2 ಡೋಸ್ ಲಸಿಕೆ ಪಡೆದವರಿಗೆ ಡ್ಯೂಟಿ
Team Udayavani, Jun 17, 2021, 2:41 PM IST
ಬೆಂಗಳೂರು: ಲಸಿಕೆ ಪಡೆದವರಿಗೆ ಮಾತ್ರ ಡ್ನೂಟಿನೀಡುವ ಸಾರಿಗೆ ನಿಗಮಗಳ ನಿಯಮವು ಈಗಸಾವಿರಾರು ಸೋಂಕಿತ ನೌಕರರನ್ನು ಇಕ್ಕಟ್ಟಿಗೆಸಿಲುಕಿಸಿದೆ.ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಡ್ನೂಟಿನೀಡುವುದಾಗಿ ಸಾರಿಗೆ ನಿಗಮಗಳು ಹೇಳುತ್ತಿವೆ.ಪ್ರಯಾಣಿಕರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹಕ್ರಮವೂ ಆಗಿದೆ.
ಆದರೆ, ಈ ಎರಡನೇ ಅಲೆಯಲ್ಲಿಸಾವಿರಾರು ಸಾರಿಗೆ ನೌಕರರು ಸೋಂಕಿತರಾಗಿದ್ದಾರೆ.ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರಾರೂಮೂರು ತಿಂಗಳು ಲಸಿಕೆ ಪಡೆಯುವಂತಿಲ್ಲ. ಹಾಗಿದ್ದರೆ,ಅವರ ಕತೆ ಏನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದರಿಂದಅವರೆಲ್ಲರೂ ಅತಂತ್ರರಾಗಿದ್ದಾರೆ.
ಕಡ್ಡಾಯ ರಜೆ ಅಥವಾ ಗೈರು?: ಹಾಗೊಂದು ವೇಳೆಡ್ನೂಟಿ ಸಿಗದಿದ್ದರೆ, ಅವರೆಲ್ಲರೂ ಕಡ್ಡಾಯ ರಜೆಹೋಗಬೇಕು ಅಥವಾ ಹಾಜರಿ ಪುಸ್ತಕದಲ್ಲಿ ಗೈರುಎಂದು ನಮೂದು ಆಗುವ ಸಾಧ್ಯತೆ ಇದೆ. ಆಗವೇತನ ಕಡಿತ ಆಗಬಹುದು. ಇದರಿಂದ ಕುಟುಂಬನಿರ್ವಹಣೆ ಕಷ್ಟ ಆಗಲಿದೆ. ಅಥವಾ ಎರಡು ಡೋಸ್‌ಲಸಿಕೆ ಪಡೆದು, ಕರ್ತವ್ಯ ನಿರ್ವಹಿಸಿದವರಿಗೆ ಆದ್ಯತೆಮೇಲೆ ವೇತನ ಬಿಡುಗಡೆ ಆಗಬಹುದು. ಆಗಲೂ ಈಸೋಂಕಿತರು ಕಡೆಗಣಿಸಲ್ಪಡುವ ಸಾಧ್ಯತೆ ಇದೆ ಎಂದುನಿಗಮದ ಮೂಲಗಳು ಉದಯವಾಣಿಗೆ ತಿಳಿಸಿವೆ.
ಎರಡನೇ ಅಲೆಯಲ್ಲಿ ಸೋಂಕು ತಗುಲಿ,ಗುಣಮುಖ, ಸಕ್ರಿಯ ಸೇರಿದಂತೆ ವಿವಿಧ ಹಂತಗಳಲ್ಲಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯಲ್ಲೇ ಸುಮಾರು 2,500ರಿಂದ 3,000ನೌಕರರಿದ್ದಾರೆ. ಅವರೆಲ್ಲರಿಗೂ ಇದರ ಬಿಸಿ ತಟ್ಟುವನಿರೀಕ್ಷೆ ಇದೆ.ಈ ಮಧ್ಯೆ ಎರಡೂ ಡೋಸ್ ಪಡೆದವರಪ್ರಮಾಣ ಶೇ. 10-15 ಕೂಡ ಇಲ್ಲ. ಸಿಂಗಲ್ ಡೋಸ್‌ಪಡೆದವರು ಶೇ.50ರಷ್ಟು ಇದ್ದಾರೆ. ಉಳಿದವರು ತಮ್ಮತಮ್ಮ ಊರುಗಳಲ್ಲಿ ಇರುವುದರಿಂದ ಲಸಿಕೆಪಡೆಯಲು ಸಾಧ್ಯವಾಗಿಲ್ಲ. ಸ್ಥಳೀಯ ಪ್ರಾಥಮಿಕಆರೋಗ್ಯ ಕೇಂದ್ರ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ಫ್ರಂಟ್‌ಲೈನ್ ವರ್ಕರ್ ಎಂದು ಪರಿಗಣಿಸಿ, ಲಸಿಕೆ ನೀಡಲು ಸೂಚಿಸಲಾಗಿದೆ.
ಆದರೆ, ಇದು ಕೂಡ ಸ್ಥಳೀಯವಾಗಿ ಹಲವುತಾಂತ್ರಿಕ ಕಾರಣಗಳಿಂದ ನಿರೀಕ್ಷಿತ ಫಲ ಸಿಗುತ್ತಿಲ್ಲ. ಈನಡುವೆ ಸರ್ಕಾರದ ಮಟ್ಟದಲ್ಲಿ ಪೂರ್ಣ ಲಾಕ್‌ಡೌನ್‌ತೆರವುಗೊಳಿಸುವ ಮಾತುಗಳು ಕೇಳಿಬರುತ್ತಿವೆ.ಹಾಗೊಂದು ವೇಳೆ ತೆರವಾದರೆ, ಸಾರಿಗೆ ಸೇವೆಗೆನಿಗಮಗಳು ಕೂಡ ಸಿದ್ಧವಾಗಿವೆ.ಸೋಂಕಿನ ಭಯದಿಂದ ಪ್ರಯಾಣಿಕರ ಸಂಖ್ಯೆಯೂವಿರಳವಾಗಿರುತ್ತದೆ. ದಟ್ಟಣೆಗೆ ಅನುಗುಣವಾಗಿಕಾರ್ಯಾಚರಣೆ ಮಾಡಲಾಗುವುದು. ಅಷ್ಟಕ್ಕೂ ಲಸಿಕೆಪಡೆಯದವರನ್ನು ಸಂಪೂರ್ಣವಾಗಿ ದೂರ ಇಡುವುದಿಲ್ಲ. ಅಂತಹವರಿಗೆ ಕೊನೆಯ ಆದ್ಯತೆ ನೀಡಲಾಗುತ್ತದೆಎಂದು ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.