ಬಲವಾದ ಸಾಕ್ಷಿಯೊಂದಿಗೆ ಸಂಶೋಧನಾ ಕೃತಿ ರಚಿಸಿ
Team Udayavani, Jun 18, 2018, 11:49 AM IST
ಬೆಂಗಳೂರು: ಸಂಶೋಧನಾ ಪ್ರಬಂಧವು ಆಧಾರ ಹಾಗೂ ಸತ್ಯನಿಷ್ಠೆಯ ಅಂಶಗಳನ್ನು ಒಳಗೊಂಡಾಗ ಮಾತ್ರ ಚರಿತ್ರೆಯಾಗಲು ಸಾಧ್ಯ ಎಂದು ಪುರಾತತ್ವ ಶಾಸ್ತ್ರಜ್ಞ ಡಾ.ಎಸ್.ನಾಗರಾಜು ಹೇಳಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ “ಚಿದಾನಂದ ಪ್ರಶಸ್ತಿ – 2018′ ಪ್ರದಾನ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕಿ ಡಾ.ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಯಾವುದೇ ವಿಷಯದ ಕುರಿತು ಸಂಶೋಧನ ಕೃತಿ ಅಥವಾ ಲೇಖನ ಬರೆಯುವಾಗ ಅದರ ಹಿಂದೆ ಒಂದು ಬಲವಾದ ಸಾಕ್ಷಿ ಇರಬೇಕು. ಆಗ ಮಾತ್ರ ಓದುಗರಲ್ಲಿ ಕೃತಿಯ ಬಗ್ಗೆ ಆಸಕ್ತಿ ಮೂಡುತ್ತದೆ. ಆದರೆ, ಇಂದು ಸಂಶೋಧಕರು ದಾಖಲೆಗಳಿಲ್ಲದ ಮಾಹಿತಿಗಳನ್ನು ತಮ್ಮ ಪ್ರಬಂಧಗಳಲ್ಲಿ ಉಲ್ಲೇಖೀಸುತ್ತಿದ್ದು, ಇದರಿಂದ ಬರವಣಿಗೆ ಸತ್ವ ಕಳೆದುಕೊಳ್ಳುತ್ತಿದೆ ಎಂದರು.
ಯಾವುದೇ ವಿಚಾರದ ಕುರಿತು ಸಂಶೋಧನೆ ಎಷ್ಟು ಮುಖ್ಯವೋ ಅದರ ದಾಖಲೀಕರಣವೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಧ್ಯಕಾಲಿನ ಕರ್ನಾಟಕ ಮತ್ತು ಭಾರತಕ್ಕೆ ಸಂಬಂಧಿಸಿದ ಇತಿಹಾಸ ಹಾಗೂ ಸಾಂಸ್ಕೃತಿಕ ಅಂಶಗಳ ಕುರಿತ ವಿವರಗಳನ್ನು ಚಿತ್ರಗಳ ಸಹಿತ ಸಂಶೋಧನೆ ನಡೆಸಿ ಅದರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಅಂತರ್ಜಾಲದ ಮೂಲಕ ಜನರಿಗೆ ತಲುಪುವಂತೆ ಸಂಶೋಧಕರಾದ ಕೃಷ್ಣಾನಂದ ಕಾಮತ್ ದಂಪತಿ ಮಾಡಿದ್ದಾರೆ.
ಇನ್ನು ಜ್ಯೋತ್ಸ್ನಾಕೃಷ್ಣಾನಂದ ಕಾಮತ್ ಅವರು ಸಾಮಾಜಿಕ ಇತಿಹಾಸದ ಹಲವು ಮಗ್ಗಲುಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಸಂಶೋಧಕಿಯಾಋಗಿದ್ದು, ಅವರ ಬರಹದಲ್ಲಿ ಎಲ್ಲಿಯೂ ತಪ್ಪು ಹಾಗೂ ಊಹಾಪೋಹಗಳಿಗೆ ಅವಕಾಶವಿಲ್ಲ. ಅವರು ಸತ್ಯನಿಷ್ಠೆ ಮಾಹಿತಿಯನ್ನಷ್ಟೇ ಆಧರಿಸಿ ಕೃತಿಗಳನ್ನು ಬರೆಯುತ್ತಾರೆ ಎಂದು ಪ್ರಶಂಸಿಸಿದರು.
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಶೇಷಶಾಸ್ತ್ರಿ ಮಾತನಾಡಿ, ಜ್ಯೋತ್ಸ್ನಾಅವರು ಕನ್ನಡ, ಇಂಗ್ಲಿಷ್ ಹಾಗೂ ಕೊಂಕಣಿ ಭಾಷೆಗಳಲ್ಲಿ ಒಟ್ಟು 20 ಕೃತಿಗಳನ್ನು ರಚಿಸಿದ್ದಾರೆ. ಇಂದಿಗೂ ಕನ್ನಡದ ಅನೇಕ ಮಹಿಳಾ ಸಂಶೋಧಕರಿಗೆ ಅವರು ಮಾದರಿ ಎಂದರು.
ಸಂಶೋಧಕ ಡಾ.ಎಂ. ಚಿದಾನಂದ ಮೂರ್ತಿ, ವಿಶಾಲಾಕ್ಷಿ ಚಿದಾನಂದ ಮೂರ್ತಿ, ಸಮಿತಿ ಅಧ್ಯಕ್ಷ ಡಾ. ಸಿ.ಯು.ಮಂಜುನಾಥ್, ಕಾರ್ಯದರ್ಶಿ ಎಸ್.ಎಲ್.ಶ್ರೀನಿವಾಸ ಮೂರ್ತಿ, ಖಜಾಂಚಿ ಶಿವಕುಮಾರ್ ಉಪಸ್ಥಿತರಿದ್ದರು.
ಇಂದು ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹೆಚ್ಚಾಗುತ್ತಿದ್ದು, ತಪ್ಪು ಮಾಹಿತಿಗಳನ್ನೇ ಸತ್ಯ ಹಾಗೂ ನಿಖರ ದತ್ತಾಂಶಗಳು ಎಂದು ಜನರಿಗೆ ನಂಬಿಸಲಾತ್ತಿದೆ. ಅಲ್ಲದೇ ಕೃತಿಚೌರ್ಯವು ಹೆಚ್ಚಾಗುತ್ತಿದ್ದು, ಇತರರು ಬರೆದ ಕೃತಿ ಹಾಗೂ ಬರಹಗಳಿಗೆ ಕೆಲವರು ತಮ್ಮ ಹೆಸರುಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಇಂತಹ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ.
-ಡಾ.ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್, ಹಿರಿಯ ಸಂಶೋಧಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.