ಶೇ.30ರಷ್ಟು ಸಾವು ತಗ್ಗಿಸಬಹುದಿತ್ತು!
ಒಂದೂ ಡೋಸ್ ಪಡೆಯದ ಅರ್ಧಕರ್ಧ ಜನ
Team Udayavani, Feb 22, 2022, 12:20 PM IST
ಬೆಂಗಳೂರು: ನಿಯಮಿತವಾಗಿ ಲಸಿಕೆ ಪಡೆದಿದ್ದರೆ ನಗರದಲ್ಲಿ ಕೋವಿಡ್-19 ಮೂರನೇ ಅಲೆಯಲ್ಲಿ ಸಂಭವಿಸಿದ ಸಾವು ಪ್ರಕರಣಗಳಲ್ಲಿ ಶೇ.30ರಿಂದ35ರಷ್ಟು ಪ್ರಮಾಣವನ್ನು ತಗ್ಗಿಸಬಹುದಿತ್ತು!
ನಗರ ವ್ಯಾಪ್ತಿಯಲ್ಲಿ ಕಳೆದ ಜ. 1ರಿಂದ ಫೆ. 15ರ ಅವಧಿಯಲ್ಲಿ 380 ಸಾವು ಪ್ರಕರಣಗಳು ಸಂಭವಿಸಿವೆ. ಈ ಪ್ರಕರಣಗಳ ಬಗ್ಗೆ ಪಾಲಿಕೆ ವಿಶ್ಲೇಷಣೆ ಮಾಡಿದ್ದು,ಹೀಗೆ ಸಾವನ್ನಪ್ಪಿದವರಲ್ಲಿ ಶೇ.48 ಮಂದಿ ಕೋವಿಡ್‌ಮೊದಲ ಡೋಸ್ ಪಡೆದಿಲ್ಲದಿರುವುದು ಬೆಳಕಿಗೆಬಂದಿದೆ.
ಒಂದು ವೇಳೆ ಅವರೆಲ್ಲರೂ ಸಿಂಗಲ್ ಡೋಸ್ ಪಡೆದಿದ್ದರೂ ಶೇ.30ರಷ್ಟು ಜನರ ಪ್ರಾಣ ಉಳಿಸಬಹುದಿತ್ತು ಎಂಬ ತೀರ್ಮಾನಕ್ಕೆ ಬರಲಾಗಿದೆ. ಅಂದಹಾಗೆ, ಈ ಸಾವು ಪ್ರಕರಣಗಳ ವಿಶ್ಲೇಷಣಾ ಸಮಿತಿಯು ಖಾಸಗಿಯಾಗಿ ಚಿಕಿತ್ಸೆ ನೀಡಿದ ಆಸ್ಪತ್ರೆಗಳ ಮುಖ್ಯವೈದ್ಯರು, ಪಾಲಿಕೆ ವೈದ್ಯರು ಮತ್ತು ಆಡಳಿತ ವಿಭಾಗದಅಧಿಕಾರಿಗಳನ್ನು ಒಳಗೊಂಡಿದ್ದು, ವಿವಿಧೆಡೆಯಿಂದದಾಖಲಾಗಿರುವ ಸಾವು ಪ್ರಕರಣಗಳ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಿದೆ.
ಅರ್ಧಕ್ಕರ್ಧ ಜನ ಒಂದೂ ಡೋಸ್ ಪಡೆದಿಲ್ಲ: “ಮೂರನೇ ಅಲೆಯಲ್ಲಿ ದಾಖಲಾದ ಸಾವಿನ ಪ್ರಕರಣ ಗಳಲ್ಲಿ ಶೇ.60ರಷ್ಟು ಜನ ಕೊರೊನಾ ಅಲ್ಲದೆ,ಸಹ-ಅಸ್ವಸ್ಥತೆ ಇರುವವರಾಗಿದ್ದಾರೆ. ಮೂತ್ರಪಿಂಡವೈಫಲ್ಯ, ಯಕೃತ್ ಸಮಸ್ಯೆ, ಮಧುಮೇಹ, ರಕ್ತದೊತ್ತಡ,ಕ್ಯಾನ್ಸರ್ ಸೇರಿದಂತೆ ಹಲವು ಪ್ರಕಾರದ ದೀಘಕಾಲದಕಾಯಿಲೆಗಳಿಂದ ಬಳಲುತ್ತಿದ್ದವರಾಗಿ ದ್ದಾರೆ. ಹೀಗೆಸಹ-ಅಸ್ವಸ್ಥತೆಯಿಂದ ಬಳಲಿ ಸಾವನ್ನಪ್ಪಿ ದವರ ಪೈಕಿ ಶೇ.70ರಷ್ಟು ಜನ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.
ನೇರವಾಗಿ ಕೋವಿಡ್ ವೈರಸ್ ಆಕ್ರಮಣ ಮಾಡಿ,ನ್ಯೂಮೋನಿಯಾ ಬಂದು ಮೃತಪಟ್ಟವರು ಶೇ.8ರಿಂದ10ರಷ್ಟು ಇರಬಹುದು. ಒಟ್ಟಾರೆ ಸಾವು ಪ್ರಕರಣಗಳಲ್ಲಿಬಹುತೇಕ ಅರ್ಧಕ್ಕರ್ಧ ಜನ ಒಂದೂ ಡೋಸ್ ಪಡೆದಿಲ್ಲದಿರುವುದು ವಿಶ್ಲೇಷಣೆಯಿಂದ ತಿಳಿದು ಬಂದಿದೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ “ಉದಯವಾಣಿ’ಗೆ ತಿಳಿಸಿದರು.
“ಇನ್ನು ಮಕ್ಕಳ ಸಾವು ಶೇ.2ಕ್ಕಿಂತ ಕಡಿಮೆಯಿದೆ.ಖಂಡಿತವಾಗಿಯೂ ಸಾವಿನ ಪ್ರಮಾಣವನ್ನು ತಗ್ಗಿಸಬಹುದಿತ್ತು. ಹಾಗಂತ, ಲಸಿಕೆಯಿಂದ ಸಾವುತಡೆಯಬಹುದು ಎಂದು ಇದರರ್ಥವಲ್ಲ. ಗಂಭೀರತೆಕಡಿಮೆ ಮಾಡಬಹುದಿತ್ತು’ ಎಂದು ಹೇಳಿದರು.
ಪತ್ತೆಗೆ ಪೊಲೀಸರ ಮೊರೆ!: ಸಾಕಷ್ಟು ಅಭಿಯಾನಗಳು, ಶಿಬಿರಗಳು, ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಕಡ್ಡಾಯದಂತಹ ಹಲವಾರು ಕ್ರಮಗಳನ್ನು ಕೈಗೊಂಡರೂ ನಗರದಲ್ಲಿ ಈಗಲೂ ಸುಮಾರು ಎರಡು ಲಕ್ಷ ಜನ ಲಸಿಕೆಯಿಂದ ಹೊರಗುಳಿದಿದ್ದಾರೆ. 5ರಿಂದ 6 ಲಕ್ಷ ಜನಎರಡನೇ ಡೋಸ್ ಇನ್ನೂ ಪಡೆದಿಲ್ಲ. ಈ ಮಧ್ಯೆ ಒಂದೂವರೆ ಲಕ್ಷ ಜನರಿಗೆ ನಿರಂತರವಾಗಿ ಕರೆಮಾಡಿದರೂ, ಮೊಬೈಲ್‌ಗೆ ಸಿಗುತ್ತಿಲ್ಲ. ಸ್ಥಳಕ್ಕೆ ತೆರಳಿದರೆಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶೇಕಡ ನೂರರಷ್ಟು ಗುರಿಸಾಧನೆ ಕಷ್ಟವಾಗಿದೆ. ಆದ್ದರಿಂದ 1ರಿಂದ 1.5 ಲಕ್ಷ ಜನರಹುಡುಕಾಟಕ್ಕೆ ಪೊಲೀಸರ ಮೊರೆಹೋಗಿದ್ದೇವೆ. ಇದರಲ್ಲಿ20-30 ಸಾವಿರ ಜನರನ್ನು ಪೊಲೀಸರೇ ಪತ್ತೆಹಚ್ಚಿಕೊಟ್ಟಿದ್ದಾರೆ. ಅವರಿಗೆ ಈಗ ಲಸಿಕೆ ನೀಡುವ ಕಾರ್ಯ ನಡೆದಿದೆ ಎಂದು ಡಾ.ಬಾಲಸುಂದರ್ ಅಲವತ್ತುಕೊಂಡರು.
ಮೊದಲೆರಡು ಅಲೆಗಳಲ್ಲೂ ವಿಶ್ಲೇಷಣೆ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲೂ ಸಾವು ಪ್ರಕರಣಗಳನ್ನು ವಿಶ್ಲೇಷಣೆ ಮಾಡಿ ವರದಿ ಸಿದ್ಧಪಡಿಸಲಾಗಿತ್ತು. ಮೊದಲಅಲೆಯಲ್ಲಿ ಸೋಂಕು ಲಕ್ಷಣವಿದ್ದವರ ಪತ್ತೆ ವಿಳಂಬ, ಆಂಬ್ಯುಲೆನ್ಸ್ ಅಲಭ್ಯತೆ, ವಿವಿಧ ರೋಗಗಳಿಂದಬಳಲುತ್ತಿದ್ದವರು ಹಾಗೂ ಚಿಕಿತ್ಸೆ ನೀಡುವ ಮಾಹಿತಿಕೊರತೆಯಿಂದ ಹೆಚ್ಚಿನ ಸಾವು ಸಂಭವಿಸಿತ್ತು. 2ನೇಅಲೆಯ ವೇಳೆ ಹಾಸಿಗೆ ಕೊರತೆ, ಆಮ್ಲಜನಕ ಸಮಸ್ಯೆಹಾಗೂ ಆಸ್ಪತ್ರೆಗೆ ದಾಖಲಾಗುವಲ್ಲಿ ವಿಳಂಬವು ಹೆಚ್ಚುಸಾವು ಸಂಭವಿಸಲು ಕಾರಣವಾಗಿತ್ತು ಎಂದು ವರದಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೊದಲೆರಡು ಅಲೆಯಂತೆಯೇ ಮೂರನೇ ಅಲೆಯಲ್ಲಿ ಸಂಭವಿಸಿದಸಾವಿನ ಪ್ರಕರಣಗಳ ವಿಶ್ಲೇಷಣೆ ಕೂಡನಡೆಸಿ, ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ. ಲಸಿಕೆಯಿಂದ ದೂರ ಉಳಿದವರುಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿರುವುದುತಿ ಳಿದುಬಂದಿದೆ. ವರದಿಯನ್ನು ಮುಖ್ಯಆಯುಕ್ತರು ಪರಿಶೀಲನೆ ನಡೆಸಲಿದ್ದು, ಅವರಸೂಚನೆಯಂತೆ ಮುಂದಿನ ದಿನಗಳಲ್ಲಿಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. -ಡಾ.ಬಾಲಸುಂದರ್, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.