![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Apr 15, 2023, 3:39 PM IST
ಬೆಂಗಳೂರು: ಐಪಿಎಲ್ ಶುರುವಾಗುತ್ತಿದ್ದಂತೆ ಬೆಟ್ಟಿಂಗ್‌ನ ಇನ್ನೊಂದು ಮುಖ ಅನಾವರಣ ಗೊಂಡಿದ್ದು, ಕೇವಲ 10 ಸೆಕೆಂಡ್‌ಗಳಲ್ಲಿ ಸಾವಿರಾರು ರೂ. ಜೇಬಿಗಿಳಿಸುತ್ತಿದ್ದ ಖತರ್ನಾಕ್ ಗ್ಯಾಂಗ್‌ನ ನಾಲ್ವರು ಆರೋಪಿಗಳು ಕಬ್ಬನ್ ಪಾರ್ಕ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹರಿಯಾಣ ಮೂಲದ ಅಮರ್ ಜಿತ್ ಸಿಂಗ್, ಮೋಹಿತ್ ಬಾತ್ರ, ದುಶ್ಯಂತ್ ಕುಮಾರ್ ಸೋನಿ , ವಿಷಂತ್ ಬಂಧಿತರು.
ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಕ್ಕೂ ಟೀವಿಯಲ್ಲಿ ನೇರಪ್ರಸಾರದ ಮೂಲಕ ತೋರಿಸುವ ಪಂದ್ಯಕ್ಕೂ 10 ಸೆಕೆಂಡ್ ಅಂತರ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳ ಗ್ಯಾಂಗ್‌ನ ಒಂದು ತಂಡ ಮೈದಾನದ ಒಳಗೆ ಹೋಗಿ ಐಪಿಎಲ್ ಪಂದ್ಯದ ಪ್ರತಿ ಬಾಲ್ ಕುರಿತು ಮೆಸೇಜ್ ಮೂಲಕ ದೇಶದ ವಿವಿಧೆಡೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ತಮ್ಮ ಗ್ಯಾಂಗ್‌ನ ಸಹಚರರಿಗೆ ಮಾಹಿತಿ ನೀಡುತ್ತಿತ್ತು. ಇವರು ಕೊಡುವ ಮಾಹಿತಿ ಆಧರಿಸಿ ಟೀವಿ ವೀಕ್ಷಿಸಿ ಬೆಟ್ಟಿಂಗ್ ಕಟ್ಟಲು ಮುಂದಾಗುವವರ ಜತೆಗೆ ಆರೋಪಿಗಳ ಗ್ಯಾಂಗ್ ನ ಇತರ ಸದಸ್ಯರು ಬೆಟ್ಟಿಂಗ್ ಮೂಲಕ ಲಕ್ಷಾಂತರ ರೂ. ಜೇಬಿಗಿಳಿಸುತ್ತಿದ್ದರು.
ದೇಶದ ಪ್ರತಿ ಕ್ರಿಕೆಟ್ ಪಂದ್ಯಕ್ಕೂ ಎಂಟ್ರಿ: ದೇಶದಲ್ಲಿ ಯಾವುದೇ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆದರೂ ಅಲ್ಲಿಗೆ ಬಂಧಿತ ಆರೋಪಿಗಳ ತಂಡವು ಎಂಟ್ರಿ ಕೊಡುತ್ತಿತ್ತು. ಮೈದಾನದಲ್ಲಿ ಕುಳಿತುಕೊಂಡು ಬೆಟ್ಟಿಂಗ್ ದಂಧೆ ನಡೆಸಿ, ಪಂದ್ಯ ಪ್ರಾರಂಭವಾದ ಸಮಯದಿಂದ ಮುಕ್ತಾಯಗೊಳ್ಳುವ ವೇಳೆ ಲಕ್ಷಾಂತರ ರೂ. ಸಂಪಾದಿಸುತ್ತಿತ್ತು. ಆರೋಪಿಗಳು ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಸಹಚರರನ್ನು ಹೊಂದಿದ್ದರು. ಬೆಟ್ಟಿಂಗ್ ಕಳ್ಳಾಟದಲ್ಲಿ ದೆಹಲಿಯಲ್ಲಿ ಆರೋಪಿಗಳ ಗ್ಯಾಂಗ್ ಹಲವು ಸದಸ್ಯರನ್ನು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಪಿಗಳು ಹಲವು ವರ್ಷಗಳಿಂದ ದಂಧೆಯಲ್ಲಿ ತೊಡಗಿಸಿಕೊಂಡು ಇದುವರೆಗೆ ಕೋಟ್ಯಂತರ ರೂ. ವ್ಯವಹಾರ ನಡೆಸಿರುವ ಅನುಮಾನ ವ್ಯಕ್ತವಾಗಿದೆ.
ಮೈದಾನದಲ್ಲಿ ಮಫ್ತಿಯಲ್ಲಿ ಬಂದು ಗ್ಯಾಂಗ್ ಸೆರೆ ಹಿಡಿದ 30 ಪೊಲೀಸರ ಟೀಮ್ : ಆರೋಪಿಗಳ ಕೃತ್ಯದ ಬಗ್ಗೆ ಬಾತ್ಮೀದಾರರಿಂದ ಬಂದ ಸುಳಿವಿನ ಮೇರೆಗೆ 30 ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ಮೈದಾನದಾದ್ಯಂತ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಕ್ರಿಕೆಟ್ ಪಂದ್ಯದ ಮದ್ಯದಲ್ಲಿ ಆಗಾಗ ಮೊಬೈಲ್‌ನಲ್ಲಿ ಹೆಚ್ಚು ಸಕ್ರಿಯವಾಗಿರುವವರು ಹಾಗೂ ಅನುಮಾನಾಸ್ಪದವಾಗಿ ಓಡಾಡುವವರ ಬಗ್ಗೆ ಪರಿಶೀಲಿಸಿದಾಗ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದರು. ಅವರ ಮೊಬೈಲ್ ಪರಿಶೀಲಿಸಿದಾಗ ಕ್ರಿಕೆಟ್ ಬೆಟ್ಟಿಂಗ್‌ನ ವಿವಿಧ ಆ್ಯಪ್‌ಗ್ಳಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾಗಿತ್ತು. ಬಳಿಕ ಇವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಸ್ಥಳೀಯರು ಹಾಗೂ ಹೊರ ರಾಜ್ಯದವರೂ ಭಾಗಿಯಾಗಿ ದ್ದಾರೆ. ಇದೀಗ ಪ್ರಕರಣ ದಲ್ಲಿ ಶಾಮೀಲಾಗಿರುವ ಇತರ ಆರೋಪಿಗಳಿಗೆ ಶೋಧ ನಡೆಸಲಾ ಗುತ್ತಿದೆ. ಪ್ರಕರಣದ ತನಿಖೆ ನಡೆಸಿ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ●ಶ್ರೀನಿವಾಸ ಗೌಡ, ಡಿಸಿಪಿ, ಕೇಂದ್ರ ವಿಭಾಗ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.