ಕೆಎಸ್‌ಆರ್‌ಪಿಯಿಂದ ಸೈಕಲ್‌ಜಾಥಾ
Team Udayavani, Nov 22, 2021, 9:55 AM IST
ಬೆಂಗಳೂರು: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮತ್ತು ಬೆಂಗಳೂರು ಸಂಚಾರ ಪೊಲೀಸರು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಪುಣ್ಯ ಸ್ಮರಣೆ ಹಾಗೂ ಮಾತಾಡ್ ಮಾತಾಡ್ ಕನ್ನಡ ಘೋಷವಾಕ್ಯದಡಿ 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಭಾನುವಾರದಲ್ಲಿ ನಗರದ 50 ಕಿ.ಮೀ.ಗಳ ಸೈಕಲ್ ಜಾಥಾ ಆಯೋಜಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಡಾ.ಶಿವರಾಜ್ ಕುಮಾರ್ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಸಹೋದರ ಪುನೀತ್ ರಾಜ್‌ಕುಮಾರ್ ಎಲ್ಲಿಯೋ ಹೋಗಿಲ್ಲ. ಇಡೀ ದೇಶದ ಜನರ ಮನಸ್ಸಿನಲ್ಲಿ ಇದ್ದಾನೆ. ಪುನೀತ್ ಇದ್ದಿದ್ದರೆ ಈ ಕಾರ್ಯಕ್ರಮಕ್ಕೆ ಅವನೇ ಬರಬೇಕಾಗಿತ್ತು.
ಪುನೀತ್ ಪ್ರೇರಣೆಯಿಂದಲೇ ನಾನು ಕೂಡ ಸೈಕಲಿಂಗ್ ಹೋಗಲು ಆರಂಭಿಸಿದ್ದು. ಅದ್ಕಕಾಗಿ ಆತ ಸೈಕಲ್ ಕೂಡ ಕೊಡಿಸಿದ್ದ ಎಂದು ಭಾವುಕರಾದರು. ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಮಾತನಾಡಿ, ಈ ಹಿಂದೆ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರು ನಿಧನರಾದ ಸಂದರ್ಭದಲ್ಲಿ ಸಾಕಷ್ಟು ಸಾವು-ನೋವುಗಳಂತಹ ಘಟನೆಗಳನ್ನು ಕಂಡಿದ್ದೇವೆ.
ಇದನ್ನೂ ಓದಿ: ರಬಕವಿ-ಬನಹಟ್ಟಿ: ರೈತ ವಿಷ ಸೇವಿಸಿ ಆತ್ಮಹತ್ಯೆ
ಆದರೆ, ಪುನೀತ್ ರಾಜ್‌ಕುಮಾರ್ ಮೃತ ಪಟ್ಟಾಗ ಅವರ ಅಭಿಮಾನಿಗಳು ತೋರಿದ ಪ್ರೀತಿ ವಿಶೇಷವಾಗಿತ್ತು. ನೇತ್ರದಾನ, ರಕ್ತದಾನ, ಅನ್ನ ದಾನ, ವಸ್ತ್ರ ದಾನ ಹೀಗೆ ನಾನಾ ರೀತಿಯಲ್ಲಿ ದಾನ-ಧರ್ಮಗಳನ್ನು ಮಾಡುತ್ತ ಅಭಿಮಾನ ಮೆರೆದರು ಎಂದು ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದರು.
ಪುನೀತ್ ಸಮಾಧಿಗೆ ನಮನ: ಕಂಠೀರವ ಕ್ರೀಡಾಂಗಣದಿಂದ ಹೊರಟ ಸೈಕಲ್ ಜಾಥಾ ಗಾಂಧಿ ಸರ್ಕಲ್, ಚಾಲುಕ್ಯ ಸರ್ಕಲ್, ಮೇಖ್ರೀ ಸರ್ಕಲ್, ಹೆಬ್ಟಾಳ, ಬಿಇಎಲ್ ಸರ್ಕಲ್, ಗೊರಗುಂಟೆಪಾಳ್ಯ ನಂತರ ರಾಜ್‌ಕುಮಾರ್ ಸಮಾ ಧಿಗೆ ತೆರಳಿ, ನಟ ರಾಘವೇಂದ್ರ ರಾಜ್‌ಕುಮಾರ್ ಜತೆ ತೆರಳಿ ಪುನೀತ್ ರಾಜ್‌ಕುಮಾರ್ ಸಮಾಧಿಗೆ ನಮನ ಸಲ್ಲಿಸಲಾಯಿತು.
ನಂತರ ನಾಗರಬಾವಿ, ದೇವೆಗೌಡ ಪೆಟ್ರೋಲ್ ಬಂಕ್, ಸಾರಕ್ಕಿ ಸರ್ಕಲ್, ಬಿಟಿಎಂ ಜಂಕ್ಷನ್, ಸಿಲ್ಕ್ ಬೋರ್ಡ್, ಆಡುಗೋಡಿ, ರಿಚ್ಮಂಡ್ ಸರ್ಕಲ್, ಸೆಂಟ್ ಜೋಸೆಫ್ ಕಾಲೇಜು ಜಂಕ್ಷನ್, ಮೇಯೋ ಹಾಲ್ ಕಡೆಯಿಂದ ಸಾಗಿ ಪೊಲೀಸ್ ಹಾಕಿ ಗ್ರೌಂಡ್‌ನಲ್ಲಿ ಸೈಕಲ್ ಜಾಥಾ ಅಂತ್ಯಗೊಂಡಿತು. ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್. ರವಿಕಾಂತೇಗೌಡ, ಕೆಎಸ್‌ಆರ್‌ಪಿ 3ನೇ ಬೆಟಾಲಿಯನ್ ಕಮಾಡೆಂಟ್ ಎಂ.ವಿ.ರಾಮಕೃಷ್ಣ ಪ್ರಸಾದ್, 9ನೇ ಬೆಟಾಲಿಯನ್ ಕಮಾಡೆಂಟ್ ಅನೂಪ್ ಶೆಟ್ಟಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.