Crime: ಪತ್ನಿ, ಮಗಳಿಗೆ ನಿಂದಿಸಿದಕ್ಕೆ ಸ್ನೇಹಿತನ ಕೊಲೆ
Team Udayavani, Nov 12, 2023, 9:16 AM IST
ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತ ನನ್ನು ಕೊಲೆಗೈದಿದ್ದ ಕ್ಯಾಬ್ ಚಾಲಕನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿ ಉಪನಗರ ನಿವಾಸಿ ಆರ್. ಮಾದೇಶ್ (36) ಬಂಧಿತ.
ಆರೋಪಿ ನ.7 ರಂದು ಕೆಂಗೇರಿ ನಿವಾರಿ ರಾಜಕುಮಾರ್(34) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ ಎಂದು ಪೊಲೀಸರು ಹೇಳಿದರು.
ಆರೋಪಿ ಮಾದೇಶ್ ಮತ್ತು ಕೊಲೆಯಾದ ರಾಜಕುಮಾರ್ ಬಾಲ್ಯ ಸ್ನೇಹಿತರಾಗಿದ್ದು, ಇಬ್ಬರು ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿ ದ್ದರು. ಈ ಮಧ್ಯೆ ಕೆಲ ದಿನಗಳ ಹಿಂದೆ ಮಾದೇಶ್ ಮತ್ತು ರಾಜಕುಮಾರ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಬಳಿಕ ಇತರೆ ಸ್ನೇಹಿ ತರು ಮಧ್ಯಪ್ರವೇಶಿಸಿ ರಾಜಿಸಂಧಾನ ಮಾಡಿದ್ದರು.
ಪತ್ನಿ, ಮಗಳ ಬಗ್ಗೆ ಕೆಟ್ಟ ಮಾತನಾಡಿದ್ದಕ್ಕೆ ಕೊಲೆ: ನ.6ರಂದು ರಾತ್ರಿ ಮಾದೇಶ್ ಮತ್ತು ರಾಜಕುಮಾರ್ ಇಬ್ಬರು ಕೆಂಗೇರಿ ಉಪನಗರದ ಮಾನಸ ಲೇಔಟ್ ಬಳಿ ಮದ್ಯ ಸೇವಿಸುತ್ತಿದ್ದರು. ಈ ವೇಳೆ ರಾಜಕುಮಾರ್, ಈ ಹಿಂದೆ ನಡೆದಿದ್ದ ಗಲಾಟೆಯನ್ನು ಉಲ್ಲೇಖೀಸಿ ಮಾದೇಶನ ಪತ್ನಿ ಮತ್ತು ಮಗಳ ಬಗ್ಗೆ ಕೆಟ್ಟ ಶಬ್ಧಗಳಿಂದ ನಿಂದಿಸಿದ್ದಾನೆ. ಅದರಿಂದ ಆಕ್ರೋಶಗೊಂಡ ಆರೋಪಿ, ಚಾಕುವಿನಿಂದ ರಾಜಕುಮಾರ್‌ನ ಹೊಟ್ಟೆಗೆ ಇರಿದು ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ರಾಜಕುಮಾರ್ ಸಹೋದರ ರವಿ ಎಂಬವರು ಕೊಲೆ ಪ್ರಕರಣ ದಾಖಲಿಸಿದ್ದರು. ನಂತರ ತನಿಖೆ ನಡೆಸಿದಾಗ ಮಾದೇಶ್ ಕೃತ್ಯ ಎಸಗಿರುವುದು ಪತ್ತೆಯಾಗಿ, ಆರೋಪಿಯನ್ನು ಬಂಧಿಸಲಾಗಿದೆ.
ಕೆಂಗೇರಿ ಠಾಣಾಧಿಕಾರಿ ಎಚ್.ಬಿ.ಸಂಜೀವಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.