ಮಹಾರಾಷ್ಟ್ರದಲ್ಲಿ 3ನೇ ಅಲೆ ಬಂದ್ರೆ ನಮ್ಮಲ್ಲಿ ಫಿಕ್ಸ್
Team Udayavani, Jun 19, 2021, 1:32 PM IST
ಬೆಂಗಳೂರು: ಕೊರೊನಾ ಮೊದಲ ಅಲೆ ನೆರೆಯಮಹಾರಾಷ್ಟ್ರದಲ್ಲಿ ಬಂದ ಒಂದು ತಿಂಗಳೊಳಗೆಕರ್ನಾಟಕದಲ್ಲಿ ಕಾಣಿಸಿಕೊಂಡಿತು. ಎರಡನೇ ಅಲೆಯುಕೂಡಾ ಅಲ್ಲಿ ಬಂದ ಎರಡು ವಾರದ ಬಳಿಕ ಅಪ್ಪಳಿಸಿತು.ಈಗ ಮೂರನೇ ಅಲೆಯೂ ಇದೇ ರೀತಿಯಾಗುತ್ತದೆಯೇ? ಮಹಾರಾಷ್ಟ್ರದಲ್ಲಿ ಮೂರ್ನಾಲ್ಕು ವಾರಗಳಲ್ಲಿ ಕೊರೊನಾ ಮೂರನೇಅಲೆ ಆರಂಭವಾಗುತ್ತದೆ ಎಂದುಅಲ್ಲಿನ ತಜ್ಞರುಅಂದಾಜಿಸಿರುವ ಬೆನ್ನಲ್ಲೆ ಈಪ್ರಶ್ನೆ ಎದುರಾಗಿದೆ.
ಸದ್ಯದ ಕೊರೊನಾಎರಡನೇ ಅಲೆಯು ಮಹಾರಾಷ್ಟ್ರದಲ್ಲಿ ಮಾರ್ಚ್ ಎರಡನೇವಾರ ಆರಂಭವಾಗಿ, ಮೇ ಎರಡನೇವಾರದಿಂದ ಇಳಿಕೆಯಾಗುತ್ತಿದೆ. ಆದರೆ, ಕರ್ನಾಟಕದಲ್ಲಿಏಪ್ರಿಲ್ ಮೊದಲ ವಾರ ಆರಂಭವಾಗಿ ಜೂನ್ ಮೊದಲವಾರ ಇಳಿಕೆಯಾಗಿದೆ. ಮೊದಲೆಡೆ ಅಲೆಗಳಲ್ಲಿಯೂರಾಜ್ಯದಕೊರೊನಾ ಸೋಂಕು ಆರಂಭ, ತೀವ್ರತೆ ಮತ್ತುಇಳಿಕೆಗೂ ಮಹಾರಾಷ್ಟ್ರಕ್ಕೂ ಎರಡು ವಾರಗಳವ್ಯತ್ಯಾಸವಿದೆ. ಮೂರನೇ ಅಲೆ ಜುಲೈ ಅಂತ್ಯಕ್ಕೆಮಹಾರಾಷ್ಟ್ರದಲ್ಲಿ ಆರಂಭವಾಗಬಹುದು ಎಂದು ಅಲ್ಲಿನ ಕೊರೊನಾ ನಿಯಂತ್ರಣ ತಜ್ಞರ ಸಮಿತಿ ಸದಸ್ಯರೊಬ್ಬರು ಅಂದಾಜಿಸಿದ್ದಾರೆ.
ಹೀಗಾಗಿ,ರಾಜ್ಯದಲ್ಲಿಯೂ ಮಹಾರಾಷ್ಟ್ರದಲ್ಲಿ ಆರಂಭವಾದಎರಡು ವಾರದ ಬಳಿಕ ಅಂದರೆ ಆಗಸ್ಟ್ ಮಧ್ಯದಲ್ಲಿಬರುತ್ತದೆ ಎಂಬ ಆತಂಕವು ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಬಂದರೆ ಫಿಕ್ಸ್ : ರಾಜ್ಯ ಕೊರೊನಾನಿಯಂತ್ರಣತಾಂತ್ರಿಕ ಸಲಹಾ ಸಮಿತಿ ಸದಸ್ಯ, ವೈರಾಣುತಜ್ಞ ಡಾ.ವಿ.ರವಿ ಪ್ರಕಾರ, ಕೊರೊನಾ ವೈರಸ್ನ ಒಂದುಅಲೆಯಿಂದ ಮತ್ತೂಂದು ಅಲೆಗೆ ಮೂರರಿಂದ ಐದುವಾರ ಅಂತರವಿರುತ್ತದೆ. ಅದರಂತೆ ರಾಜ್ಯದಲ್ಲಿ ನವೆಂಬರ್ಗೆ ಬರಬಹುದು ಎಂದು ಅಂದಾಜಿಸಲಾಗಿತ್ತು.ಸದ್ಯ ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿಯೇ ಆರಂಭವಾಗುತ್ತದೆ ಎಂದು ಅಂದಾಜಿಸಿದ್ದು, ಒಂದು ವೇಳೆ ಅಲ್ಲಿಆರಂಭವಾದರೇ ಆನಂತರದ ಎರಡು ವಾರಗಳಲ್ಲಿಯೇ ಕರ್ನಾಟಕದಲ್ಲಿಯೂ ಕಾಣಿಸಿಕೊಳ್ಳಲಿದೆ ಎಂದು ಕೊರೊನಾ ನಿರ್ವಹಣೆ ತಾಂತ್ರಿಕ ಸಲಾ ಸಮಿತಿ ಸದಸ್ಯ,ವೈರಾಣು ತಜ್ಞ ಡಾ.ವಿ.ರವಿ ತಿಳಿಸಿದ್ದಾರೆ.
ಜನರ ಕೈಯಲ್ಲೇ ಇದೆ: ಹೆಚ್ಚು ಪರೀಕ್ಷೆ ಮತ್ತು ಬಿಗಿನಿರ್ಬಂಧದಿಂದ ಮಾತ್ರ ಸೋಂಕು ಇಳಿಕೆಯಾಗುತ್ತದೆ.ರಾಜ್ಯದಲ್ಲಿಯೂ ಈ ಎರಡು ಅಂಶಗಳು ಯಶಸ್ವಿಯಾಗಿಜಾರಿಯಾದ ಹಿನ್ನೆಲೆ ಎರಡನೇ ಅಲೆ ತಗ್ಗಿದೆ. ಜನನಿಯಮ ಪಾಲನೆಯಾಗದಿದ್ದರೆ ಮತ್ತೆ ಏರಿಕೆಯಾಗುತ್ತದೆ. ಸದ್ಯ ಸರ್ಕಾರವು ತುರ್ತು ಅಗತ್ಯಚಟುವಟಿಕೆಗಳಿಗೆ ವಿನಾಯ್ತಿ ನೀಡಿದೆ.
ಆದರೆ, ಜನರುಮಾತ್ರ ಸಂಪೂರ್ಣ ಅನ್ಲಾಕ್ ಆಗಿದೆ ಎಂಬ ರೀತಿವರ್ತನೆ ಮಾಡುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿ ದಟ್ಟಣೆಹೆಚ್ಚಾಗಿದೆ. ರಾತ್ರಿ ಕರ್ಫ್ಯೂ ಪಾಲನೆಯಾಗುತ್ತಿಲ್ಲ. ಜನರವರ್ತನೆ ಇದೇ ರೀತಿ ಮುಂದುವರೆದರೇಶೀಘ್ರದಲ್ಲಿಯೇ ಮತ್ತೂಂದು ಅಲೆ ಬರುತ್ತದೆ ಎಂದುಡಾ.ವಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.