ರಾಜ್ಯದಲ್ಲಿ ತಗ್ಗಿದ ಕೊರೊನಾ ತೀವ್ರತೆ
Team Udayavani, Jun 17, 2021, 2:35 PM IST
ರಾಜ್ಯದಲ್ಲಿ ತಜ್ಞರ ಸಲಹೆಯಂತೆ ಸೂಕ್ತ ಸಂದರ್ಭದಲ್ಲಿ ವಿವಿಧಹಂತದಲ್ಲಿ ಜನತಾ ಕರ್ಫ್ಯೂ, ಬಿಗಿ ನಿರ್ಬಂಧಗಳನ್ನುಜಾರಿಗೊಳಿಸಿತ್ತು. ಇದರ ಪ್ರತಿಫಲವಾಗಿ ಕೊರೊನಾ ಸೋಂಕಿನಸರಪಳಿಗೆ ಕತ್ತರಿ ಬಿದ್ದಿದ್ದು, ಸೋಂಕಿನ ತೀವ್ರತೆಯನ್ನು ಶೇ 90 ರಷ್ಟುತಗ್ಗಿದೆ.
ಈ ಮೂಲಕ ಕೇವಲ ಒಂದೂವರೆ ತಿಂಗಳಲ್ಲಿಯೇಕೊರೊನಾ ಮಹಾಮಾರಿ ಹತೋಟಿಯಲ್ಲಿ ರಾಜ್ಯ ಸರ್ಕಾರಯಶಸ್ವಿಯಾಗಿದೆ.ಮೇ ಮೊದಲ ವಾರ ಬರೋಬ್ಬರಿ 50 ಸಾವಿರಕ್ಕೆ ಹೆಚ್ಚಳವಾಗಿದ್ದಕೊರೊನಾ ಸೋಂಕು ಪ್ರಕರಣಗಳು ಐದು ಸಾವಿರದ ಆಸುಪಾಸಿಗೆಇಳಿಕೆಯಾಗಿವೆ. ಸೋಂಕು ಪರೀಕ್ಷೆ ಪಾಸಿಟಿವಿಟಿ ದರ ಗರಿಷ್ಠಶೇ.36ರಿಂದ ಶೇ 3ಕ್ಕೆ ತಗ್ಗಿದೆ. à ರೀತಿ ಕೊರೊನಾ ಕೊರೊನಾಮಹಾಮಾರಿ ನಿಯಂತ್ರಣದಲ್ಲಿ ಕರ್ಫ್ಯೂ, ನಿರ್ಬಂಧಗಳು ಅತ್ಯಂತಪ್ರಮುಖ ಪಾತ್ರವಹಿಸಿವೆ.
ಒಟ್ಟಾರೆಯಾಗಿ ಸದ್ಯ ರಾಜ್ಯದಲ್ಲಿಸೋಂಕು ಪ್ರಕರಣ ಮತ್ತು ಪಾಸಿಟಿವಿಟಿ ದರ ಲಾಕ್‌ಡೌನ್‌ಪೂರ್ವದ ಮಟ್ಟಕ್ಕೆ ತಲುಪಿವೆ.ತಜ್ಞರ ಸಲಹೆಯನ್ನು ಪಡೆಯುವ ಮೂಲಕ ಎರಡನೇ ಅಲೆಆರಂಭದಲ್ಲಿ ರಾಜ್ಯ ಸರ್ಕಾರವು ಕರ್ಫ್ಯೂ ಜಾರಿಗೊಳಿಸಿತ್ತು.ಏಪ್ರಿಲ್ ಮೊದಲ ವಾರ ರಾಜ್ಯಕ್ಕೆ ಎರಡು ಅಲೆ ಅಪ್ಪಳಿಸಿತು. ಈಹಿನ್ನೆಲೆ ಏ.10 ರಿಂದ 20ರವರೆಗೂ ಸೋಂಕು ಹೆಚ್ಚಿರುವಬೆಂಗಳೂರು, ಮಂಗಳೂರು, ಉಡುಪಿ -ಮಣಿಪಾಲ,ತುಮಕೂರು, ಮೈಸೂರು, ಕಲಬುರಗಿ, ಬೀದರ್ ಸೇರಿ ಒಟ್ಟುಪ್ರಮುಖ ಎಂಟು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗಳಿಸಿತು.
ಆನಂತರ ಕೊರೊನಾ ಸೋಂಕು ಹೊಸ ಪ್ರಕರಣಗಳು 20 ಸಾವಿರಕ್ಕೆಹೆಚ್ಚಳವಾದ ಹಿನ್ನೆಲೆ ಏಪ್ರಿಲ್ 21 ರಿಂದ ರಾಜ್ಯಾದ್ಯಂತ ರಾತ್ರಿಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿತು. ಬಳಿಕಪ್ರಕರಣಗಳು 30 ಸಾವಿರಕ್ಕೆ ಹೆಚ್ಚಳವಾದ ಹಿನ್ನೆಲೆ ಏ.27 ರಿಂದಎರಡು ವಾರಗಳ ಮಟ್ಟಿಗೆ ದಿನದಲ್ಲಿ ಪೂರ್ಣ ಪ್ರಮಾಣದಕರ್ಫ್ಯೂ ಜಾರಿಗೊಳಿಸಿತು.ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದಬಡವರು, ರೈತರು ಹಾಗೂ ಶ್ರಮಿಕವರ್ಗದವರಿಗೆ ಪ್ಯಾಕೇಜ್ ನೀಡುವಮೂಲಕ ರಾಜ್ಯ ಸರ್ಕಾರ ಸ್ಪಂದಿಸಿದೆ.
ರೈತರು, ಆಟೋ, ಟ್ಯಾಕ್ಸಿ ಚಾಲಕರು, ಕುಶಲಕರ್ಮಿಗಳು. ಬೀದಿ ವ್ಯಾಪಾರಿಗಳು ಸೇರಿದಂತೆಶ್ರಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಮೊದಲಹಂತದಲ್ಲಿ 1250 ಕೋಟಿ ರೂ. ಹಾಗೂಎರಡನೇ ಹಂತದಲ್ಲಿ 500 ಕೋಟಿ ರೂ.ಸೇರಿ 1750 ಕೋಟಿ ರೂ. ಆರ್ಥಿಕಪ್ಯಾಕೇಜ್ ಘೋಷಿಸುವ ಮೂಲಕನೆರವಾಗಿದೆ.ಹೂವು, ಹಣ್ಣು, ತರಕಾರಿಬೆಳೆದು ನಷ್ಟಮಾಡಿಕೊಂಡಿರುವರೈತರಿಗೆ ಹೆಕ್ಟೇರ್‌ಗೆ10 ಸಾವಿರರೂ.,ಆಟೋ ,ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆಹಾಗೂ ಕಟ್ಟಡ ಕಾರ್ಮಿಕರಿಗೆ 3 ಸಾವಿರ ರೂ.,ಕೌÒರಿಕರು, ಅಗಸರು, ಟೈಲರ್, ಹಮಾಲಿ,ಕುಂಬಾರರು, ಅಕ್ಕ ಸಾಲಿಗರು, ಭಟ್ಟಿ ಕಾರ್ಮಿಕರು,ಮೆಕ್ಯಾನಿಕ್, ಕಮ್ಮಾರ, ಗೃಹ ಕಾರ್ಮಿಕರು, ರಸ್ತೆ ಬದಿಬೀದಿ ವ್ಯಾಪಾರಿಗಳಿಗೆ 2 ಸಾವಿರ ರೂ. ಪ್ಯಾಕೇಜ್‌ಘೊಷಿಸಲಾಗಿದೆ. ಕಲಾವಿದರು ಹಾಗೂ ಕಲಾತಂಡಗಳಿಗೆ 3 ಸಾವಿರ ರೂ. ನೀಡುವ ಘೋಷಣೆಮಾಡಿ ಕಷ್ಟದಲ್ಲಿದ್ದವರಿಗೆ ನಾವು ನಿಮ್ಮ ಜತೆಗಿದ್ದೇವೆಎಂದು ಧೈರ್ಯ ತುಂಬಲಾಯಿತು. 500 ಕೋಟಿರೂ. ಪ್ಯಾಕ್‌ಜ್‌ನಲ್ಲಿ ಪವರ್‌ಲೂಮ್ ನೇಕಾರರಿಗೆಮೂರು ಸಾವಿರ ರೂ. ಘೋಷಣೆಮಾಡಲಾಯಿತು.
ಇದರಿಂದ 59ಸಾವಿರ ಜನರಿಗೆ ನೆರವಾಗಲಿದೆ.ಅದೇ ರೀತಿಚಿತ್ರೋದ್ಯಮದ ಅಸಂಘಟಿತ ಕಾರ್ಮಿಕರುಕಲಾವಿದರಿಗೆ 3 ಸಾವಿರ ರೂ. ನೀಡಿದ್ದು 22 ಸಾವಿರಮಂದಿಗೆ ಅನುಕೂಲವಾಗಲಿದೆ.ದೇವಾಲಯಗಳಲ್ಲಿ ಕೆಲಸ ಮಾಡುವ ಅರ್ಚಕರು,ಅಡುಗೆ ಕೆಲಸಗಾರರು, ಸಿಬ್ಬಂದಿ ಮತ್ತುಮಸೀದಿಗಳಲ್ಲಿ ಕೆಲಸ ಮಾಡುವ ಮೌಜ್ವಾನ್‌ಹಾಗೂ ಇಮಾಮ್‌ಗಳಿಗೂ ನೆರವು ವಿಸ್ತರಿಸಿದ್ದುಸಂಕಷ್ಟದಲ್ಲಿರುವ 36 ಸಾವಿರ ಮಂದಿಗೆ ನೆರವಾಗಿದೆ.ಆಶಾ ಕಾರ್ಯಕರ್ತೆಯರು ಹಾಗೂಅಂಗನವಾಡಿ ಕಾರ್ಯಕರ್ತೆಯರ ಬಗ್ಗೆಯೂಕಾಳಜಿ ತೋರಿ ಆಶಾ ಕಾರ್ಯಕರ್ತೆಯರಿಗೆ ತಲಾ3 ಸಾವಿರ ರೂ.ನಂತೆ 42,574 ಮಂದಿಗೆ,ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರಿಗೆತಲಾ 2 ಸಾವಿರ ರೂ. ನಂತರೆ 64,423ಮಂದಿಗೆ ನೆರವು ನೀಡಿತು.
ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ತಲಾ 5ಸಾವಿರ ರೂ. ಅದೇ ರೀತಿ ವಕೀಲರ ಸಂಘದಬೇಡಿಕೆಗೆ ಸ್ಪಂದಿಸಿ ಕಲ್ಯಾಣ ನಿಧಿಗೆ 5ಕೋಟಿರೂ. ಒದಗಿಸಿತು. ಈ ಮೂಲಕ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಎಲ್ಲ ವರ್ಗಕ್ಕೂಅನುಕೂಲ ಕಲ್ಪಿಸಲಾಯಿತು.
3 ಕೋಟಿ ಪರೀಕ್ಷೆ
ಪರೀಕ್ಷೆ ಹೆಚ್ಚಿಸುವ ನಿಟ್ಟಿನಲ್ಲಿ 200ಕ್ಕೂ ಅಧಿಕಪ್ರಯೋಗಾಲಯಗಳು ಕಾರ್ಯಾಚರಣೆಆರಂಭಿಸಲಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿಆರಂಭವಾದ ಕೊರೊನಾ ಪರೀಕ್ಷೆಗಳು ನ. 21ರಂದು ಒಂದು ಕೋಟಿಗೆ, ಮಾರ್ಚ್ 17ರಂದು ಎರಡು ಕೋಟಿ ಹೆಚ್ಚಿದ್ದವು. ಎರಡನೇಅಲೆ ತೀವ್ರವಾದ ಹಿನ್ನೆಲೆ ನಿತ್ಯ ಸರಾಸರಿ1.3 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ.ಈ ಹಿನ್ನೆಲೆ ಕೇವಲ ಮೂರುತಿಂಗಳಲ್ಲಿಯೇ (77 ದಿನ) 1.2ಕೋಟಿಗೂ ಅಧಿಕ ಪರೀಕ್ಷೆನಡೆಸಲಾಗಿದೆ.
ಅರಕಲಗೂಡು ವೈದ್ಯಾಧಿಕಾರಿ ಡಾ.ದೀಪಕ್‌ಗೆ ಪ್ರಶಂಸೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೊರೊನಾನಿಯಂತ್ರಣಕ್ಕೆ ಪರಿಣಾಮಕಾರಿ ಕೆಲಸ ಮಾಡಿರುವ ರಾಜ್ಯದ ಆಯ್ದಕೆಲವು ವೈದ್ಯಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿಪ್ರಶಂಸಿಸಿದರು. ಅಂತಹ ಪ್ರಶಂಸೆಗೆ ಪಾತ್ರರಾದ ವೈದ್ಯರ ಪೈಕಿಅರಕಲಗೂಡು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್‌ಅವರೂ ಕೂಡ ಒಬ್ಬರು ಎಂಬುದು ಜಿಲ್ಲೆಯ ಹೆಮ್ಮೆಯಾಗಿದೆ.ಕೊರೊನಾ ನಿಯಂತ್ರಣ ಕ್ರಮವಾಗಿ ಮುಖ್ಯಮಂತ್ರಿಯವರುಜಿಲ್ಲಾಧಿಕಾರಿಯವರು, ತಜ್ಞರೊಂದಿಗೆ ವೀಡಿಯೋ ಸಂವಾದನಡೆಸುವುದ ಜೊತೆಗೆ ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳೊಂದಿಗೂವೀಡೀಯೋ ಸಂವಾದ ನಡೆಸಿದರು.
ಕಳೆದ ಮೇ.15 ರಂದುವೈದ್ಯಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿಪಾಲ್ಗೊಂಡಿದ್ದ ಡಾ.ದೀಪಕ್ ಅವರು ಅರಕಲಗೂಡು ತಾಲೂಕುಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಕೈಗೊಂಡಿದ್ದ ಕ್ರಮಗಳನ್ನುವಿವರಿಸಿ ಮುಖ್ಯಮಂತ್ರಿಯವರ ಪ್ರಶಂಸೆಗೆ ಪಾತ್ರರಾದರು.ಅತ್ಯಂತ ಕಡಿಮೆ ಸಂಖ್ಯೆಯ ವೈದ್ಯರು ಹಾಗೂ ಸೌಲಭ್ಯವನ್ನುಹೊಂದಿದ್ದರೂ ಗರಿಷ್ಠ ಗುಣಮಟ್ಟದಲ್ಲಿ ಸೋಂಕಿತರಿಗೆ ಚಿಕಿತ್ಸೆನೀಡುತ್ತಿರುವುದರೊಂದಿಗೆ ಪರಿಣಾನಕಾರಿ ಚಿಕಿತ್ಸೆಯೊಂದಿಗೆ ಸಾವಿನಸಂಖ್ಯೆಯನ್ನೂ ನಿಯಂತ್ರಿಸಿದ ಕ್ರಮಕ್ಕೆ ಅರಕಲಗೂಡು ತಾಲೂಕುಆಸ್ಪತ್ರೆಯ ಸಾಧನೆಯನ್ನು ಮೆಚ್ಚಿದ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರು ವೈದ್ಯಾಧಿಕಾರಿ ಡಾ.ದೀಪಕ್ ಅವರನ್ನುಅಭಿನಂದಿಸಿದರು. ಮುಂದೆಯೂ ಇಂತಹದ್ದೆ ಸೇವೆಯೊಂದಿಗೆ ಇತರತಾಲೂಕು ಆಸ್ಪತ್ರೆಗಳಿಗೆ ಪ್ರೇರಣೆಯಾಗಬೇಕು ಎಂದುಮುಖ್ಯಮಂತ್ರಿಯವರು ಆಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.