ಮನೆ ಮನೆಗಳಿಗೆ ತೆರಳಿ ಕೋವಿಡ್ ಪರೀಕ್ಷೆ
Team Udayavani, May 28, 2021, 4:31 PM IST
ಬೆಂಗಳೂರು: ಗ್ರಾಮೀಣ ಪ್ರದೇಶದ ಮನೆಮನೆಗಳಿಗೆ ತೆರಳಿ ಕೋವಿಡ್ ಪರೀಕ್ಷೆನಡೆಸಬೇಕಾದ ಅಗತ್ಯವಿದೆ. ಈ ಕಾರ್ಯಕ್ಕೆಸಂಘ ಸಂಸ್ಥೆಗಳು, ಕಂಪನಿಗಳು ಕೈಜೋಡಿಸಿ ಕೋವಿಡ್ ನಿಯಂತ್ರಣಕ್ಕೆ ನೆರವಾಗುತ್ತಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸಿಡೆಂಟ್ 20-21, ರೋಟರಿ ಬೆಂಗಳೂರು(ಹೈಗ್ರೌಂಡ್ಸ್ ) ಹಾಗೂ ಸಾಯಿಕಾರ್ಪ್ ಹೆಲ್ತ…ಪ್ರ„ವೇಟ್ ಲಿಮಿಟೆಡ್ ಸಂಸ್ಥೆ ಕಾರ್ಪೋರೇಟ್‌ಸಾಮಾಜಿಕ ಹೊಣೆಗಾರಿಕೆಯಡಿ (ಸಿ.ಎಸ್.ಆರ್) ಅಭಿವೃದ್ಧಿಪಡಿಸಿರುವ “ಲ್ಯಾಬ್ ಆನ್‌ವೀಲ್ಸ…’ ಕೋವಿಡ್ ಟೆಸ್ಟಿಂಗ್ ಮೊಬೈಲ್ ಕ್ಲಿನಿಕ್‌ಅನ್ನು ವಿಧಾನಸೌಧದ ಆವರಣದಲ್ಲಿ ಗುರುವಾರಪರಿಶೀಲಿಸಿ ಮಾತನಾಡಿದರು.
ರಾಜ್ಯದ ಅರೆ ನಗರ, ಗ್ರಾಮೀಣಪ್ರದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಆ ಹಿನ್ನೆಲೆಯಲ್ಲಿಗ್ರಾಮೀಣ ಭಾಗದ ಮನೆ ಮನೆಗಳಿಗೆ ತೆರಳಿಹೆಚ್ಚು ಕೋವಿಡ್ ಪರೀಕ್ಷೆ ನಡೆಸಬೇಕಾದಅಗತ್ಯವಿದೆ. “ಸೋಂಕಿತರು ಎಲ್ಲಿರುವರೋಅಲ್ಲೇ ಅವರನ್ನು ಗುರುತಿಸುವುದು’ ಎಂಬ ನೀತಿಪಾಲನೆ ಸದ್ಯದ ಅಗತ್ಯವಾಗಿದೆ ಎಂದರು. ಸಚಿವಆರ್.ಅಶೋಕ್ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.