ವೈದ್ಯರು ಸ್ನೇಹಿತರು ತುಂಬಿದ ಆತ್ಮಸ್ಥೈರ್ಯ ದಿಂದ ಗುಣಮುಖನಾದೆ
Team Udayavani, May 21, 2021, 2:31 PM IST
ಬೆಂಗಳೂರು: ನಾನು ಅಗ್ರಿಕಲ್ಚರ್ ಡೆವಲಪರ್ ವೃತ್ತಿಮಾಡುತ್ತಿದ್ದೇನೆ. ಕಡ್ಡಾಯವಾಗಿ ಮಾಸ್ಕ್,ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರಕಾಯ್ದುಕೊಂಡರೂ ನನ್ನನ್ನುಕೊರೊನಾ ಆವರಿಸಿತು.ಏ. 17ರಂದು ಕೆಲಸ ನಿಮಿತ್ತ ನಾನು ಮತ್ತುಮೂರು ಜನ ಸ್ನೇಹಿತರು ಮಂಗಳೂರಿಗೆ ತೆರಳಿದ್ದೆವು.ನಮ್ಮ ಜತೆ ಡ್ರೆçವರ್‌ನನ್ನು ಕರೆದುಕೊಂಡು ಹೋಗಿದ್ದೆವು.
ಮಾರ್ಗಸೂಚಿ ಪಾಲಿಸುತ್ತಿದ್ದೆವು. ಆದರೆ, ಏ.21ರಂದು ಬೆಂಗಳೂರಿಗೆ ಮರಳಿದಾಗ ಜ್ವರ ಮತ್ತು ತಲೆಭಾರ ಕಾಣಿಸಿಕೊಂಡಿತು.ಬಳಿಕನಾಗರಭಾವಿಯಫ್ಯಾಮಿಲಿ ವೈದ್ಯರಾದ ಚಂದನ ಆಸ್ಪತ್ರೆಯ ಡಾ.ರಾಜೇಂದ್ರ ಕುಮಾರ್‌ರನ್ನು ಭೇಟಿ ಮಾಡಿದೆ. ಅವರು,ಕೊರೊನಾ ಪರೀಕ್ಷೆಗೆ ತಿಳಿಸಿದರು.ವೈದ್ಯರ ಸಲಹೆಯಂತೆ ಏ.22 ರಂದು ಹೆಸರಘಟ್ಟಮುಖ್ಯರಸ್ತೆಯ ಸಪ್ತಗಿರಿ ಆಸ್ಪತ್ರೆಯಲ್ಲಿ ಪರೀಕ್ಷೆಮಾಡಿಸಿದಾಗ ಕೊರೊನಾ ದೃಢವಾಗಿತ್ತು. ವೈದ್ಯಡಾ.ಮಧುಸೂದನ್‌ರ ಸಲಹೆಯಂತೆ ಅಂದೇಆಸ್ಪತ್ರೆಗೆ ದಾಖಲಾದೆ.
ಅಂದುಕೇವಲ ಎರಡು ಬೆಡ್‌ಇತ್ತು. ವೈದ್ಯರು, ನನಗೆಒಂದು ಬೆಡ್ ವ್ಯವಸ್ಥೆಮಾಡಿದರು. ಚಿಕಿತ್ಸೆಗೆದಾಖಲಾದ ಬಳಿಕತಾಯಿಗೆ ಪರೀಕ್ಷೆಮಾಡಿಸಿದಾಗ ನೆಗೆಟಿವ್‌ಬಂತು. ನನ್ನ ಪತ್ನಿ ಮತ್ತುಇಬ್ಬರು ಮಕ್ಕಳುತವರುಮನೆಗೆ ತೆರಳಿದ್ದರಿಂದ ಅವರಲ್ಲಿ ಸೋಂಕಿನ ಭಯ ಇರಲಿಲ್ಲ.ಆಸ್ಪತ್ರೆಯಲ್ಲಿ ಮೊದಲ 5 ದಿನಡಾ.ಮಧುಸೂದನ್, ಕೊರೊನಾ ಬಗ್ಗೆ ಮಾಹಿತಿನೀಡಿ ಆತಂಕ ದೂರ ಮಾಡಿದರು. ಮೊದಲ ಐದುದಿನಗಳಿಗಿಂತ 6ರಿಂದ 10ನೇ ದಿನದವರೆಗೆ ನೀಡುವಚಿಕಿತ್ಸೆ ಮುಖ್ಯವಾಗುತ್ತದೆ ಎಂದಿದ್ದರು.
ಮೊದಲಐದು ದಿನ ವೈದ್ಯರು ನೀಡಿದ ಉತ್ತಮ ಚಿಕಿತ್ಸೆಯಿಂದದೈಹಿಕವಾಗಿ ದೃಢನಾದೆ.ಡಾ.ಗಿರಿಧರ್, ನಿತ್ಯ ಬಂದು ಯೋಗಕ್ಷೇಮವಿಚಾರಿಸುತ್ತಿದ್ದರು. ಕೋವಿಡ್ ರೋಗಿಗಳಉಸ್ತುವಾರಿ ವಹಿಸಿದ್ದ ಅಧಿಕಾರಿ ಕೇಶವ್ ನನ್ನನ್ನುತುಂಬಾ ಚೆನ್ನಾಗಿ ನೋಡಿಕೊಂಡರು. ನಾನು ಕೇಳಿದ ಆಹಾರವನ್ನು ಹೊರಗಡೆಯಿಂದ ತರಿಸಿಕೊಡುತ್ತಿದ್ದರು.ನರ್ಸ್‌ಗಳು, ವೈದ್ಯರು ಹಾಗೂ ಮೆಡಿಕಲ್‌ವಿದ್ಯಾರ್ಥಿಗಳು ನಿತ್ಯ ಮೂರು ಬಾರಿ ಬಂದುಆರೋಗ್ಯ ವಿಚಾರಿಸುತ್ತಿದ್ದರು. ಅವರಉಪಚಾರದಿಂದ ಬೇಗ ಚೇತರಿಸಿಕೊಂಡೆ.ಪುಸ್ತಕ ಓದುತ್ತಿದ್ದೆ: ಆಸ್ಪತ್ರೆಯಲ್ಲೇ ವಾಕ್ ಮಾಡುತ್ತಿದ್ದೆ.
ಪುಸ್ತಕ ಓದುತ್ತಿದ್ದೆ. ಮೊಬೈಲ್‌ನಲ್ಲಿ ವಿದ್ವಾಂಸರಆಧ್ಯಾತ್ಮಿಕ ಉಪನ್ಯಾಸ ವೀಕ್ಷಿಸುತ್ತಿದ್ದೆ. ಸ್ನೇಹಿತರು, ಪತ್ನಿ ಹಾಗೂ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿಸಿದೆ. ಅವರೂ ಧೈರ್ಯ ತುಂಬಿದರು.
ಮನೆಗೆಬಂದ ಮೇಲೂ 5ದಿನ ಐಸೋಲೇಟ್ ಆಗಿದ್ದೆ.ಅಭಿನಂದನೆ: ನನ್ನನ್ನು ಉತ್ತಮವಾಗಿ ಶುಶ್ರೂಷೆಮಾಡಿದ ಸಪ್ತಗಿರಿ ಆಸ್ಪತ್ರೆಯ ವೈದ್ಯಡಾ.ಮಧುಸೂದನ್, ಡಾ.ಗಿರಿಧರ್, ಕೋವಿಡ್‌ರೋಗಿಗಳಉಸ್ತುವಾರಿಅಧಿಕಾರಿ ಕೇಶವ್,ಫ್ಯಾಮಿಲಿಡಾಕ್ಟರ್ ರಾಜೇಂದ್ರಕುಮಾರ್, ನರ್ಸ್ ಗಳುಹಾಗೂ ಆತ್ಮಸ್ಥೈರ್ಯ ತುಂಬಿದ ಪರಿವಾರ, ಸ್ನೇಹಿತರಿಗೆಧನ್ಯವಾದ ತಿಳಿಸುವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.