![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 7, 2023, 12:06 PM IST
ಬೆಂಗಳೂರು: ಪಶ್ಚಿಮ ಮತ್ತು ಉತ್ತರ ವಿಭಾಗ ಪೊಲೀಸರ ಕಾರ್ಯಾಚರಣೆ ಯಲ್ಲಿ ಸುಲಿಗೆ, ಮನೆ ಕಳವು ಮಾಡುತ್ತಿದ್ದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ.
ರಾತ್ರಿ ವೇಳೆ ಪಾದಚಾರಿಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಗಜೀವನರಾಮನಗರ ಪೊಲೀಸರು ಬಂಧಿದ್ದಾರೆ.
ತಿಲಕನಗರದ ಮೊಹಮ್ಮದ್ ಯೂನೀಸ್(29) ಮತ್ತು ವಿನಾಯಕ ನಗರದ ಮೊಹಮ್ಮದ್ ಇರ್ಫಾನ್(22) ಬಂಧಿತರು.
ಆರೋಪಿಗಳಿಂದ 2 ದ್ವಿಚಕ್ರ ವಾಹನ ಹಾಗೂ 7 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊ ಬ್ಬರು ನಡೆದುಕೊಂಡು ಹೋಗುವಾಗ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ 30 ಸಾವಿರ ರೂ. ಕಸಿದು ಪರಾರಿಯಾಗಿ ದ್ದರೆಂದು ಪೊಲೀಸರು ಹೇಳಿದರು. ಅಪರಾಧ ಹಿನ್ನೆಲೆವುಳ್ಳ ಆರೋಪಿಗಳು ಸಂಬಂಧಿಕರಾಗಿದ್ದು, ಮೋಜಿಗಾಗಿ ಕೃತ್ಯ ವೆಸಗುತ್ತಿದ್ದರು. ಆರೋಪಿಗಳ ಪೈಕಿ ಮೊಹಮ್ಮದ್ ಯೂನೀಸ್ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಮನೆ ಕಳ್ಳ ಬಂಧನ: ರಾತ್ರಿ ವೇಳೆ ಮನೆ ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಮೊಹಮ್ಮದ್ ಅಶ್ವಾಕ್, ಮೋಯಿನುದ್ದೀನ್ ಬಂಧಿತರು. ಆರೋಪಿ ಗಳಿಂದ 18 ಲಕ್ಷ ರೂ. ಮೌಲ್ಯದ 230 ಗ್ರಾಂ ಚಿನ್ನಾಭರಣ, 72 ಗ್ರಾಂ ಬೆಳ್ಳಿ ವಸ್ತುಗಳು, 4 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀ ಚೆಗೆ ಠಾಣೆ ವ್ಯಾಪ್ತಿ ಮನೆಯೊಂದರ ಬೀಗ ಮುರಿದು ಕಳವು ಮಾಡಿದ್ದರು. ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗಳನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದವನ ಬಂಧನ: ಮನೆ ಬಾಗಿಲು ಮೀಟಿ ಚಿನ್ನಾಭರಣ ಕಳವು ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಸಂಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಬ್ರೋತೋ ಮಂಡಲ್(27) ಬಂಧಿತ. ಆರೋಪಿಯಿಂದ 10.5 ಲಕ್ಷ ರೂ. ಮೌಲ್ಯದ 211 ಗ್ರಾಂ ತೂಕದ ಚಿನ್ನಾ ಭರಣ, 75 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿ ಪಟೇಲಪ್ಪ ಲೇಔಟ್ ನಿವಾಸಿಯೊಬ್ಬರ ಮನೆಯ ಹಿಂಬಾಗಿಲು ಮೀಟಿ ಚಿನ್ನಾಭರಣ ದೋಚಿದ್ದ. ಘಟನಾ ಸ್ಥಳ ಸಮೀಪದ ಸಿಸಿ ಕ್ಯಾಮೆರಾ ಗಳು ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಕೆಲ ತಿಂಗಳ ಹಿಂದಷ್ಟೇ ಈತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದರು. ಜೈಲಿನಿಂದ ಬಿಡುಗಡೆ ಯಾಗಿ ಬಂದು ಮತ್ತೆ ಅದೇ ಕೃತ್ಯ ಮುಂದುವರಿಸಿದ್ದಾನೆ. ಜೆ.ಸಿ.ನಗರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್, ಠಾಣಾಧಿಕಾರಿ ಎ.ಗುರು ಪ್ರಸಾದ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ. ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರ ಬಂಧನ: ಮನೆಯ ಡೋರ್ ಲಾಕ್ ಮುರಿದು ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ಳೆಕಳ್ಳಿ ನಿವಾಸಿ ರವಿಕುಮಾರ್, ಮೈಸೂ ರು ಮೂಲದ ಇಮ್ರಾನ್, ಕೆಂಗೇರಿ ನಿವಾಸಿ ಜಯಕುಮಾರ್ ಬಂಧಿತರು.
ಆರೋಪಿಗಳಿಂದ 6.45 ಲಕ್ಷ ರೂ. ಮೌಲ್ಯದ 129 ಗ್ರಾಂ ಚಿನ್ನಾಭರಣ, 1.08 ರೂ. ನಗದು ಹಾಗೂ 2 ಬೈಕ್ ವಶಕ್ಕೆಪಡೆಯಲಾಗಿದೆ. ಶೆಟ್ಟಿಹಳ್ಳಿ ಯಲ್ಲಿರುವ ಮನೆಯೊಂದರ ಬಾಗಿಲು ಡೋರ್ ಲಾಕ್ ಮುರಿದು ಕೃತ್ಯ ಎಸಗಿ ದ್ದರು ಎಂದು ಪೊಲೀಸರು ಹೇಳಿದರು.
ಪೀಣ್ಯ ಎಸಿಪಿ ಸದಾನಂದ ಎ.ತಿಪ್ಪಣ್ಣ ನವರ್, ಠಾಣಾಧಿಕಾರಿ ಎಂ.ಹನುಮಂತ ರಾಜು ಕಾರ್ಯಚರಣೆ ನೇತೃತ್ವ ವಹಿಸಿದ್ದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.