Crime: ನೇಪಾಳಿ ಯುವಕನ ಕೊಲೆಗೈದಿದ್ದ 8 ಮಂದಿ ಸೆರೆ

Team Udayavani, Nov 30, 2023, 10:20 AM IST

Crime: ನೇಪಾಳಿ ಯುವಕನ ಕೊಲೆಗೈದಿದ್ದ 8 ಮಂದಿ ಸೆರೆ

ಬೆಂಗಳೂರು: ಸ್ನೇಹಿತರ ಜತೆ ಕ್ಯಾಬ್‌ಗಾಗಿ ಕಾಯುತ್ತಿದ್ದ ನೇಪಾಳ ಮೂಲದ ಯುವಕನಿಗೆ ದೊಣ್ಣೆಯಿಂದ ಹೊಡೆದು ಕೊಲೆಗೈದು, ದರೋಡೆ ಮಾಡಿದ್ದ ಎಂಟು ಮಂದಿ ಆರೋಪಿಗಳನ್ನು ಆರ್‌ಎಂಸಿ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ.

ಚಂದ್ರು ( 2 8 ) , ಜೀವನ್‌ (26), ಕಾರ್ತಿಕ್‌ (29), ಕಿರಣ್‌ ಕುಮಾರ್ ( 2 5 ) , ಮದನ್( 2 4 ) , ಮುನೇಶ್ ( 2 5 ), ನಿಖಿಲ್‌(27), ಸಚಿನ್‌ (30) ಬಂಧಿತರು. ಆರೋಪಿಗಳೆಲ್ಲರೂ ದೊಡ್ಡ ಬಿದರಕಲ್ಲು, ಬಾಗಲಗುಂಟೆ ನಿವಾಸಿಗಳಾಗಿದ್ದಾರೆ. ಆರೋಪಿಗಳಿಂದ 1 ಮೊಬೈಲ್‌, 5,200 ರೂ. ನಗದು, 1 ಗೂಡ್ಸ್‌ ವಾಹನ, 7 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

ಈ ಪೈಕಿ ಚಂದ್ರು, ಕಾರ್ತಿಕ್‌, ಸಚಿನ್‌ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ. ನ.13ರಂದು ನೇಪಾಳ ಮೂಲದ ಅನಿಲ್‌ಬೊಹರ ಎಂಬಾತನನ್ನು ಕೊಲೆಗೈದು, ದರೋಡೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ನೇಪಾಳ ಮೂಲದ ಅನಿಲ್‌ ಬೊಹರ ಮತ್ತು ಸ್ನೇಹಿತರು ಶ್ರೀರಾಮಪುರದ ಗ್ಲಾಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ನ.13ರಂದು ನಸುಕಿನ 3 ಗಂಟೆಗೆ ಊಟ ಮಾಡಿಕೊಂಡು ಮನೆಗೆ ಹೋಗಲು ಆರ್‌ಎಂಸಿ ಯಾರ್ಡ್‌ನ 1ನೇ ಗೇಟ್‌ ರಸ್ತೆಯ ದೇವಸ್ಥಾನದ ಮುಂದೆ ಕ್ಯಾಬ್‌ ಬುಕ್‌ ಮಾಡಿ ಕಾಯುತ್ತಿದ್ದರು. ಆಗ ಕೆಟಿಎಂ ಬೈಕ್‌ ಹಾಗೂ ಗೂಡ್ಸ್‌ ವಾಹನದಲ್ಲಿ ಬಂದ 10 ಮಂದಿ ದೊಣ್ಣೆಯಿಂದ ಅನಿಲ್‌ ಬೊಹರ ತಲೆಗೆ ಹೊಡೆದಿದ್ದಾರೆ. ಆತನ ಜತೆಗಿದ್ದ ಸ್ನೇಹಿತರಿಗೂ ಹಲ್ಲೆ ನಡೆಸಿ 2 ಮೊಬೈಲ್‌, 5,200 ರೂ. ಕಸಿದುಕೊಂಡು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿಲ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಈ ಮಧ್ಯೆ ಗಂಭೀರವಾಗಿ ಗಾಯಗೊಂಡಿದ್ದ ಅನಿಲ್‌ ಬೊಹೆರ ಚಿಕಿತ್ಸೆ ಫ‌ಲಕಾರಿಯಾಗದೆ ನ.22ರಂದು ಮೃತಪಟ್ಟಿದ್ದ.

ಈ ಸಂಬಂಧ ಆರೋಪಿಗಳ ವಿರುದ್ಧ ದರೋಡೆ ಜತೆಗೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಪಟಾಕಿ ತರಲು ಹೋದವರು ಕೊಲೆಗೈದರು!: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆರೋಪಿಗಳೆಲ್ಲರೂ ಒಟ್ಟಿಗೆ ನ.13ರಂದು ರಾತ್ರಿ ಪಟಾಕಿ ತರಲು ಹೋಗಿದ್ದರು. ನ.14ರ ನಸುಕಿನ 3 ಗಂಟೆಗೆ ವಾಪಸ್‌ ಮನೆಗೆ ಬರುವಾಗ ತಮ್ಮ ಮೋಜು-ಮಸ್ತಿಗಾಗಿ ದರೋಡೆ ಮಾಡಿ ಹಣ ಸಂಪಾದಿಸಲು ನಿರ್ಧರಿಸಿದ್ದಾರೆ. ಅದೇ ವೇಳೆ ಆರ್‌ಎಂಸಿ ಯಾರ್ಡ್‌ ಗೇಟ್‌ ಮುಂಭಾಗ ನಿಂತಿದ್ದ ಅನಿಲ್‌ ಬೊಹೆರ ಹಾಗೂ ಆತನ ಸ್ನೇಹಿತರ ಮೇಲೆ ದೊಣ್ಣೆಗಳಿಂದ ಹೊಡೆದು ಕೊಲೆಗೈದು, ದರೋಡೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚುರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ  

Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ  

Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ

Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ

Atul Subhash: ಟೆಕಿ ಅತುಲ್‌ ಪತ್ನಿ ಬೇಲ್‌ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್ ‌

Atul Subhash: ಟೆಕಿ ಅತುಲ್‌ ಪತ್ನಿ ಬೇಲ್‌ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್ ‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.