Customs officers: ಪ್ಯಾಂಟಿನೊಳಗೆ ಚಿನ್ನದ ಪೌಡರ್ಲೇಪಿಸಿ ಸಾಗಣೆ: ಇಬ್ಬರ ಬಂಧನ
Team Udayavani, Oct 3, 2023, 12:32 PM IST
ದೇವನಹಳ್ಳಿ: ಪ್ಯಾಂಟಿನ ಒಳಗೆ ಚಿನ್ನದ ಪೌಡರ್ ಲೇಪಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಯುಲ್ 171 ಶ್ರೀಲಂಕಾ ಏರ್ಲೈನ್ಸ್ನಲ್ಲಿ ಕೊಲಂಬೊ ದಿಂದ ಅ.1ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಇಬ್ಬರು ಪ್ರಯಾಣಿಕರು ಅನುಮಾನಾಸ್ಪದವಾಗಿ ನಡೆದು ಬರುತ್ತಿದ್ದನ್ನು ಕಂಡು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಆದರೆ, ಅವರ ಬಳಿ ಯಾವುದೇ ಚಿನ್ನ ಸಿಕ್ಕಿರಲಿಲ್ಲ. ಇಬ್ಬರನ್ನೂ ವಿಶೇಷ ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಿದಾಗ 229.84 ಗ್ರಾಂ ತೂಕದ ಚಿನ್ನದ ಪೌಡರ್ ಪತ್ತೆಯಾಗಿದೆ. ಅಕ್ರಮ ಸಾಗಣೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಇಬ್ಬರೂ ಪ್ರಯಾಣಿಕರನ್ನು ಸೆರೆ ಹಿಡಿಯಲಾಗಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.
“ಪ್ರಯಾಣಿಕನೊಬ್ಬ ಧರಿಸಿದ್ದ ಪ್ಯಾಂಟ್ ಬಿಚ್ಚಿ ಎರಡು ಭಾಗವಾಗಿ ಕತ್ತರಿಸಲಾಯಿತು. ಪ್ಯಾಂಟಿನ ಒಳಗಿನ ಭಾಗದಲ್ಲಿ ಅಂಟಿನ ಸಹಾಯದಿಂದ ಚಿನ್ನದ ಪೌಡರ್ ಲೇಪಿಸಿದ್ದು ಕಂಡು ಬಂದಿದೆ. ಪೌಡರ್ ಬಿಡಿಸಿ ತೂಕ ಮಾಡಿದಾಗ 74.54 ಗ್ರಾಂ ಚಿನ್ನ ಸಿಕ್ಕಿದೆ. ಇನ್ನೊಬ್ಬ ಪ್ರಯಾಣಿಕ, ಪೇಸ್ಟ್ ರೂಪದಲ್ಲಿದ್ದ ಚಿನ್ನದ ಸಣ್ಣ ಉಂಡೆಗಳನ್ನು ಗುದದ್ವಾರದಲ್ಲಿ ಇರಿಸಿಕೊಂಡಿದ್ದ. ವೈದ್ಯರ ಸಹಾಯದಿಂದ 155.30 ಗ್ರಾಂ ತೂಕದ ಚಿನ್ನದ ಉಂಡೆಗಳನ್ನು ಹೊರಗೆ ತೆಗೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಚಿನ್ನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿ ತನಿಖೆಯನ್ನು ಕೈಗೊಂಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಕಾಣಿಕೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದು, ಅಧಿಕಾರಿಗಳು ತೀವ್ರ ನಿಗಾವಹಿಸುತ್ತಿದ್ದಾರೆ. ಸೆ.29, 30ರಂದೂ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಸಿಕ್ಕಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.