ಸಿಲಿಕಾನ್ ಸಿಟಿಯಲ್ಲಿ ಇನ್ನೂ ಕಠಿಣ ಲಾಕ್
Team Udayavani, May 23, 2021, 1:31 PM IST
ಬೆಂಗಳೂರು: ಕೊರೊನಾ ಎರಡನೇ ಅಲೆನಿಯಂತ್ರಿಸಲು ರಾಜ್ಯ ಸರ್ಕಾರದ ಸೂಚನೆಮೇರೆಗೆ ಬೆಂಗಳೂರು ನಗರ ಪೊಲೀಸರುಶನಿವಾರದಿಂದ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಲಾಕ್‌ಡೌನ್ ಜಾರಿ ಬಳಿಕವು ಕೆಲವೊಂದುಚಟುಟಿಕೆಗಳ ಹೆಸರಿನಲ್ಲಿ ಸಾರ್ವಜನಿಕರುಸಡಿಲವಾಗಿ ಓಡಾಡಲು ಬಿಟ್ಟಿದ್ದ ಪೊಲೀಸರುಇದೀಗ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.
ಅನಗತ್ಯವಾಗಿ ರಸ್ತೆಗಿಳಿದ ಸಾವಿರಾರು ವಾಹನಜಪ್ತಿ ಮಾಡಿ, ನೂರಾರು ಸವಾರರನ್ನು ವಶಕ್ಕೆಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿದಿನಗಟ್ಟಲೇ ಠಾಣೆ ಆವರಣದಲ್ಲಿ ಕೂರಿಸಿನೋಟಿಸ್‌ಕೊಟ್ಟುಕಳುಹಿಸುತ್ತಿದ್ದಾರೆ.ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರುಎಲ್ಲ ವಾಹನಗಳನ್ನು ಕೂಲಂಕಷವಾಗಿ ತಪಾಸಣೆನಡೆಸಿದ್ದಾರೆ. ಕುಂಟು ನೆಪವೊಡ್ಡಿತಿರುಗಾಡುತ್ತಿದ್ದವರ ವಾಹನ ಜಪ್ತಿ ಮಾಡಿ,ಪೊಲೀಸರೊಂದಿಗೆ ವಾಗ್ವಾದಕ್ಕಿಳಿದವರನ್ನು ವಶಕ್ಕೆಪಡೆದು ವಿಪತ್ತು ನಿರ್ವಹಣಾ ಕಾಯ್ದೆ ಅಡಿಪ್ರಕರಣ ದಾಖಲಿಸುತ್ತಿದ್ದಾರೆ.
ಪ್ರತಿ ವಾಹನಗಳ ತಪಾಸಣೆ: ನಗರದ ಎಲ್ಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಸಂಚಾರ ಪೊಲೀಸರ ಜತೆಕಾನೂನು ಸುವ್ಯವಸ್ಥೆ ಪೊಲೀಸರು ಪ್ರತಿಯೊಂದುವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಈಹಿನ್ನೆಲೆಯಲ್ಲಿ ಪ್ರಮುಖ ನಗರಗಳ ರಸ್ತೆಗಳಲ್ಲಿಸಂಚಾರ ದಟ್ಟಣೆ ಅಧಿಕವಾಗಿತ್ತು. ಕೆಲಸಕ್ಕೆತೆರಳುವುದು, ಲಸಿಕೆ ಪಡೆಯಲು ಆಸ್ಪತ್ರೆಗೆಹೋಗುವುದು, ದಿನಸಿ ಖರೀದಿ, ಪ್ರಾಣಿಗಳಿಗೆಚಿಕಿತ್ಸೆ ಕೊಡಿಸುವುದು ಹೀಗೆ ಹತ್ತಾರುಕಾರಣಗಳನ್ನು ನೀಡಿ ಓಡಾಡುವವರ ಮನವಿಗಳಿಗೆ ಕಿವಿಗೊಡದ ಪೊಲೀಸರು ಮುಲಾಜಿಲ್ಲದೇ ವಾಹನಜಪ್ತಿ ಮಾಡಿದ್ದಾರೆ.
ತುರ್ತು ಸೇವೆ ಮತ್ತು ಅಗತ್ಯ ಸೇವೆ ಒದಗಿಸುವಸೇವೆ ಒದಗಿಸುವವರ ಗುರುತಿನ ಚೀಟಿ ಪರಿಶೀಲಿಸಿ ಬಿಟ್ಟು ಕಳುಹಿಸಲಾಗಿದೆ. ನೃಪತುಂಗ ರಸ್ತೆ, ಹಡ್ಸನ್ ವೃತ್ತ,ಕೆ.ಆರ್ ಮಾರುಕಟ್ಟೆ, ಮಡಿವಾಳ, ಯಶವಂತಪುರ, ಕೋರಮಂಗಲ,ರೆಸಿಡೆನ್ಸಿರಸ್ತೆ,ಹೆಬ್ಟಾಳ,ಕೆ.ಆರ್.ಪುರ,ಹೊಸೂರುರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿ ಎಲ್ಲೆಡೆ ವಾಹನ ತಪಾಸಣೆ ಜೋರಾಗಿ ನಡೆಯಿತು. ಮನೆಗೆ ಕಳಿಸಿದ ಪೊಲೀಸರು: ಲಾಕ್‌ಡೌನ್‌ವಿಸ್ತರಣೆಯಾದ ಬೆನ್ನಲ್ಲೆ ಬೆಳಗ್ಗೆ 6ಗಂಟೆಯಾಗುತ್ತಿದ್ದಂತೆ ಅಗತ್ಯ ವಸ್ತುಗಳಖರೀದಿಗಾಗಿ ಜನರು ಅಂಗಡಿ ಮುಂಗಟ್ಟು,ಮಾರುಕಟ್ಟೆಗಳಲ್ಲಿ ಮುಗಿ ಬಿದ್ದರು. 10 ಗಂಟೆ ಬಹುತೇಕ ಕಡೆಗಳಲ್ಲಿ ದಿನಸಿ,ತರಕಾರಿ, ಹೂ, ಹಣ್ಣು ಖರೀದಿಗೆ ಅಂಗಡಿಗಳಮುಂದೆ ಜನ ಜಂಗುಳಿ ಹೆಚ್ಚಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಜನರನ್ನು ಮನೆಗೆಕಳುಹಿಸಿ ಅಂಗಡಿ- ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸಿದರು. ಕೆಲಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.