ಪ್ರಾಣವಾಯು ಒದಗಿಸಿ 10 ಜೀವ ಉಳಿಸಿದ್ರು
Team Udayavani, May 5, 2021, 2:34 PM IST
ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಯಿಂದ 10 ಮಂದಿ ಮೃತಪಟ್ಟ ಆತಂಕದ ಘಟನೆ ನಡುವೆ ಕೊರೊನಾ ಲಾಕ್ ಡೌನ್‌ಸಂದರ್ಭದಲ್ಲಿ ಫ್ರಂಟ್ ಲೈನ್ ವರ್ಕರ್ ಆಗಿ ಸೇವೆಸಲ್ಲಿಸುತ್ತಿರುವ ಪೊಲೀಸ್ ಇನ್‌ಸ್ಪೆಕ್ಟರ್‌ಕೆ.ಪಿ.ಸತ್ಯನಾರಾಯಣ್ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿ ಆಪತ್ಬಾಧವರಾಗಿದ್ದಾರೆ.
ಈ ಮೂಲಕ ಸುಮಾರು 10 ರೋಗಿಗಳ ಜೀವಉಳಿಸಿದ್ದಾರೆ. ಯಲಹಂಕ ಠಾಣೆ ಇನ್‌ಸ್ಪೆಕ್ಟರ್‌ಕೆ.ಪಿ.ಸತ್ಯನಾರಾಯಣ್ ಸೋಮವಾರ ರಾತ್ರಿ ಗಸ್ತುತಿರುಗುತ್ತಿದ್ದರು. ಅದೇ ವೇಳೆ ಯಲಹಂಕ ನ್ಯೂಟೌನ್‌ನಲ್ಲಿರುವ ಖಾಸಗಿ ಆಸ್ಪತ್ರೆ ಮುಂಭಾಗ ಹತ್ತಾರು ಮಂದಿ ಆಸ್ಪತ್ರೆ ಎದುರು ಗಲಾಟೆ ಮಾಡುತ್ತಿದ್ದರು. ಸೋಂಕಿತರೊಬ್ಬರು ಆಕ್ಸಿಜನ್‌ಕೊರತೆಯಿಂದ ಮೃತಪಟ್ಟಿದ್ದು, ಅವರ ಸಂಬಂಧಿಕರು ವೈದ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.
ಕೂಡಲೇ ಸ್ಥಳಕ್ಕೆ ಹೋಗಿಘಟನೆ ಬಗ್ಗೆ ಪ್ರಶ್ನಿಸಿದಾಗ, ಆಕ್ಸಿಜನ್ ಕೊರತೆ ಬಗ್ಗೆ ವೈದ್ಯರು ವಿವರಿಸಿದರು. ಬಳಿಕ ತುರ್ತು ನಿಗಾ ಘಟಕ್ಕೆ ಹೋಗಿ ಭೇಟಿನೀಡಿದ ಇನ್‌ಸ್ಪೆಕ್ಟರ್‌ಗೆ ಪರಿಸ್ಥಿತಿ ತಿಳಿಯಿತು.ಸುಮಾರು 8-10 ಮಂದಿ ರೋಗಿಗಳು ಆಕ್ಸಿಜನ್‌ಸಮಸ್ಯೆಯಿಂದ ಬಳಲುತ್ತಿದ್ದರು. ನಂತರ ಸ್ಥಳೀಯ ಶಾಸಕ ವಿಶ್ವನಾಥ್, ಆರೋಗ್ಯ ಸಚಿವರ ಆಪ್ತಸಹಾಯಕರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಅವರ ಸೂಚನೆ ಮೇರೆಗೆ ಸುಮಾರು ಐದಾರು ಆಸ್ಪತ್ರೆಗಳು ಅಲೆದಾಡಿದರೂ ಆಕ್ಸಿಜನ್ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಶಾಸಕರು ಎರಡು ಸಿಲಿಂಡರ್ ವ್ಯವಸ್ಥೆ ಮಾಡಿದರು.ಆದರೂ ಮುಂದಿನ 45 ನಿಮಿಷಗಳ ಬಳಿಕ ಮತ್ತೆ ಆಕ್ಸಿಜನ್ ಕೊರತೆ ಉಂಟಾಗಲಿದೆ ಎಂಬುದು ಅರಿವಾಯಿತು.ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಆಡಳಿತ ವಿಭಾಗದ ಡಿಸಿಪಿ ಇಶಾ ಪಂತ್ ಅವರಿಗೆ ಮಾಹಿತಿ ನೀಡಿದರು.
ಬಳಿಕ ಅವರ ಸೂಚನೆ ಮೇರೆಗೆ ಎರ್ಮಜೆನ್ಸಿ ರೆಸ್ಪಾನ್ಸ್ ತಂಡಕ್ಕೆ ಸೂಚಿಸಿ,ಅವರ ಸಲಹೆ ಮೇರೆಗೆ ನಟ ಸೋನು ಸೂದ್ ಟ್ರಸ್ಟ್‌ನ ಸದಸ್ಯರೊಬ್ಬರಿಗೆ ಮಾಹಿತಿ ನೀಡಲಾಯಿತು. ಟ್ರಸ್ಟ್ ನ ಸದಸ್ಯರು ಕೆಲವೇ ಹೊತ್ತಿನಲ್ಲಿ ಸುಮಾರು8-10 ಆಕ್ಸಿಜನ್ ಸಿಲಿಂಡರ್ ಗಳನ್ನು ಆಸ್ಪತ್ರೆ ಬಳಿ ತಂದರು. ಬಳಿಕ ಎಲ್ಲ ರೋಗಿಗಳಿಗೆ ಆಕ್ಸಿಜನ್‌ವ್ಯವಸ್ಥೆ ಮಾಡಲಾಗಿತ್ತು.
15 ನಿಮಿಷ ಕಳೆದಿದ್ದರೇ 10 ಮಂದಿ ಸಾವು:ಹೌದು, ಇನ್ನು 15 ನಿಮಿಷ ತಡವಾಗಿದ್ದರೆ ಆಕ್ಸಿಜನ್‌ಕೊರತೆಯಿಂದ ಆಸ್ಪತ್ರೆಯಲ್ಲಿದ್ದ 10 ಮಂದಿಸೋಂಕಿತರು ಮೃತಪಡುತ್ತಿದ್ದರು. ಆದರೆ, ಇನ್ಸ್ ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ತಮ್ಮ ಸಮಯ ಪ್ರಜ್ಞೆಯಿಂದ ಆಕ್ಸಿಜನ್ ವ್ಯವಸ್ಥೆ ಮಾಡಿ ಹತ್ತಾರುಮಂದಿಯ ಜೀವ ಉಳಿಸಿದ್ದಾರೆ ಎಂದು ಪೊಲೀಸ್‌ಮೂಲಗಳು ತಿಳಿಸಿವೆ.
ಆಸ್ಪತ್ರೆಯಲ್ಲಿದ್ದ ಸೋಂಕಿತರ ಪೈಕಿ ಒಬ್ಬರು ತೀವ್ರಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.ಬಳಿಕ ಅದೇ ವೇಳೆ ಆ್ಯಂಬುಲೆನ್ಸ್ ಚಾಲಕ ಕೂಡಇರಲಿಲ್ಲ. ಬಳಿಕ ಯಲಹಂಕ ಠಾಣೆ ಕಾನ್‌ಸ್ಟೆàಬಲ್‌ಮೋಹನ್ ಬಾಬು ಅವರೇ ಪಿಪಿಇ ಕಿಟ್ ಧರಿಸಿಆ್ಯಂಬುಲೆನ್ಸ್ ಚಾಲನೆ ಮಾಡಿಕೊಂಡು ಆರೋಗಿಯನ್ನು ಬೇರೊಂದು ಆಸ್ಪತ್ರೆಗೆ ರವಾನಿಸಿಮಾನವಿಯತೆ ಮೆರೆದಿದ್ದಾರೆ.
ಕಣ್ಣ ಮುಂದೆಯೇ ಆಕ್ಸಿಜನ್‌ಸಮಸ್ಯೆ ಕಂಡು ಬಂದಿದ್ದರಿಂದ ಪೊಲೀಸ್ ಅಧಿಕಾರಿಯಾಗಿ ನನ್ನ ಕರ್ತವ್ಯ ಪಾಲಿಸಿದ್ದೇನೆ. ಈಮೂಲಕನಡೆಯುತ್ತಿದ್ದದೊಡ್ಡಅನಾಹುತವೊಂದು ತಪ್ಪಿದಂತಾಗಿದೆ.
●ಕೆ.ಪಿ.ಸತ್ಯನಾರಾಯಣ್,ಯಲಹಂಕ ಠಾಣೆ ಇನ್‌ಸ್ಪೆಕ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.