ರಾಜಧಾನಿ ಶೇ.75ರಷ್ಟು ಅನ್ಲಾಕ್
Team Udayavani, Jun 20, 2021, 6:00 PM IST
ಬೆಂಗಳೂರು:ಕಳೆದ ಎರಡು ತಿಂಗಳಿಂದಕೊರೊನಾಲಾಕ್ಡೌನ್ನಲ್ಲಿದ್ದ ಬೆಂಗಳೂರು ಸೋಮವಾರದಿಂದ ಶೇ.75 ರಷ್ಟು ಅನ್ಲಾಕ್ ಆಗಲಿದೆ.
ಜೂ.21ರಂದು ಲಾಕ್ಡೌನ್ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ದೇವಾಲಯ, ಈಜುಕೋಳ,ಪಬ್, ಮಾಲ್ ಮತ್ತು ವಾಣಿಜ್ಯ ಸಂಕೀರ್ಣಗಳು ಹೊರತು ಪಡಿಸಿ ಇನ್ನುಳಿದ ಎಲ್ಲ ರೀತಿಯ ವ್ಯಾಪಾರ-ವಹಿವಾಟು, ಮೆಟ್ರೋ, ಬಿಎಂಟಿಸಿ ಸೇರಿ ಎಲ್ಲಮಾದರಿಯ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಶೇ.75ರಷ್ಟು ವಾಣಿಜ್ಯಚಟುವಟಿಕೆಗಳು ಗರಿಗೆದರಲಿವೆ.
ಇದರೊಂದಿಗೆ ವಾರಾಂತ್ಯ ಮತ್ತುನೈಟ್ ಕರ್ಫ್ಯೂ ಯಥಾ ಪ್ರಕಾರಮುಂದುವರಿಯಲಿದ್ದು, ಮುಂಜಾನೆ ಆರು ಗಂಟೆಯಿಂದ ಸಂಜೆ ಐದು ಗಂಟೆವರೆಗೆ ಮಾತ್ರ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಲಾಗಿದೆ.
ಈ ಸಂದರ್ಭದಲ್ಲಿ ಹೋಟೆಲ್ನಲ್ಲಿ ಶೇ.50ರಷ್ಟು ಮಂದಿಮಾತ್ರ ಕುಳಿತು ಊಟ ಮಾಡಬಹುದು. ಸಂಜೆಐದು ಗಂಟೆ ಬಳಿಕ ಪಾರ್ಸೆಲ್ಗೆ ಮಾತ್ರ ಅವಕಾಶನೀಡಲಾಗಿದೆ. ಅಲ್ಲದೆ, ಅಗತ್ಯ ವಸ್ತುಗಳು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಖಾನೆಗಳು,ಗಾರ್ಮೆಂಟ್ಸ್ಗಳು ಸೇರಿ ಎಲ್ಲ ಕೈಗಾರಿಕೊದ್ಯಮಗಳು, ಸಾಫ್ಟ್ವೇರ್ ಕಂಪನಿಗಳು ಸೇರಿ ಎಲ್ಲ ಕಂಪನಿಗಳು ಕಾರ್ಯನಿರ್ವಹಿಸಲಿವೆ. ಸಿನಿಮಾ ಮತ್ತುಧಾರಾವಾಹಿಗಳ ಚಿತ್ರೀಕರಣ ಕೂಡಸೋಮವಾರದಿಂದ ಆರಂಭವಾಗಲಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.