ಸೈಬರ್‌ ಕಳ್ಳರ ಪತ್ತೆಯೇ ಅಸಾಧ್ಯ! : ಈ ವರ್ಷ ದಾಖಲಾದ 9 ಸಾವಿರ 930 ಪ್ರಕರಣ ಮಾತ್ರ ಇತ್ಯರ್ಥ

Team Udayavani, Dec 25, 2022, 2:24 PM IST

ಸೈಬರ್‌ ಕಳ್ಳರ ಪತ್ತೆಯೇ ಅಸಾಧ್ಯ! : ಈ ವರ್ಷ ದಾಖಲಾದ 9 ಸಾವಿರ 930 ಪ್ರಕರಣ ಮಾತ್ರ ಇತ್ಯರ್ಥ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಒಂದಿಲ್ಲೊಂದು ಹೊಸ ಮಾದರಿಯ ಸೈಬರ್‌ ಕ್ರೈಂಗಳು ನಡೆಯುತ್ತಲೇ ಇವೆ. ಹಾಗೆಯೇ ಕಳೆದ 2 ವರ್ಷಗಳಿಗೆ ಹೊಲಿಸಿದರೆ ಪ್ರಸಕ್ತ ಸಾಲಿನಲ್ಲಿ ಸೈಬರ್‌ ಕ್ರೈಂ ಪ್ರಕರಣಗಳ ಸಂಖ್ಯೆ ತುಸು ಹೆಚ್ಚಾಗಿವೆ.

ನಗರದ 9 ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗಳಲ್ಲಿ ಕಳೆದ ವರ್ಷ ಆರೂವರೆ ಸಾವಿರ ಪ್ರಕರಣಗಳು ದಾಖಲಾಗಿದ್ದು, 2062 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ, ಈ ವರ್ಷ ನವೆಂಬರ್‌ ಅಂತ್ಯದವರೆಗೆ ಸೈಬರ್‌ ಪ್ರಕರಣಗಳು 9 ಸಾವಿರ ಗಡಿ ದಾಟಿದೆ.  ಆದರೆ, ಇದರಲ್ಲಿ 930 ಕೇಸ್‌ಗಳನ್ನು ಮಾತ್ರ ಪತ್ತೆ ಹಚ್ಚಲಾಗಿದೆ. ಅಂದರೆ ಪ್ರಕರಣಗಳ ಇತ್ಯರ್ಥ ಶೇ.10ರಷ್ಟು ಮಾತ್ರ. ಇನ್ನುಳಿದ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದ್ದು, ಕೆಲ ಪ್ರಕರಣಗಳ ಆರೋಪಿಗಳು ನೆರೆ ರಾಜ್ಯ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವುದರಿಂದ ಅವರ ಪತ್ತೆಯಾಗಿಲ್ಲ.

ಹೀಗಾಗಿ ಉಳಿದ ಪ್ರಕರಣಗಳ ತನಿಖೆ ಆಮೆ ಗತಿಯಲ್ಲಿ ಸಾಗಿದೆ. ಪ್ರಸ್ತುತ ದಾಖಲಾಗಿರುವ ಪ್ರಕರಣಗಳಲ್ಲಿ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟ್ರಾಗ್ರಾಂಗಳಲ್ಲಿ ಪರಿಚಯಿಸಿಕೊಂಡು ವಂಚನೆ, ಒಟಿಪಿ, ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌, ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ, ಓಎಲ್‌ಎಕ್ಸ್‌ ಮೂಲಕ ವಂಚನೆ, ಮ್ಯಾಟ್ರಿಮೋನಿಯಲ್‌, ಮನೆ ಬಾಡಿಗೆ ಪಡೆಯುವ ಹೆಸರಿನಲ್ಲಿ, ಏನಿ ಡೆಸ್ಕ್ ಆ್ಯಪ್‌ ಡೌನ್‌ಲೋಡ್‌ ಮಾಡಿ ವಂಚನೆ, ಹೀಗೆ ಹೊಸ-ಹೊಸ ಮಾದರಿಯಲ್ಲಿ ಸೈಬರ್‌ ಕ್ರೈಂ ವಂಚನೆಗಳು ಬೆಳಕಿಗೆ ಬರುತ್ತಿವೆ.

ಈ ಪೈಕಿ ಹೆಚ್ಚಾಗಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಅಪ್‌ಡೇಟ್‌ ಅಥವಾ ಕ್ರೆಡಿಟ್‌ ಪಾಯಿಂಟ್‌ ಹೀಗೆ ವಿವಿ ಧ ಮಾದರಿಯಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಆದರೆ, ನೆರೆ ರಾಜ್ಯ ಅಥವಾ ವಿದೇಶಗಳಲ್ಲಿ ಕುಳಿತು ಕೃತ್ಯ ಎಸಗುವುದರಿಂದ ಆರೋಪಿಗಳ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಅಲ್ಲದೆ, ನೆರೆ ರಾಜ್ಯದವರು ಗೂಗಲ್‌ ಮೂಲಕ ಭಾಷೆ ಅನುವಾದ ಮಾಡಿ ವಂಚಿಸುತ್ತಿದ್ದಾರೆ ಎಂಬುದು ಪತ್ತೆಯಾಗಿದೆ.

ಬೇಗ ಪತ್ತೆ ಕಷ್ಟ: ಇತ್ತೀಚಿನ ಸೈಬರ್‌ ಕ್ರೈಂ ಪ್ರಕರಣಗಳ ಪತ್ತೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಎಷ್ಟೇ ಆಧುನಿಕ ತಂತ್ರಜ್ಞಾನ ಬಳಸಿದರೂ ಆರೋಪಿಗಳ ಸುಳಿವು ಸಿಗುವುದಿಲ್ಲ. ಅಲ್ಲದೆ, ಪದೇ ಪದೆ ಸ್ಥಳ, ಐಪಿ ವಿಳಾಸ ಬದಲಾವಣೆ ಮಾಡುವುದು ಸಹ ಆರೋಪಿಗಳ ಪತ್ತೆ ಸಾಧ್ಯವಾಗುತ್ತಿಲ್ಲ. ಇದು ದೊಡ್ಡ ಸವಾಲಾಗಿದೆ.

ಮತ್ತೂಂದೆಡೆ ಉತ್ತರ ಭಾರತ ಮೂಲದ ಆರೋಪಿಗಳು ಗ್ರಾಮೀಣ ಭಾಗದ ಜನರ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಪಡೆದು ವಂಚನೆ ಮಾಡುತ್ತಿದ್ದಾರೆ. ಈ ವ್ಯಕ್ತಿಗಳು ಕೆಲವೊಮ್ಮೆ ಸಿಕ್ಕರೆ, ಇನ್ನು ಕೆಲವೊಮ್ಮೆ ಒಮ್ಮೆ ವಂಚಿಸಿ ನಾಪತ್ತೆಯಾಗುತ್ತಿದ್ದಾರೆ ಎನ್ನುತ್ತಾರೆ ಸೈಬರ್‌ ಕ್ರೈಂ ಪೊಲೀಸರು.

ಯಾವ ವಿಭಾಗದಲ್ಲಿ ಸೈಬರ್‌ ಕ್ರೈಂ ಹೆಚ್ಚು?: ವಿವಿಧ ಭಾಗಗಳಿಗೆ ಹೋಲಿಸಿದರೆ ಈಶಾನ್ಯ ವಿಭಾಗದ ಸೆನ್‌ ಠಾಣೆಯಲ್ಲಿ ಅಧಿಕ ಎಂದರೆ 1443 ಕೇಸ್‌ ದಾಖಲಾಗಿವೆ. ನಂತರ ಪಶ್ಚಿಮ ವಿಭಾಗ 1297 ಕೇಸ್‌, ದಕ್ಷಿಣ ವಿಭಾಗ 1237, ಉತ್ತರ ವಿಭಾಗದಲ್ಲಿ 1160, ಆಗ್ನೇಯ ವಿಭಾಗ 1115, ವೈಟ್‌ ಫೀಲ್ಡ್‌ 942, ಪೂರ್ವ ವಿಭಾಗ 833, ಕೇಂದ್ರ ವಿಭಾಗ 888 ಹಾಗೂ ಸೈಬರ್‌ ಕ್ರೈಂ ಠಾಣೆ ಸೇರಿ 9050 ಕೇಸ್‌ ದಾಖಲಾಗಿವೆ.

ತಕ್ಷಣ ಸಹಾಯವಾಣಿ ಸಂಪರ್ಕಿಸಿ : ಎರಡು ವರ್ಷದಿಂದ ಸೈಬರ್‌ ಕ್ರೈಂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಸೈಬರ್‌ ಇನ್ಫಾರ್‌ ಮೆಷನ್‌ ರಿಪೋರ್ಟ್‌( ಸಿಐಆರ್‌). ಯಾವುದೇ ವಂಚನೆ ಗೊತ್ತಾಗುತ್ತಿದ್ದಂತೆ ಕೂಡಲೇ 112 ಸಂಖ್ಯೆಗೆ ಕರೆ ಮಾಡಿ, ಸೈಬರ್‌ ಸಹಾಯವಾಣಿ ಸಿಬ್ಬಂದಿಗೆ ಮಾಹಿತಿ ನೀಡಿದಾಗ, ವಂಚಕನ ಬ್ಯಾಂಕ್‌ ಖಾತೆಯನ್ನು ಕ್ಷಣಾರ್ಥದಲ್ಲೇ ಬ್ಲಾಕ್‌ ಮಾಡಲಾಗುತ್ತದೆ. ನಂತರ ವಂಚನೆಗೊಳಗಾದವರಿಗೆ ಹಣ ಹಿಂದಿರುಗಿಸಲಾಗುತ್ತದೆ. ಇದು ಸೈಬರ್‌ ಕ್ರೈಂ ಪ್ರಕರಣಗಳು ಕಡಿಮೆಯಾಗಲು ಸಹಾಯವಾಗುತ್ತಿದೆ ಎನ್ನುತ್ತಾರೆ ಸೈಬರ್‌ ಸಹಾಯವಾಣಿ ಅಧಿಕಾರಿಗಳು.

ಯಾವ ವಂಚನೆ ಹೆಚ್ಚು? : ಸೈಬರ್‌ ವಂಚಕರು ವಿವಿಧ ಸ್ವರೂಪಗಳಲ್ಲಿ ಜನರನ್ನು ಮರಳು ಮಾಡುತ್ತಾರೆ. ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಅಪ್‌ ಡೇಟ್‌ ಮಾಡಬೇಕು. ಆನ್‌ಲೈನ್‌ ಮನಿ ಟ್ರಾನ್ಸ್‌ಫ‌ರ್‌ ಹೆಸರಿನಲ್ಲಿ ಈ ವರ್ಷ 3,838 ಪ್ರಕರಣ ದಾಖಲಾಗಿವೆ. ಕಳೆದ ವರ್ಷ 2,886 ಕೇಸ್‌ ದಾಖ ಲಾಗಿತ್ತು. ನಗದು ಬಹುಮಾನ, ಲಾಟರಿ ಹಾಗೂ ಲೋನ್‌, ಒಎಲ್‌ಎಕ್ಸ್‌ ಮೋಸ ಸೇರಿದಂತೆ 1753 ಪ್ರಕರಣ ದಾಖಲಾಗಿವೆ. ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ 748, ಸಾಮಾಜಿಕ ಜಾಲತಾಣ ದುರ್ಬಳಕೆ 557, ಸಿಮ್‌ ಕಾರ್ಡ್‌ ಸ್ಕಿಮಿಂಗ್‌, ಕ್ರಿಪ್ಟೋ ಕರೆನ್ಸಿ, ಮಾಟ್ರಿಮೋನಿ, ರಫ್ತು ಮತ್ತು ಆಮದು(ಇ-ಮೇಲ್‌ ಮೂಲಕ) ವಂಚನೆ ಸೇರಿ ಒಟ್ಟು 9,050 ಕೇಸ್‌ ದಾಖಲಾಗಿವೆ.

ಪೊಲೀಸ್‌ ಸಹಾಯವಾಣಿ 112 ಮೂಲಕ ಸೈಬರ್‌ ಕೇಸ್‌ ಗಳನ್ನು ಕೆಲ ಕ್ಷಣಗಳಲ್ಲೇ ಬಗೆಹರಿಸಲಾಗಿದೆ. ಮತ್ತೂಂದೆಡೆ ಸೈಬರ್‌ ಠಾಣೆ ಪೊಲೀಸರಿಗೆ ಖಾಸಗಿ ಸಂಸ್ಥೆಯಿಂದ ಸೂಕ್ತ ತರಬೇತಿ ನೀಡಲಾಗುತ್ತಿದೆ. ಜತೆಗೆ ಡಿಎಫ್ಎ ಸೇರಿ ಹೊಸ ಮಾದರಿಯ ಉಪಕರಣಗಳನ್ನು ಖರೀಸಲಾಗಿದೆ. -ಡಾ ಶರಣಪ್ಪ, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ

-ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.