Crime: ಪತಿಗೆ ಗಂಡಾಂತರವಿದೆ ಎಂದು ಮಹಿಳೆ ಕಿವಿಯೋಲೆ ಕದ್ದು ಪರಾರಿಯಾದ ಬುಡುಬುಡಿಕೆ ವೇಷಧಾರಿ
Team Udayavani, Jan 30, 2024, 3:04 PM IST
ಬೆಂಗಳೂರು: ಪತಿಗೆ ಗಂಡಾಂತರವಿದೆ ಎಂದು ಹೆದರಿಸಿದ ಬುಡುಬುಡಿಕೆ ವೇಷಧಾರಿಯೊಬ್ಬ ಮಹಿಳೆಯೊಬ್ಬರ ನಾಲ್ಕು ಗ್ರಾಂ ತೂಕದ ಕಿವಿಯೋಲೆ ಬಿಚ್ಚಿಸಿಕೊಂಡು ಬಳಿಕ ಕದ್ದು ಪರಾರಿಯಾಗಿರುವ ಘಟನೆ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಗುಬ್ಬಿಯ ಜನತಾ ಕಾಲೋನಿ ನಿವಾಸಿ ಶಕುಂತಲಾ (25) ಚಿನ್ನದ ಕಿವಿಯೋಲೆ ಕಳೆದುಕೊಂಡವರು. ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?: ಜ.28ರಂದು ಬೆಳಗ್ಗೆ 10 ಗಂಟೆಗೆ ದೂರುದಾರರಾದ ಶಕುಂತಲಾ ಒಬ್ಬರೇ ಇದ್ದರು. ಆಗ ಬುಡುಬುಡಿಕೆ ನುಡಿಸುತ್ತಾ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದಿದ್ದಾನೆ. ಈ ವೇಳೆ ಆತ “ನಿನ್ನ ಗಂಡನಿಗೆ ಗಂಡಾಂತರವಿದೆ. ಪೂಜೆ ಮಾಡದಿದ್ದರೆ 9 ದಿನಗಳಲ್ಲಿ ಮರಣ ಹೊಂದುತ್ತಾನೆ. ಇದನ್ನು ತಪ್ಪಿಸಬೇಕಾದರೆ, ಒಂದು ಪೂಜೆ ಮಾಡಬೇಕು’ ಎಂದು ಹೆದರಿಸಿದ್ದಾನೆ. ಅದರಿಂದ ಆತಂಕ ಗೊಂಡ ಶಕುಂತಲಾ, ಪೂಜೆ ಮಾಡಿಸಲು ಒಪ್ಪಿದ್ದಾರೆ. ಅದರಂತೆ ಆ ವ್ಯಕ್ತಿ ಮಡಿಕೆಯೊಂದನ್ನು ತೆಗೆದು, ಅದಕ್ಕೆ ಅಕ್ಕಿ, ಕುಂಕುಮ, ಅರಿಶಿನ ಹಾಕಿದ್ದಾನೆ. ಬಳಿಕ ಕಿವಿಯೋಲೆ ಬಿಚ್ಚಿಡುವಂತೆ ಸೂಚಿಸಿದ್ದಾನೆ. ಪತಿ ಪ್ರಾಣ ಉಳಿಸಿಕೊಳ್ಳುವ ಧಾವಂತ ದಲ್ಲಿದ್ದ ಶಂಕುತಲಾ ತಮ್ಮ ಕಿವಿಯೋಲೆಗಳನ್ನು ಬಿಚ್ಚಿಟ್ಟಿದ್ದಾರೆ.
ಬಳಿಕ ಆತ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಪೂಜೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಆತನ ಮಾತಿನಂತೆ ಶಕುಂತಲಾ ಕಣ್ಣು ಮುಚ್ಚಿ ಕುಳಿತಿದ್ದಾರೆ. ಈ ವೇಳೆಯೇ ಮಡಕೆಯಲ್ಲಿದ್ದ ಕಿವಿಯೋಲೆಯನ್ನು ಕದ್ದು ತನ್ನ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಾನೆ.
ಬಳಿಕ ಆ ಮಡಕೆ ಸುತ್ತ ದಾರಕಟ್ಟಿದ್ದಾನೆ. ನಿಮ್ಮ ಗಂಡ ಬಂದ ಬಳಿಕ ಮಡಕೆಯನ್ನು ತೆರೆದು ನೋಡಿ ಎಂದು ಸೂಚಿಸಿ ಮನೆಯಿಂದ ಪರಾರಿಯಾಗಿದ್ದಾನೆ. ಸಂಜೆ ಗಂಡ ಮನೆಗೆ ಬಂದ ನಂತರ ಶಕುಂತಲಾ ಮಡಕೆ ತೆರೆದು ನೋಡಿದಾಗ ಕಿವಿಯೋಲೆ ಇಲ್ಲದಿರುವುದು ಕಂಡು ಬಂದಿದೆ.
ಇದನ್ನೂ ಓದಿ: Union Budget 2024: ಜಿಲ್ಲೆಗೆ ಹೆಚ್ಚುವುದೇ ರೈಲ್ವೆ ಸೌಲಭ್ಯ- ವಿಸ್ತರಣೆಯಾಗುವವೇ ರೈಲು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.