ಕೊರೊನಾ ಲಸಿಕೆ ಹಾಕಿಸುವಲ್ಲಿ ಗೊಂದಲ, ತಾರತಮ್ಯವಿಲ್ಲ
Team Udayavani, Jun 5, 2021, 2:36 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಇದರ ನಿಯಂತ್ರಣಕ್ಕೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪಅವರು, ಕ್ಷೇತ್ರದ ಜನತೆಗೆ ಹಾಸಿಗೆ,ಆಕ್ಸಿಜನ್ ಸಮಸ್ಯೆ, ಬಡ ಕಾರ್ಮಿಕರು,ನಿರ್ಗತಿಕರಿಗೆ ನೆರವು ನೀಡಿರುವ ಬಗ್ಗೆಉದಯವಾಣಿಯೊಂದಿಗೆ ಮಾತನಾಡಿದ್ದಾರೆ.
ನಿಮ್ಮ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆಏನು ಕ್ರಮ ಕೈಗೊಂಡಿದ್ದೀರಾ ?ನನ್ನ ಕ್ಷೇತ್ರದಲ್ಲಿ ಎ. ಸಿಮ್ಟ್ ಮ್ಸ್ ಇರೋರಿಗೆ ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇದ್ದರೆ, ಅಲ್ಲಿಅವಕಾಶ ಕಲ್ಪಿಸಲಾಗಿದೆ. ಬನ್ನೇರುಘಟ್ಟದಲ್ಲಿ 60 ಬೆಡ್‌ಗಳ ಕೋವಿಡ್ ಕೇರ್‌ಸೆಂಟರ್ ಮಾಡಿದ್ದೇವೆ. ಅಂಜನಾಪುರದಲ್ಲಿ60 ಬೆಡ್‌ಗಳ ಕೋವಿಡ್ ಕೇರ್ ಸೆಂಟರನ್ನುತೆರೆಯಲಾಗಿದೆ.
ನಿಮ್ಮ ಕ್ಷೇತ್ರದಲ್ಲಿ ಬೆಡ್, ಆಕ್ಸಿಜನ್ ಸಮಸ್ಯೆಎದುರಾಗಿದೆಯಾ ?
ಆರಂಭದಲ್ಲಿ ಬೆಡ್, ಆಕ್ಸಿಜನ್‌ಸಮಸ್ಯೆ ಇತ್ತು. ಈಗ ಆ ರೀತಿಯಸಮಸ್ಯೆ ಇಲ್ಲ. ಹೋಮ್‌ಐಸೋಲೇಷನ್ ಆಗಿರುವವರಿಗೆಆಕ್ಸಿಜನ್ ಕಾನ್ಸಂಟ್ರೇಟ್‌ಗಳನ್ನುನೀಡಲಾಗುತ್ತಿದೆ. ಲಾಕ್‌ಡೌನ್‌ಪರಿಣಾಮ ತೊಂದರೆಗೆ ಒಳಗಾದಜನರಿಗೆ ಕನಿಷ್ಠ 15 ದಿನಗಳಿಗೆಆಗುವಷ್ಟು ಆಹಾರದಕಿಟ್ ನೀಡಲಾಗುತ್ತಿದೆ.
ಖಾಸಗಿ ಆಸ್ಪತ್ರೆಗಳು ಸರ್ಕಾರದ ಸೂಚನೆಯಂತೆಹಾಸಿಗೆಗಳನ್ನು ನೀಡಿವೆಯೇ ?
ಅದೆಲ್ಲವನ್ನೂ ಅಧಿಕಾರಿಗಳುನೋಡಿಕೊಳ್ಳುತ್ತಿದ್ದಾರೆ. ನಾನು ಆ ಕಡೆಗೆ ಹೆಚ್ಚು ತಲೆಹಾಕುತ್ತಿಲ್ಲ. ನಮ್ಮಲ್ಲಿ ಆ ರೀತಿಯ ಸಮಸ್ಯೆಯಾಗಿಲ್ಲ.
ಬೆಡ್ ಬ್ಲಾಕಿಂಗ್ ಸಮಸ್ಯೆ ಇದೆಯಾ ?
ದೇವರ ದಯೆಯಿಂದ ಆ ರೀತಿಯ ಸಮಸ್ಯೆಯಾಗಿಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಧಿಕಾರಿಗಳುಅದರ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಸಹಕಾರದಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನುವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ.
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.