ಮಹಿಳೆಯನ್ನು ಹಿಂಬಾಲಿಸುತ್ತಿದ್ದವ..!
Team Udayavani, Dec 15, 2021, 10:12 AM IST
Representative Image used
ಬೆಂಗಳೂರು: ರಾತ್ರಿ ಓಡಾಡುವ ಮಹಿಳೆಯರು ಮತ್ತು ಯುವತಿಯರನ್ನು ಹಿಂಬಾಲಿಸಿ, ಅವರಲ್ಲಿ ಭಯ ಮೂಡಿಸಿ ವಿಕೃತಿ ಮೆರೆದು ಸಂತಸಪಡುತ್ತಿದ್ದ ಬಿಹಾರ ಮೂಲದ ವೈದ್ಯ ಕೀಯ ವಿದ್ಯಾರ್ಥಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜಯನಗರ ನಿವಾಸಿ ವಿಜಯ್ ಭಾರದ್ವಾಜ್ ಬಂಧಿತ. ಈಗಾಗಲೇ ಎಂಬಿಬಿಎಸ್ ಪದವಿ ವ್ಯಾಸಂಗ ಮುಗಿಸಿ, ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಸಿಗ್ನಲ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಕಾರಿನ ನಂಬರ್ ನೆರವಿನಿಂದ ಆರೋಪಿ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿ. 11ರಂದು ಬನಶಂಕರಿ ನಿವಾಸಿ ದೀಪಾ ಎಂಬುವರು ತಮ್ಮ ಮಕ್ಕಳ ಜತೆ ಹೊಸಕೋಟೆಯ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ತಡರಾತ್ರಿ ತಮ್ಮ ಮನೆಗೆ ವಾಪಸ್ ಆಗುತ್ತಿದ್ದರು. ಆ ವೇಳೆ ಹೆಬ್ಟಾಳದ ಬಳಿ ಅವರ ಕಾರಿನ ಟೈರ್ ಪಂಕ್ಚರ್ ಆಗಿತ್ತು.
ಹಾಗಾಗಿ, ದೀಪಾ ಅವರು ಕಾರಿನಿಂದ ಇಳಿದು ಟೈರ್ ಬದಲಿಸುತ್ತಿದ್ದಾಗ, ಅಪ ರಿಚಿತ ಕಾರೊಂದು ಇವರ ಪಕ್ಕ ಬಂದು ನಿಂತಿತ್ತು. ಕಾರಿ ನಲ್ಲಿದ್ದ ವ್ಯಕ್ತಿ, ದೀಪಾ ಅವರ ಪುತ್ರಿಗೆ ಅಸಭ್ಯವಾಗಿ ಪ್ರಶ್ನಿಸಿದ್ದ. ಅಲ್ಲದೆ, ದೀಪಾ ಅವರನ್ನು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಗಾಬರಿಗೊಂಡ ಅವರು ಚೀರಾಡಿ ಆತನನ್ನು ಪಕ್ಕಕ್ಕೆ ತಳ್ಳಿ, ತಮ್ಮ ಕಾರು ಏರಿ ಹೊರವರ್ತುಲ ರಸ್ತೆ ಮೂಲಕ ಗೋರಗುಂಟೆ ಪಾಳ್ಯ ವೃತ್ತಕ್ಕೆ ಬಂದಿದ್ದರು.
ಇದನ್ನೂ ಓದಿ;- ಲಂಚಕ್ಕಾಗಿ ಹಪಹಪಿ: ಐಟಿಐ ಕಾಲೇಜು ಪ್ರಾಚಾರ್ಯ ಎಸಿಬಿ ಬಲೆಗೆ
ಆದರೂ ಆರೋಪಿ ಅವರ ಕಾರು ಹಿಂಬಾಲಿಸಿಕೊಂಡೇ ಬರುತ್ತಿದ್ದ. ಗೊರಗುಂಟೆಪಾಳ್ಯದ ಬಳಿ ಮತ್ತೂಮ್ಮೆ ಕಾರು ಅಡ್ಡಗಟ್ಟಲು ಯತ್ನಿಸಿದ್ದ. ಇದರಿಂದ ಹೆದರಿದ ಮಹಿಳೆ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಹಾಯ ಕೋರಿದ್ದರು ಠಾಣೆಯಲ್ಲೇ ತಾಯಿ ಮಕ್ಕಳಿಗೆ ರಕ್ಷಣೆ ಫೋನ್ ಕರೆ ಬರುತ್ತಿದ್ದಂತೆ ಆರ್‌ಎಂಸಿ ಯಾರ್ಡ್ ಠಾಣೆಯ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.
ಗಸ್ತುವಾಹನ ನೋಡಿದ ತಕ್ಷಣ ಆರೋಪಿ ಅಲ್ಲಿಂದ ಪರಾರಿಯಾದ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ವೇಳೆ ಮುಂಜಾನೆ 4 ಗಂಟೆಯಾಗಿದ್ದರಿಂದ ಮಹಿಳೆ ಹಾಗೂ ಅವರ ಮಕ್ಕಳನ್ನು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಆರ್‌ಎಂಸಿ ಯಾರ್ಡ್ ಠಾಣೆಗೆ ಕರೆದೊಯ್ದಿದ್ದು, ಬೆಳಗ್ಗೆವರೆಗೂ ತಾಯಿ-ಮಕ್ಕಳಿಗೆ ಆಶ್ರಯ ನೀಡಿದ್ದರು. ನಂತರ ಸುರಕ್ಷತವಾಗಿ ಮನೆಗೆ ಕಳುಹಿಸಿಕೊಟ್ಟಿದ್ದರು.
ಸಿಸಿ ಕ್ಯಾಮೆರಾ ನೀಡಿದ ಸುಳಿವು
ಘಟನೆ ನಡೆದ ಸ್ಥಳದ ಆಧಾರ ಹಾಗೂ ಆ ಕಾರಿನ ನಂಬರ್ ನೀಡಿ ಅಮೃತಹಳ್ಳಿ ಠಾಣೆಗೆ ಮಹಿಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರಿನ ಸಂಖ್ಯೆ ಪರಿಶೀಲಿಸಿ ಹಾಗೂ ಸಿಗ್ನಲ್‌ಗಳಲ್ಲಿನ ಸಿಸಿ ಕ್ಯಾಮೆರಾ ವೀಕ್ಷಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಮೃತಹಳ್ಳಿ ಪೊಲೀಸರು ಹೇಳಿದರು.
ಮಹಿಳೆ ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಸಂಭಾಷಣೆ ನಡೆಸುತ್ತಿರುವುದನ್ನು ಜತೆಗಿದ್ದವರು ವಿಡಿಯೋ ಮಾಡಿದ್ದರು. ಎದುರಿಗಿನ ಕಾರಿನಲ್ಲಿದ್ದ ವ್ಯಕ್ತಿ ಇವರ ಕಾರಿನ ಸಮೀಪಕ್ಕೆ ಆಗಮಿಸುತ್ತಿರುವುದು, ಮಹಿಳೆ ಆತಂಕಗೊಂಡಿರುವುದು ಇದರಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಹರಿದಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.