ಮತ್ತೆರಡು ಕಾಲೇಜಿನಲ್ಲಿ ಸೋಂಕು ಪತ್ತೆ
ನಗರದಲ್ಲಿ ಕಳೆದೆರಡು ದಿನಗಳಿಂದ ಏರುತ್ತಿವೆ ಕೋವಿಡ್ ಪ್ರಕರಣಗಳು
Team Udayavani, Feb 27, 2021, 11:03 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮತ್ತೆರಡು ಕಾಲೇಜುಗಳಲ್ಲಿ 14 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗುವ ಮೂಲಕ ಕೋವಿಡ್ ಕ್ಲಸ್ಟರ್‌ಗಳ ಸಂಖ್ಯೆ ಐದಕ್ಕೆ ಹೆಚ್ಚಳವಾಗಿದೆ.
ಯಲಹಂಕ ವಲಯ ವ್ಯಾಪ್ತಿಯ ಅಗ್ರಗಾಮಿ ಕಾಲೇಜಿನಲ್ಲಿ ಒಟ್ಟು 1156 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಂಬತ್ತು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೇ ವಲಯದ ಸಂಭ್ರಮ್ ಅಕಾಡೆಮಿ ಆಫ್ ಮ್ಯಾನೆಜ್ಮೆಂಟ್ ಸೈನ್ಸ್ ಕಾಲೇಜುಗಳಲ್ಲಿ 217 ಮಂದಿ ಸೋಂಕು ಪರೀಕ್ಷೆಗೆ ಒಳಪಡಿಸಿದ್ದು, ಐವರಲ್ಲಿ ಸೋಂಕು ದೃಢಪಟ್ಟಿದೆ. ಅಪಾಟ್ಮೆಂಟ್ ಒಂದರಲ್ಲಿ 101 ಮಂದಿಯನ್ನು ಪರೀಕ್ಷೆ ಒಳಪಟ್ಟಿದ್ದು 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಂದೇ ಕಡೆಯಲ್ಲಿ ಐದು ಪ್ರಕರಣಗಳು ಕಾಲೇಜು ಅಥವಾ ಕಟ್ಟಡವನ್ನು ಕ್ಲಸ್ಟರ್ ಎಂದು ಗುರುತಿಸ ಲಾಗುತ್ತಿದ್ದು, ಈ ಹಿಂದೆ ಕಾವಲ್‌ಬೈರಸಂದ್ರ ಮತ್ತು ಬೊಮ್ಮನಹಳ್ಳಿ ಎರಡು ಕಾಲೇಜು, ಮಹಾದೇವಪುರದ ಒಂದು ಅಪಾರ್ಟ್‌ಮೆಂಟ್ ಅನ್ನು ಗುರುತಿಸಲಾಗಿತ್ತು. ಸದ್ಯ ಈ ಎರಡು ಕಾಲೇಜುಗಳು ಸೇರ್ಪಡೆ ಯಾಗಿದ್ದು, ಒಟ್ಟಾರೆ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕೇರಳದಿಂದ ವಿದ್ಯಾರ್ಥಿಗಳು ಬರುತ್ತಿರುವ ನರ್ಸಿಂಗ್ ಕಾಲೇಜು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲಾಗುತ್ತಿದೆ. ಯಲಹಂಕ ವಲಯದ ಎರಡು ಕಾಲೇಜಿನಲ್ಲಿ ಪ್ರಕರಣಗಳು ಪತ್ತೆಯಾಗಿದ್ದು, ಕ್ಲಸ್ಟರ್ ಎಂದು ಗುರುತಿಸಲಾಗಿದೆ. ಸೋಂಕಿತರನ್ನು ಐಸೋಲೇಷನ್ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಕೇರಳದಿಂದ ಬರುತ್ತಿರುವವರ ಪೈಕಿ ನೆಗೆಟಿವ್ ರಿಪೋರ್ಟ್ ಇದ್ದರು ಮತ್ತೆ ಸೋಂಕು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ವರದಿ ಬರುತ್ತಿದೆ ಎಂದು ತಿಳಿಸಿದರು.
ಸೋಂಕು ಸರಾಸರಿ 100 ಹೆಚ್ಚಳ :
ಶುಕ್ರವಾರ 368 ಮಂದಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಮೂರು ಸೋಂಕಿತರ ಸಾವಾಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರು ನಗರದ ಕೋವಿಡ್ ಸೋಂಕು ಪ್ರಕರಣಗಳು ನಿತ್ಯ ಸರಾಸರಿ 100 ಹೆಚ್ಚಳವಾಗುತ್ತಿವೆ. ಬುಧವಾರ 171 ಇದ್ದ ಪ್ರಕರಣಗಳು, ಗುರುವಾರ 274ಕ್ಕೆ, ಶುಕ್ರವಾರ 368ಕ್ಕೆ ಹೆಚ್ಚಳವಾಗಿವೆ. ಇನ್ನು ಕೇರಳ ಪ್ರಯಾಣಿಕರ ಆಗಮನ, ಸೋಂಕು ಪರೀಕ್ಷೆಗಳು ಹೆಚ್ಚಳವಾಗಿರುವುದು ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.