ದಿನದ ದುಡಿಮೆ ನಂಬಿ ಬದುಕುವ ಕಾರ್ಮಿಕ ವರ್ಗಕ್ಕೆ ನೆರವು
Team Udayavani, Jun 4, 2021, 1:35 PM IST
ಬೆಂಗಳೂರು: “ಅತ್ಯಂತ ಬಡವರು, ದಿನದ ದುಡಿಮೆನಂಬಿ ಬದುಕುವ ಶ್ರಮಿಕ ವರ್ಗದವರೇಹೆಚ್ಚಾಗಿರುವ ನನ್ನ ಕ್ಷೇತ್ರದಲ್ಲಿ ಕೊರೊನಾಲಾಕ್‌ಡೌನ್ ಹಿನ್ನೆಲೆಯಲ್ಲಿ ಬಹುತೇಕಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದುವೈಯಕ್ತಿಕ ನೆಲೆಗಟ್ಟಿನಲ್ಲಿ ನೆರವುಕಲ್ಪಿಸಲಾಗುತ್ತಿದೆ’ಪುಲಕೇಶಿನಗರ ಶಾಸಕ ಅಖಂಡಶ್ರೀನಿವಾಸಮೂರ್ತಿ ಕ್ಷೇತ್ರದ ಸೇವಾಚಟುವಟಿಕೆಗಳ ಬಗ್ಗೆ ಹೇಳಿದ ಮಾತುಗಳಿವು.ಕ್ಷೇತ್ರದಲ್ಲಿಕೊರೊನಾ ನಿಯಂತ್ರಣಹಾಗೂ ನೆರವುಕಾರ್ಯದ ಬಗ್ಗೆ “ಉದಯವಾಣಿ’ ಜತೆಮಾತನಾಡಿದ ಅವರು, ಬಡವರೇ ಹೆಚ್ಚಾಗಿರುವ ನನ್ನಕ್ಷೇತ್ರದಲ್ಲಿ ಲಸಿಕೆ ಅಭಿಯಾನಕ್ಕೆ ಹೆಚ್ಚು ಒತ್ತುನೀಡಲಾಗಿದೆ ಎಂದು ಹೇಳಿದರು.
ನಿಮ್ಮಕ್ಷೇತ್ರದಲ್ಲಿಕೊರೊನಾ ಪರಿಸ್ಥಿತಿ ಹೇಗಿದೆ?
ಕೊರೊನಾ ಪರಿಸ್ಥಿತಿ ನಿಯಂತ್ರಿಸಲಾಗುತ್ತಿದೆ.ದಟ್ಟಣೆಯ ಪ್ರದೇಶ ವಾದ್ದರಿಂದ ಸಮ ಸ್ಯೆಯೂಹೆಚ್ಚು. ಆದರೂ ಜನರಲ್ಲಿ ಜಾಗೃತಿ ಮೂಲಕಕಡಿವಾಣಕ್ಕೆ ಎಲ್ಲ ರೀತಿಯ ಪ್ರಯತ್ನಮಾಡಲಾಗುತ್ತಿದೆ.
ಲಸಿಕೆ ಅಭಿಯಾನ ಹೇಗೆ ಸಾಗಿದೆ?
ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಕÐವಾ rಗಿದೆ. ದಾಸ್ತಾನು ಇರುವ ಲಸಿಕೆಯಲ್ಲಿ 45ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್‌ಕೊಡಿಸಲಾಗಿದೆ. 18 ರಿಂದ 44 ವರ್ಷದವರಿಗೆಮೊದಲ ಕೊಡಿಸುವ ಸಂಬಂಧಕ್ರಮ ಕೈಗೊಳ್ಳಲಾಗಿದೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆಸಮಸ್ಯೆಯಾಗುತ್ತಿಲ್ಲವೇ?
ಇಲ್ಲ.ಟ್ಯಾನರಿ ರಸ್ತೆಯ ಈದ್ಗಾ ಶಾದಿಮಹಲ್‌ನಲ್ಲಿ80 ಹಾಸಿಗೆ ಆಸ್ಪತ್ರೆ ಸ್ಥಾಪಿಸಿ ಸೋಂಕಿತರಿಗೆ ಚಿಕಿತ್ಸೆನೀಡಲಾಗುತ್ತಿದೆ. ಅಂಬೇಡ್ಕರ್ ಮೆಡಿಕಲ್‌ಕಾಲೇಜಿನಲ್ಲಿ 75 ಹಾಸಿಗೆ ಪುಲಕೇಶಿನಗರ ಕ್ಷೇತ್ರದಸೋಂಕಿತರಿಗೆ ಮೀಸಲಿಡಲಾಗಿದೆ.ಅದರಲ್ಲಿ 45 ಆಕ್ಸಿಜನ್‌ಯುಕ್ತಹಾಸಿಗೆಗಳಾಗಿವೆ.ಹೋಂಐಸೋಲೇಷನ್ ಅನುಕೂಲ ಇದ್ದವರಿಗೆಮನೆ ಬಾಗಿಲಿಗೆ ವೈದ್ಯಕೀಯಕಿಟ್ ನೀಡಲಾಗುತ್ತಿದೆ.
ಕೊರೊನಾ ತಪಾಸಣೆವ್ಯವಸ್ಥೆ ಹೇಗಿದೆ?
ಆಶಾ ಕಾರ್ಯಕರ್ತೆಯರು ಮನೆಮನೆಗೆಭೇಟಿನೀಡಿತಿಳಿವಳಿಕೆ ನೀಡುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ,ಸಮುದಾಯ ಆರೋಗ್ಯ ಕೇಂದ್ರವಷ್ಟೇ ಅಲ್ಲದೆಕ್ಷೇತ್ರದ ಎಲ್ಲ ವಾರ್ಡ್‌ಗಳ ಪ್ರಮುಖ ಸ್ಥಳಗಳಲ್ಲೂತಪಾಸಣೆಗೆ ವ್ಯವಸ್ಥೆ ಮಾಡಿಸಲಾಗುತ್ತಿದೆ.
ಬಡವರಿಗೆ ಕೈಗೊಂಡಿರುವ ನೆರವುಕಾರ್ಯಗಳೇನು?
ನಿತ್ಯ ಬಡವರಿಗೆ 10 ಸಾವಿರ ಆಹಾರ ಪೊಟ್ಟಣವಿತರಿಸಲಾಗುತ್ತಿದೆ. 20 ಸಾವಿರ ಕುಟುಂಬಗಳಿಗೆಆಹಾರ ಧಾನ್ಯಗಳಕಿಟ್ ನೀಡಲಾಗಿದೆ.
ಸರ್ಕಾರ ಘೋಷಿಸಿರುವ ಪ್ಯಾಕೇಜ್ ನಿಮ್ಮಕ್ಷೇತ್ರದವರಿಗೆ ತಲುಪಿದೆಯಾ?
ಸೇವಾಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಕೆಗೆಸರ್ಕಾರ ತಿಳಿಸಿರುವುದರಿಂದ ನಮ್ಮ ಕ್ಷೇತ್ರದ ಆಟೋ,ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರು, ಬೀದಿ ವ್ಯಾಪಾರಿಗಳು, ಕುಶಲಕರ್ಮಿಗಳಿಗೆ ನೆರವುಪಡೆಯಲು ಮಾರ್ಗದರ್ಶನ ನೀಡಲಾಗುತ್ತಿದೆ.ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತುದಾಖಲಾತಿ ಒದಗಿಸುವುದು ಸಮಸ್ಯೆಯಾಗಿದೆ.ಸರ್ಕಾರ ಸರಳೀಕೃತ ವ್ಯವಸ್ಥೆ ಮಾಡಬೇಕಾಗಿದೆ.
ಎಸ್. ಲಕ್ಷ್ಮೀ ನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.