ಕೊರೊನಾ ನಿಯಂತ್ರಣಕ್ಕೆ ಪಣ
Team Udayavani, May 29, 2021, 4:41 PM IST
ಕೆಂಗೇರಿ: ಕಷ್ಟದಲ್ಲಿರುವವರ ಕಣ್ಣೀರು ಒರೆಸುವುದು ಗರ್ಭಗುಡಿಯಲ್ಲಿರುವ ದೇವರನ್ನು ಪೂಜಿಸಿದಂತೆ.ಕ್ಷೇತ್ರದಲ್ಲಿರುವ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವಸಚಿವ ಎಸ್.ಟಿ.ಸೋಮಶೇಖರ್ ಅವರ ಕಾರ್ಯಶ್ಲಾಘನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹೇಳಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿಚೋಳನಾಯಕನಹಳ್ಳಿ, ತಾವರೆಕೆರೆ, ಅಜ್ಜನಹಳ್ಳಿ,ಚಿಕ್ಕನಹಳ್ಳಿ ಹಾಗೂ ಚುಂಚನಕುಪ್ಪೆ ಗ್ರಾಪಂವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಗಳ 38 ಕುಟುಂಬಗಳಿಗೆ 1 ಲಕ್ಷ ರೂ. ಧನಸಹಾಯವನ್ನು ವಿತರಿಸಿ ಮಾತ ನಾಡಿದರು.
ಕ್ಷೇತ್ರದ ಜನರು ತಮ್ಮ ಮೇಲೆ ಇಟ್ಟಂತಹ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿರುವ ಸೋಮಶೇಖರ್ ಅವರು ಕ್ಷೇತ್ರದ ಜನರು ಸಂಕಷ್ಟ ದಲ್ಲಿರುವಾಗ ನಿಮ್ಮ ನೆರವಿಗೆ ನಾನು ನಿಲ್ಲುತ್ತೇನೆಎಂಬಂತೆ ಕೊರೊನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಯ ಕುಟುಂಬಕ್ಕೆ ವೈಯಕ್ತಿಕವಾಗಿ 1 ಲಕ್ಷರೂಪಾಯಿಗಳ ಧನ ಸಹಾಯ ಮಾಡುತ್ತಿರುವುದು ನಿಜಕ್ಕೂ ಅವರ ಹೃದಯ ವೈಶಾಲ್ಯತೆಯನ್ನುತೋರಿಸುತ್ತದೆ ಎಂದರು.
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬಚಿಂತನೆಯ ಹೃದಯ ಶ್ರೀಮಂತಿಕೆ ಇದ್ದು ಇದರಲ್ಲಿಯಾವುದೇ ರೀತಿಯ ರಾಜಕೀಯ ಬಣ್ಣವನ್ನುನೋಡಲು ಸಾಧ್ಯವಿಲ್ಲ, ಕ್ಷೇತ್ರದ ಜನರ ಬಗ್ಗೆಸೋಮಶೇಖರ್ ಅವರಿಗೆ ತಾಯಿಯಹೃದಯವಿದೆ ಎಂದು ತಿಳಿಸಿದರು.
ಸಹಕಾರ ಸಚಿವಎಸ್.ಟಿ.ಸೋಮಶೇಖರ್ ಮಾತನಾಡಿ, ಮೂರುಪಕ್ಷಗಳಿಗೆ ಹೋಗಿ ಬಂದಿ ರುವ ಸಿ.ಪಿ ಯೋಗಿಶ್ವರ್,ಮೂರು ಪಕ್ಷಗಳ ಸರ್ಕಾರ ಎನ್ನಬಹುದು.ವಿರೋಧ ಪಕ್ಷಗಳ ಸಲಹೆ, ಸೂಚನೆ ಯನ್ನುತೆಗೆದುಕೊಳ್ಳುವುದು ಎಲ್ಲಾ ಸರ್ಕಾ ರದಲ್ಲೂಮಾಮೂಲಿಯಾಗಿದ್ದು ಇದನ್ನೇ ಮೂರು ಪಕ್ಷಗಳಸರ್ಕಾರ ಎನ್ನುವುದು ತಪ್ಪು ಎಂದರು.
ಸಿಎಂ ಪುತ್ರ ರಾಜ್ಯದ ಉಪಾಧ್ಯಕ್ಷರಾಗಿದ್ದು,ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯಲ್ಲಿತೊಡಗಿಸಿಕೊಂಡಿದ್ದು, ಯಾವುದೇ ರೀತಿಯಲ್ಲಿನನ್ನ ಖಾತೆಯಲ್ಲಿ ಹಸ್ತಕ್ಷೇಪ ನಡೆಸಿಲ್ಲ, ಯಾವುದೇಸಚಿವರ ಖಾತೆಯಲ್ಲೂ ಹಸ್ತಕ್ಷೇಪ ನಡೆಸಿಲ್ಲ.ಸಿ.ಪಿ.ಯೋಗೊಶ್ವರ್ ಅವರ ಹೇಳಿಕೆ ಸತ್ಯಕ್ಕೆದೂರವಾದ ಮಾತು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಹಲವಾರುಯೋಜನೆಗಳನ್ನು ಹಮ್ಮಿಕೊಂಡಿದ್ದು, ನಗರ,ಗ್ರಾಮಾಂತರ ಭಾಗದ ಪ್ರತಿ ಮನೆ ಮನೆಗೆ ತೆರಳಿಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮನವೊಲಿಸಿಕ್ಷೇತ್ರದ ಎಲ್ಲಾ ಜನರಿಗೆ ಅವಶ್ಯಕತೆ ಇದ್ದಲ್ಲಿ ಸೂಕ್ತಚಿಕಿತ್ಸೆ ಕೊಡಿಸಲಾಗುವುದು. ಎಂಥಹ ಪರಿಸ್ಥಿತಿಯಲ್ಲೂ ಜನರು ಧೃತಿಗೆಡದೆ ಸದಾ ಕಾಲನಿಮ್ಮ ರಕ್ಷಣೆಗೆ ನಾನು ಇದ್ದೇನೆ ಎಂಬ ಭರವಸೆನೀಡಲಾಗುವುದು ಎಂದರು.
ಎಂಎಲ್‌ಸಿ ರವಿಕುಮಾರ್, ತಾವರೆಕೆರೆ ಗ್ರಾಪಂಅಧ್ಯಕ್ಷ ಟಿ.ಎಲ್.ಕೆಂಪೇಗೌಡ, ಬೆಂಗಳೂರು ನಗರಜಿಪಂ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ,ಬೆಂಗಳೂರು ದಕ್ಷಿಣ ವಿಭಾಗದಉಪವಿಭಾಗಾಧಿಕಾರಿ ಡಾ.ಶಿವಣ್ಣ, ಚುಂಚನಕುಪ್ಪೆಗ್ರಾಪಂ ಅಧ್ಯಕ್ಷ ಸೂಲಿವಾರ ಬಸವರಾಜು,ಮುಖಂಡರಾದ ನಿಶಾಂತ್ ಸೋಮಶೇಖರ್,ಡಿ.ಹನುಮಂತಯ್ಯ, ಡಿ.ಆನಂದಸ್ವಾಮಿ,ರಾಮಕೃಷ್ಣ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.