10 ರಲ್ಲಿ 7 ಸೋಂಕಿತರು ಬೆಂಗಳೂರಿಗರು

Team Udayavani, Mar 18, 2021, 7:47 AM IST

10ರಲ್ಲಿ 7 ಸೋಂಕಿತರು ಬೆಂಗಳೂರಿಗರು

ಬೆಂಗಳೂರು: ಸದ್ಯ ರಾಜ್ಯದಲ್ಲಿ ಕೋವಿಡ್ ಸೋಂಕು ತಗುಲುತ್ತಿರುವ ಮತ್ತು ಸೋಂಕಿನಿಂದ ಸಾವಿಗೀಡಾಗುತ್ತಿರುವ 10 ಮಂದಿ ಪೈಕಿ ಏಳು ಮಂದಿ ರಾಜಧಾನಿಯವರು!

ಹೌದು, ಮಾರ್ಚ್‌ನಲ್ಲಿ (17 ದಿನ) ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳ ಪೈಕಿ ಶೇ.65 ರಷ್ಟು, ಸೋಂಕಿತರ ಸಾವಿನಲ್ಲಿ ಶೇ.67 ರಷ್ಟು ಬೆಂಗಳೂರಿನಲ್ಲಿ ವರದಿಯಾಗಿವೆ. ಇದರೊಂದಿಗೆಬೆಂಗಳೂರು ಕೋವಿಡ್ ಎರಡನೇ ಅಲೆಯ ಕೇಂದ್ರ ಸ್ಥಾನವಾಗುತ್ತಿದೆ.

ಈ ಹಿಂದೆ ರಾಜ್ಯದಲ್ಲಿ ನಿತ್ಯ ವರದಿಯಾಗುವ ಪ್ರಕರಣಗಳ ಪೈಕಿ ಶೇ.40 ರಿಂದ 45 ರಷ್ಟು ಬೆಂಗಳೂರಿನ ಪ್ರಕರಣಗಳುಇರುತ್ತಿದ್ದವು. ಅಲ್ಲದೆ, ರಾಜ್ಯದಲ್ಲಿ ಈವರೆಗೂ ವರದಿಯಾಗಿರುವ ಒಟ್ಟಾರೆ ಕೋವಿಡ್ ಪ್ರಕರಣಗಳ ಪೈಕಿಶೇ. 40 ರಷ್ಟು, ಸೋಂಕಿತರ ಸಾವಿನಲ್ಲಿ ಶೇ.36 ರಷ್ಟು ಬೆಂಗಳೂರಿನಲ್ಲಿ ದಾಖಲಾಗಿವೆ.

ಆದರೆ, ಎರಡನೇ ಅಲೆ ಸದ್ದು ಹೆಚ್ಚಳವಾಗಿರುವ ಮಾರ್ಚ್‌ನಿಂದ ಈಚೆಗೆ ಹೊಸ ಪ್ರಕರಣಗಳು ಶೇ. 65ಕ್ಕೆ, ಸೋಂಕಿತರ ಸಾವು ಶೇ. 67ಕ್ಕೆ ಹೆಚ್ಚಳವಾಗಿವೆ. ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್‌ ಪ್ರಕಾರ, ಮಾರ್ಚ್‌ 1 ರಿಂದ 17ರವರೆಗೂ ಪತ್ತೆಯಾಗಿರುವ12,363 ಹೊಸ ಪ್ರಕರಣಗಳಲ್ಲಿ 7,848, ದಾಖಲಾಗಿರುವ 76 ಸಾವಿನಲ್ಲಿ 51 ಬೆಂಗಳೂರಿನಲ್ಲಿ ವರದಿಯಾಗಿವೆ. ಉಳಿದಂತೆ ಮೈಸೂರು, ತುಮಕೂರಿನಲ್ಲಿ ನಿತ್ಯ ಸರಾಸರಿ 50ಕ್ಕೂ ಹೆಚ್ಚು, ಕಲಬುರಗಿ, ದಕ್ಷಿಣ ಕನ್ನಡ,ಬಳ್ಳಾರಿಯಲ್ಲಿ ನಿತ್ಯ ಸರಾಸರಿ 20 ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಉಳಿದ ಜಿಲ್ಲೆಗಳಲ್ಲಿ ಬೆರಳಿಕೆ ಪ್ರಕರಣಗಳಿವೆ.

ಫೆಬ್ರವರಿಗಿಂತ ಶೇ 90 ರಷ್ಟು ಹೆಚ್ಚು ಕೇಸ್‌: ಸದ್ಯ ನಗರದಲ್ಲಿ ಜನವರಿಗೆ ಹೋಲಿಸರೆ ಶೇ 50ರಷ್ಟು,ಫೆಬ್ರವರಿಗೆ ಹೋಲಿಸಿದರೆ ಶೇ. 90 ರಷ್ಟು ಸೋಂಕುಹೆಚ್ಚಳವಾಗಿದೆ. ಜನವರಿಯಲ್ಲಿ ನಿತ್ಯ 333,ಫೆಬ್ರವರಿಯಲ್ಲಿ 243 ಮಂದಿಗೆ ಸೋಂಕು ತಗುಲಿತ್ತು.ಸದ್ಯ ಮಾರ್ಚ್‌ನಲ್ಲಿ 450 ಮಂದಿಗೆ ಸೋಂಕಿತರಾಗುತ್ತಿದ್ದಾರೆ. ಅಲ್ಲದೆ, ಶೇ. 1ಕ್ಕಿಂತ ಕಡಿಮೆ ಇದ್ದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ಪ್ರಮಾಣ ಕೂಡಾ 1.26ಕ್ಕೆ ಹೆಚ್ಚಳವಾಗಿದೆ.

ಆರನೇ ಸ್ಥಾನದಲ್ಲಿ ಬೆಂಗಳೂರು :

ಮಾರ್ಚ್‌ನಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವ ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರು ಆರನೇ ಸ್ಥಾನದಲ್ಲಿದೆ. ಮೊದಲ ಐದು ಸ್ಥಾನದಲ್ಲಿ ಕ್ರಮವಾಗಿ ಪುಣೆ (4000+), ನಾಗಪೂರ್‌ (3500+), ಮುಂಬೈ (2300+), ನಾಸಿಕ್‌ (2200+), ಥಾಣೆ(1900+) ನಗರಗಳಿವೆ. ಇನ್ನು ಒಟ್ಟಾರೆ ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ದೆಹಲಿ, ಪುಣೆ ಬಳಿಕ ಬೆಂಗಳೂರು ಮೂರನೇ ಸ್ಥಾನದಲ್ಲದೆ.

ಸೋಂಕು ಹೆಚ್ಚಳ: ಆರೋಗ್ಯ ಇಲಾಖೆ ನೀಡಿದ ಕಾರಣಗಳು :

  • ಎರಡನೇ ಅಲೆ ಹೆಚ್ಚಿರುವ ಕೇರಳದಿಂದ ಬಂದವರಲ್ಲಿ ಮತ್ತೆ ಸೋಂಕು ಪತ್ತೆ.
  • ಹೆಚ್ಚುವರಿ ಚಿಕಿತ್ಸೆಗೆಂದು ರಾಜ್ಯದ ವಿವಿಧೆಡೆಯಿಂದ ಬರುವವರ ಆಸ್ಪತ್ರೆ ದಾಖಲಾತಿಗೆ ಸೋಂಕು ಪರೀಕ್ಷೆ ಕಡ್ಡಾಯ.
  • ಹೊರರಾಜ್ಯ, ಹೊರ ದೇಶದಿಂದ ಬಂದ ಪ್ರಯಾಣಿಕರಲ್ಲಿ ಸೋಂಕು ಪ್ರಕರಣ.
  • ರಾಜಧಾನಿ ಹಿನ್ನೆಲೆ ಹೆಚ್ಚು ಜನದಟ್ಟಣೆ, ಸೋಂಕು ಪರೀಕ್ಷೆಗಳು ಹೆಚ್ಚು ನಡೆಸುತ್ತಿರುವುದು.

ಆರನೇ ಸ್ಥಾನದಲ್ಲಿ ಬೆಂಗಳೂರು :

ಮಾರ್ಚ್‌ನಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವ ದೇಶದ ಪ್ರಮುಖನಗರಗಳ ಪೈಕಿ ಬೆಂಗಳೂರು ಆರನೇ ಸ್ಥಾನದಲ್ಲಿದೆ.ಮೊದಲ ಐದು ಸ್ಥಾನದಲ್ಲಿ ಕ್ರಮವಾಗಿ ಪುಣೆ(4000+), ನಾಗಪೂರ್‌ (3500+), ಮುಂಬೈ (2300+), ನಾಸಿಕ್‌ (2200+), ಥಾಣೆ(1900+) ನಗರಗಳಿವೆ. ಇನ್ನು ಒಟ್ಟಾರೆ ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ದೆಹಲಿ, ಪುಣೆ ಬಳಿಕ ಬೆಂಗಳೂರು ಮೂರನೇ ಸ್ಥಾನದಲ್ಲದೆ.

ಸೋಂಕು ಹೆಚ್ಚಿರುವ ವಾರ್ಡ್‌ಗಳು :

ಬೆಳ್ಳಂದೂರು, ಬಿಟಿಎಂ ಲೇಔಟ್‌, ಹಗದೂರು, ಶಾಂತಲಾ ನಗರ, ಕೋಣನಕುಂಟೆ, ಬಾನಸವಾಡಿ, ದೊಡ್ಡಾನೆಕುಂದಿ, ಜ್ಞಾನಭಾರತಿ, ಬ್ಯಾಟರಾಯನಪುರ, ಬನಶಂಕರಿ ದೇವಸ್ಥಾನ.

ಸೋಂಕು ಅತಿ ಕಡಿಮೆ ಇರುವ ವಾರ್ಡ್‌ಗಳು :  ದೊಡ್ಡ ಬೊಮ್ಮಸಂದ್ರ, ಮುನೇಶ್ವರ ನಗರ,ನೀಲಸಂದ್ರ, ಕೆಂಪಾಪುರ ಅಗ್ರಹಾರ, ಜಗಜೀವನ್‌ರಾಮ್‌ ನಗರ, ರಾಯಪುರಂ

-ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.