ಶೀಘ್ರ ಸೈಬರ್‌ ನಿಯಂತ್ರಣ ಕೊಠಡಿ : ಕಮಲ್‌ ಪಂತ್‌


Team Udayavani, Nov 27, 2020, 3:53 PM IST

ಶೀಘ್ರ ಸೈಬರ್‌ ನಿಯಂತ್ರಣ ಕೊಠಡಿ : ಕಮಲ್‌ ಪಂತ್‌

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ “ಸೈಬರ್‌ ನಿಯಂತ್ರಣ ಕೊಠಡಿ (ಕಂಟ್ರೋಲ್‌ ರೂಂ)’ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರ ಲೋಕಾರ್ಪಣೆಯಾಗಲಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು.

ಆಗ್ನೇಯ ವಿಭಾಗ ಎಚ್‌ಎಸ್‌ಆರ್‌ ಪೊಲೀಸ್‌ ಠಾಣೆ ಆವರಣದಲ್ಲಿನ ನೂತನ ಸಿಇಎನ್‌ ಪೊಲೀಸ್‌ ಠಾಣೆಯನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸೈಬರ್‌ ವಂಚನೆ ನಿಯಂತ್ರಣ ಮಾಡುವ ಸಲುವಾಗಿ ಯೋಜನೆ ಮಾಡಿಕೊಳ್ಳಲಾ ಗಿದ್ದು. ಈ ಕಾರ್ಯಕ್ಕೆ ಆರ್‌ಬಿಐ ಕೂಡ ಸಹಕಾರ ನೀಡುತ್ತಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಕುರಿತ ದೂರುಗಳಿಗಾಗಿ ನಮ್ಮ-100 ಇರು ವಂತೆಯೂ ಇನ್ಮುಂದೆ ಸೈಬರ್‌ ಕ್ರೈಂ ನಿಯಂತ್ರಣ ಕೊಠಡಿಗೆ ದೂರುಗಳನ್ನು ಸಹಾಯವಾಣಿ ಮೂಲಕ ನೆರವು ನೀಡಲಾಗುವುದು. ನೇರವಾಗಿ ನಮ್ಮ-100ಕ್ಕೆ ಕರೆ ಮಾಡಿದಾಗ ಅವುಗಳಲ್ಲಿ 1,2,3,4 ಆಯ್ಕೆ ಬರುತ್ತವೆ. ಈ ಪೈಕಿ ಸೈಬರ್‌ ಸಹಾಯವಾಣಿ ಸಂಪರ್ಕಕ್ಕೆ ನಂಬರ್‌ವೊಂದನ್ನು ಆಯ್ಕೆ ಮಾಡಿಕೊಂಡು ಸಿಬ್ಬಂದಿ ಜತೆ ನೇರವಾಗಿ ದೂರು ನೀಡಿ ಸಹಾಯ ಪಡೆದು ಕೊಳ್ಳಬಹುದು. ಅಗತ್ಯವಿದ್ದಲ್ಲಿ ಮಾತ್ರ ಸೆನ್‌ ಪೊಲೀಸ್‌ ಠಾಣೆಗೆ ತೆರಳಿ ನೇರವಾಗಿ ದೂರು ನೀಡಬಹುದು. ಅದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಅಲ್ಲದೆ,ಎಸ್‌ಎಂಎಸ್‌ಮೂಲಕವು ದೂರು ನೀಡಬಹುದು. ಕೆಲ ಸಂದರ್ಭದಲ್ಲಿ ಬ್ಯಾಂಕ್‌ ಅಧಿಕಾರಿಗಳು ಪೊಲೀಸರಿಗೆ ದೂರು ನೀಡದೆ ಖಾತೆ ಸ್ಥಗಿತಗೊಳಿಸಲು ಹಿಂದೇಟು ಹಾಕುತ್ತಾರೆ. ಆಗ,ಠಾಣೆಗೆಹೋಗಬೇಕಾಗುತ್ತದೆ.ಆದರೆ,ಸಾಧ್ಯವಾಗುವದಿಲ್ಲ.ಅಥವಾಕಳ್ಳರುಇನ್ನಷ್ಟುಹಣದೋಚಬಹುದು.  ಈ ರೀತಿಯ ಸಮಸ್ಯೆಗಳ ನಿವಾರಣೆಗಾಗಿಯೇ ಸೈಬರ್‌ಕ್ರೈಂ ನಿಯಂತ್ರಣ ಕೊಠಡಿ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಹೀಗಾಗಿ ತಮ್ಮ ಅನುಮತಿ ಇಲ್ಲದೆ ಹಣ ಡ್ರಾಮಾಡಿದ ಕೂಡಲೇ ಪೊಲೀಸರಿಗೆ ಎಸ್‌ಎಂಎಸ್‌ ಮೂಲಕ ದೂರು ನೀಡಬಹುದು. ಆಗ ಸಹಾಯ ವಾಣಿ ಸಿಬ್ಬಂದಿ ಬ್ಯಾಂಕ್‌ ಅಧಿಕಾರಿಗಳ ಗಮನಕ್ಕೆ ತಂದು ಖಾತೆ ಸ್ಥಗಿತಗೊಳಿಸುತ್ತಾರೆ. ಅನಂತರ ಗ್ರಾಹಕ ನಿಂದ ಲಿಖೀತ ದೂರು ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿ ಖಾಸಗಿ ಕಂಪನಿ ಪ್ರತ್ಯೇಕ ಸಾಫ್ಟ್ವೇರ್‌ ಅಭಿವೃದ್ಧಿ ಪಡಿಸುತ್ತಿದೆ. ಅದಕ್ಕೆ ಆರ್‌ಬಿಐ ಕೂಡ ಸಹಾಯ ಮಾಡಲು ಮುಂದಾಗಿದೆ ಎಂದು ಹೇಳಿದರು.

ಪೇಪರ್‌ ವರ್ಕ್‌ ಕಡಿಮೆ ಮಾಡಿ: ಉದ್ಘಾಟನೆ ಬಳಿಕ ಠಾಣಾಧಿಕಾರಿ ರಾಜೇಶ್‌ ಹಾಗೂ ಅಧಿಕಾರಿ- ಸಿಬ್ಬಂದಿಗೆ ಜತೆ ಸಮಾಲೋಚನೆ ನಡೆಸಿದ ಪೊಲೀಸ್‌ ಆಯುಕ್ತರು, ಆದಷ್ಟು ಪೇಪರ್‌ ವರ್ಕ್‌ ಕಡಿಮೆ ಮಾಡಿ. ಡಿಜಿಟಲ್‌ಗೆ ಆದ್ಯತೆ ನೀಡಿ. ಅದರಿಂದ ಪೊಲೀಸ್‌ ಹಾಗೂ ಸಾರ್ವಜನಿಕರಿಗೆ ಅನುಕೂಲ ಎಂದರು.

ಹೆಚ್ಚುವರಿ ಪೊಲೀಸ್‌ ಆಯುಕ್ತ ಎಸ್‌. ಮುರುಗನ್‌, ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್‌ ಜೋಷಿ, ಎಸಿಪಿ ಕರಿಬಸನಗೌಡ, ಸೆನ್‌ ಠಾಣಾಧಿಕಾರಿ ರಾಜೇಶ್‌, ಅಧಿಕಾರಿ-ಸಿಬ್ಬಂದಿ ಇದ್ದರು.

ಸೆನ್‌ ಪೊಲೀಸ್‌ ಠಾಣೆಗಳಿಗೆ ತಜ್ಞರ ನೇಮಕ :  ನಗರದಲ್ಲಿರುವ 8 ಸಿಇಎನ್‌(ಸೈಬರ್‌, ಆರ್ಥಿಕ ಅಪರಾಧಗಳು ಮತ್ತು ನಾರ್ಕೋಟಿಕ್ಸ್‌)(ಸೆನ್‌) ಪೊಲೀಸ್‌ ಠಾಣೆಗಳಿಗೆ ನುರಿತ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗುವುದು. ಸಿಇಎನ್‌ ಠಾಣೆಗಳಲ್ಲಿ ಸಿಬ್ಬಂದಿ ಕೊರತೆಯಿದ್ದು, ಹಂತ-ಹಂತವಾಗಿ ಭರ್ತಿ ಮಾಡಲಾಗುವುದು. ಜತೆಗೆ ನಗರದ ಸೆನ್‌ ಪೊಲೀಸ್‌ ಠಾಣೆಗಳಲ್ಲಿ ನುರಿತ ತಜ್ಞರಕೊರತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರತಿ ಸೆನ್‌ ಪೊಲೀಸ್‌ ಠಾಣೆಗೆ ಮೂವರು ತಂತ್ರಜ್ಞಾನ ಮತ್ತು ತಾಂತ್ರಿಕ ತಜ್ಞರನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗುವುದು. ಈ ಮೂಲಕ ಪ್ರಕರಣಗಳ ಇತ್ಯರ್ಥ ಹಾಗೂ ದೂರುದಾರರಿಗೆ ಪರಿಹಾರಕೊಡಿಸಲಾಗುವುದು. ಇದೊಂದು ಮಾದರಿ ಸೆನ್‌ ಪೊಲೀಸ್‌ ಠಾಣೆಯಾಗಿದ್ದು, ನಗರದ ಬೇರೆ ಠಾಣೆಗಿಂತ ಭಿನ್ನವಾಗಿದೆ. ಕಾರ್ಪೋರೇಟ್‌ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತಕಮಲ್‌ ಪಂತ್‌ ಹೇಳಿದರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.