8 ತಿಂಗಳ ಗರ್ಭಿಣಿ ಬಲಿ ಪಡೆದ ಕೋವಿಡ್
Team Udayavani, May 26, 2021, 1:15 PM IST
ಬೆಂಗಳೂರು: ಚಿಕಿತ್ಸೆ ಫಲಕಾರಿಯಾಗದೆ 8 ತಿಂಗಳಗರ್ಭಿಣಿ ಸೋಂಕಿನಿಂದ ಸಾವನ್ನಪ್ಪಿರುವ ಮನಕಲುಕುವ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮೂಲದ ಅಶ್ವಿನಿ ಎಂಬ 8 ತಿಂಗಳ ಗರ್ಭಿಣಿ, ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕೊರೊನಾದೃಢವಾದ ಬಳಿಕ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ, ದೊಡ್ಡಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ವೈದ್ಯರ ಸಲಹೆಯಂತೆ ಅಲ್ಲಿಂದ ನಗರದಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.ಬೌರಿಂಗ್‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅಶ್ವಿನಿಆರೋಗ್ಯ ಸ್ಥಿತಿ ಗಂಭೀರವಾದ್ದರಿಂದ ವೈದ್ಯರು ಶಸ್ತ್ರ ಚಿಕಿತ್ಸೆಮಾಡಿ ಮಗುವನ್ನು ಹೊರತೆಗೆದಿದ್ದರು. ಮಗು ಜನಿಸಿದ 3 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅಶ್ವಿನಿಮೃತಪಟ್ಟಿದ್ದಾರೆ.
ಮಗುವಿನ ಜೀವ ಉಳಿಸಿದ ವೈದ್ಯರು:ಅಶ್ವಿನಿ ಹೊಟ್ಟೆಯಲ್ಲಿದ್ದ ಮಗುವಿನ ಜೀವವನ್ನು ವೈದ್ಯರುಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಟ್ಟೆಯಲ್ಲಿದ್ದಮಗುವನ್ನು ಶಸ್ತ್ರ ಚಿಕಿತ್ಸೆ ಮಾಡಿ ಹೊರ ತೆಗೆಯಲಾಗಿದೆ.ಹುಟ್ಟಿದ ಬಳಿಕ ತಾಯಿ ಜತೆ ಆಡಿ ನಲಿಯಬೇಕಿದ್ದಮಗು ವೆಂಟಿಲೇಟರ್‌ನಲ್ಲಿ ಉಸಿರಾಡುತ್ತಿದೆ.
ನನ್ನ ಪರಿಸ್ಥಿತಿ ಶತ್ರುವಿಗೂ ಬೇಡ: ಅಶ್ವಿನಿ ಸಾವಿನ ಬಳಿಕಕೇವಲ ಹಸುಗೂಸು ಮಾತ್ರವಲ್ಲದೆ, ಅವರ ಮತ್ತೂಬ್ಬ3ವರ್ಷದ ಹೆಣ್ಣು ಮಗು ಸಹ ತಾಯಿ ಕಳೆದುಕೊಂಡುಅನಾಥವಾಗಿದೆ. ಮಗಳ ಪರಿಸ್ಥಿತಿ ಯಾರಿಗೂ ಬೇಡ.ತನ್ನ ಮಗಳಿಗೆ 3 ವರ್ಷದ ಇನ್ನೊಂದು ಹೆಣ್ಣು ಮಗುಇದೆ. ಎಲ್ಲರೂ ಮನೆಯಲ್ಲೇ ಇರಿ, ಹೊರಗೆಓಡಾಡಬೇಡಿ. ಈಗಿನ ತನ್ನ ಪರಿಸ್ಥಿತಿ ಯಾವ ಶತ್ರುವಿಗೂಬರುವುದು ಬೇಡ’ ಎಂದು ಮಗಳನ್ನು ನೆನೆದು ಮೃತಅಶ್ವಿನಿ ತಾಯಿ ಸರಸ್ವತಿ ಕಣ್ಣೀರಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.