು ಆಸ್ಪತ್ರೆಗಳಲ್ಲಿ 5-49 ದಿನಗಳ ಅಂತರದಲ್ಲಿ ಚಿಕಿತ್ಸೆಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧ್ಯಯನ ವರದಿ ಬಹಿರಂಗ ಪಡಿಸುತ್ತದೆ ಎಂದೂ ಹೇಳಿದರು.

ಮೃತರಲ್ಲಿ ಹೆಚ್ಚಿನವರಿಗೆ ತೀವ್ರ ಉಸಿರಾಟದ ಸಮಸ್ಯೆ (ಸಾರಿ), ವಿಷಮಶೀತ ಜ್ವರದ ಲಕ್ಷಣಗಳುಕಂಡುಬಂದಿದ್ದವು. ಶ್ವಾಸಕೋಶ ತಜ್ಞರ ಕೊರತೆ ಮತ್ತಿತರ ಅಂಶಗಳು ಕಾರಣಎಂದ ಅವರು, ಸಾವನ್ನಪ್ಪಿದವರಲ್ಲಿ ಶೇ.69.19ರಷ್ಟು ಪುರುಷ ಹಾಗೂ ಶೇ. 30.77 ಮಹಿಳೆಯರಿದ್ದಾರೆ. ದೇಶದ ಒಟ್ಟಾರೆ ಕೋವಿಡ್‌-19 ಪಾಸಿಟಿವಿಟಿಪ್ರಮಾಣ ಶೇ. 7.6ರಷ್ಟಿದ್ದು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದಂತಹ ದೊಡ್ಡ ರಾಜ್ಯಗಳಲ್ಲಿ ಶೇ. 9.7ರಷ್ಟಿದೆ. ಅದೇ ರೀತಿ, ದೊಡ್ಡ ರಾಜ್ಯಗಳಲ್ಲಿ ಮೃತ ಪ್ರಮಾಣ ಶೇ. 78ರಷ್ಟಿದೆ ಎಂದು ಮಾಹಿತಿ ನೀಡಿದರು.

 ಶೇ. 88ಖಾಸಗಿ ಆಸ್ಪತ್ರೆಗಳಲ್ಲಿ ಸಾವು :  ಮೃತಪಟ್ಟ ರೋಗಿಗಳ ಪೈಕಿ ಶೇ.45 ಸಾವು ಕೋವಿಡ್ ವೈರಸ್‌ ಚಿಕಿತ್ಸೆಗೆ ಮೀಸಲಿಟ್ಟ ಆಸ್ಪತ್ರೆಗಳಲ್ಲಾಗಿದ್ದರೆ, ಶೇ. 27 ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಒಟ್ಟಾರೆ 2,697 ಸಾವುಗಳಲ್ಲಿ 32 ಸೋಂಕಿತರು ತಮ್ಮ ಮನೆಗಳಲ್ಲಿ ಹಾಗೂ 38 ರೋಗಿಗಳು ಆಸ್ಪತ್ರೆಗೆ ತರುವಾಗ ಸಾವನ್ನಪ್ಪಿದ್ದಾರೆ. ರಾಮನಗರದಲ್ಲಿ ದಾಖಲಾದ ಸಾವುಗಳ ಪೈಕಿ ಶೇ. 88 ಖಾಸಗಿ ಆಸ್ಪತ್ರೆಗಳ ಲ್ಲಾಗಿವೆ. ಇನ್ನು ಬೀದರ್‌ನಲ್ಲಿ ಶೇ. 92 ಸಾವು ಕೋವಿಡ್‌-19ಗೆ ಮೀಸಲಿಟ್ಟ ಆಸ್ಪತ್ರೆಗಳಲ್ಲಾಗಿವೆ. 30 ವರ್ಷ ಮೇಲ್ಪಟ್ಟ 54 ಸೋಂಕಿತರು ಅಸುನೀಗಿದ್ದು, ಇದರಲ್ಲಿ ಶೇ. 37 ಜನ ಬೆಂಗಳೂರು ನಗರಕ್ಕೆ ಸೇರಿದವರಾಗಿದ್ದಾರೆ.

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqeqwe

Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ

Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ

Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್‌ ಡೆಲಿವರಿ ಬಾಯ್‌ ಸಾವು

Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್‌ ಡೆಲಿವರಿ ಬಾಯ್‌ ಸಾವು

Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ

Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.