ಕ್ಷೇತ್ರದ ಜನರ ಮನೆ ಮನೆಗೆ ತೆರಳಿ ಕಷ್ಟಕ್ಕೆ ಸ್ಪಂದನೆ
Team Udayavani, Jun 14, 2021, 6:18 PM IST
ಚಂದಾಪುರ: ಬಿಜೆಪಿ ಸರ್ಕಾರ ಮಾಡಲಾಗದಜನ ಸೇವೆಯನ್ನು ನಮ್ಮ ಕಾಂಗ್ರೆಸ್‌ಕಾರ್ಯಕರ್ತರು ಹಾಗೂ ಮುಖಂಡರು ಮನೆಮನೆಗೆ ಹೋಗಿ ಜನತೆಯ ಸಂಕಷ್ಟಕ್ಕೆಸ್ಪಂದಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಅರಕೆರೆ ವಾರ್ಡಿನಲ್ಲಿ ಕಾಂಗ್ರೆಸ್ ಮುಖಂಡಅರಕೆರೆ ಎನ್.ಗೋಪಾಲರೆಡ್ಡಿ ನೇತೃತ್ವದಲ್ಲಿಹತ್ತು ಸಾವಿರ ಆಹಾರ ಕಿಟ್‌ಗಳ ವಿತರಣೆಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದರು.ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಅರಕೆರೆ ವಾರ್ಡಿನಲ್ಲಿ ಮುಖಂಡರಾದ ಎನ್.ಗೋಪಾಲ್ ರೆಡ್ಡಿ ಅವರು ಕಳೆದ ಎರಡು ದಶಕಗಳಿಂದ ಜನರ ಕಷ್ಟ ಸುಖಗಳಿಗೆಪ್ರಾಮಾಣಿಕವಾಗಿ ಸ್ಪಂದಿಸುತ್ತ, ಜನರ ಪ್ರೀತಿವಿಶ್ವಾಸ ಗಳಿಸಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ.
ಇವರು ಯುವ ಕಾಂಗ್ರೆಸ್‌ನಾಯಕರಾಗಿ ಬೆಳೆದು ಜಿಲ್ಲಾ ಮಟ್ಟದಹುದ್ದೆಗಳಲ್ಲಿ ತಮ್ಮದೇ ಆದ ಸಂಘಟನೆ ಮತ್ತುಜನಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.ಕಳೆದ ವರ್ಷ ಕೋವಿಡ್ ಸಂಕಷ್ಟದ ಜನರಸೇವೆಗೆ ಪಣಕಟ್ಟಿ ದುಡಿದು ಜನರ ಪ್ರೀತಿವಿಶ್ವಾಸಗಳಿಸಿದ್ದಾರೆ. ಈ ಬಾರಿಯು ಕ್ಷೇತ್ರಜನರ ಸಂಕಷ್ಟಕ್ಕೆ ಹತ್ತು ಸಾವಿರ ಆಹಾರದ ಕಿಟ್‌ನೀಡುವ ಮೂಲಕ ತಮ್ಮ ಸೇವೆ ಮಾಡುತ್ತಿದ್ದಾರೆ ಇವರು ಇಡೀ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದರು.
ಅರಕೆರೆ ವಾರ್ಡಿನ ಕಾಂಗ್ರೆಸ್ ಮುಖಂಡಹಾಗೂ ಸಮಾಜ ಸೇವಕರಾದ ಎನ್.ಗೋಪಾಲ್ ರೆಡ್ಡಿ ಮಾತನಾಡಿ, ಜನರುಕೊರೊನಾ ಸಂಕಷ್ಟದ ಸುಳಿಯಲ್ಲಿ ಸಿಕ್ಕಿನರಳುತ್ತಿದ್ದಾರೆ. ಇವರ ಸಂಕಷ್ಟಕ್ಕೆ ಸರ್ಕಾರಯಾವುದೇ ರೀತಿಯಲ್ಲಿ ಸಹಾಯಕ್ಕೂಮುಂದಾಗಿಲ್ಲ, ಸ್ಥಳೀಯ ಬಿಜೆಪಿಯಶಾಸಕರು ಹಾಗೂ ಮಾಜಿ ಬಿಬಿಎಂಪಿಸದಸ್ಯರುಗಳ ಕೊಡುಗೆಯು ಶೂನ್ಯವಾಗಿದೆಆದರೆ ಯಾವುದೇ ದಾರಿಯನ್ನು ಕಾಣದೇಸ್ಥಳೀಯ ಜನರು ನೋವುಅನುಭವಿಸುತ್ತಿದ್ದಾರೆ. ಇದಕ್ಕಾಗಿ ನಾನು ನನ್ನಕೈಲಾದಷ್ಟು ಕಳೆದ ಒಂದು ವರೆತಿಂಗಳಿಂದಊಟ, ಆಹಾರ, ಔಷಧೀಯ ಕಿಟ್ ಕೊಡುತ್ತನಮ್ಮದೇ ಅಳಿಲುಸೇವೆ ಮಾಡಿಕೊಂಡುಬರುತ್ತಿದ್ದೇನೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಹಿರಿಯ ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್ ಮಾತನಾಡಿ, ನಮ್ಮ ಬೊಮ್ಮನಹಳ್ಳಿಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಈಭಾಗದಲ್ಲಿ ಗೋಪಾಲ್ ರೆಡ್ಡಿ ತಮ್ಮದೇ ಪಕ್ಷಸಂಘಟನೆ, ಸಾಮಾಜಿಕ ಸೇವೆ ಹಾಗೂಹೋರಾಟದ ಕಾರ್ಯವನ್ನು ನಮ್ಮ ಕಾಂಗ್ರೆಸ್‌ನ ಹಿರಿಯ ಮುಖಂಡು ಹಾಗೂ ಕ್ಷೇತ್ರದಜನರು ಎಂದೆಂದಿಗೂ ಮರೆಯಲಾರದುಎಂದರು.ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್,ಬಿಳೇಕಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್‌ನಾರಾಯಣ್, ರಮೇಶ್, ಆನಂದ್ ರೆಡ್ಡಿ,ಯುವ ಕಾಂಗ್ರೆಸ್ ಮುಖಂಡ ಅಭಿಷೇಕ್‌ಗೋಪಾಲ್ ರೆಡ್ಡಿ, ಲಕ್ಷ್ಮೀನಾರಾಯಣ್,ಹರೀಶ್, ಲೋಹಿತ್, ಮನು ಹಾಗೂಮೋಹನ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ