ರಾಜಧಾನಿಗರ ಚಿತ್ತ ಸೈಕಲ್ ಸವಾರಿಯತ್ತ…
Team Udayavani, Jul 19, 2021, 6:31 PM IST
“ಕಳೆದ ವಾರವಷ್ಟೇ ಕೆಲಸಕ್ಕೆ ಸೇರಿದ್ದೇನೆ. ನಾವು ಮಾಡುವಕೆಲಸಕ್ಕೆ ಬೈಕ್ ಬಳಕೆ ಅತ್ಯವಶ್ಯಕ. ಆದರೆ ವಾರಕ್ಕೆ 1,500 ರೂ.ಪೆಟ್ರೋಲ್‌ವೆಚ್ಚವಾಗುತ್ತದೆ. ಪ್ರಸ್ತುತಪೆಟ್ರೋಲ್‌ದರ ಹೆಚ್ಚಳವಾಗಿರುವುದರಿಂದ ಬೈಕ್‌ಸವಾರಿ ಬಗ್ಗೆ ಯೋಚನೆ ಮಾಡಿಲ್ಲ.
ಸೈಕಲ್ ಪೆಡಲ್ ತುಳಿದರೆಮಾತ್ರ, ಜೀವನ ನಡೆಯುತ್ತದೆ ಸರ್..’ಇದು, ತೈಲ ದರ ಹೆಚ್ಚಳದಿಂದ ಕೆಲಸ ಹಾಗೂಜೀವನ ನಿರ್ವಹಣೆಗೆತೊಂದರೆಯಾಗುತ್ತಿರುವಬಗ್ಗೆ ಜೊಮ್ಯಾಟೋ ಡೆಲಿವರಿಬಾಯ್ ಆನಂದ್ ಬಿಚ್ಚಿಟ್ಟವಾಸ್ತವಾಂಶ. ಇದು, ಕೇವಲ ಒಬ್ಬಉದ್ಯೋಗಿಗೆ ಎದುರಾಗಿರುವಸಮಸ್ಯೆಯಲ್ಲ. ರಾಜಧಾನಿಯ ಬಹುತೇಕಎಲ್ಲ ಉದ್ಯೋಗಿಗಳ ಜೀವನ ನಿರ್ವಹಣೆ ಮೇಲೆತೈಲ ಬೆಲೆ ಹೆಚ್ಚಳ ನೇರವಾಗಿಯೇ ಪರಿಣಾಮ ಬೀರಿದೆ.
ಮತ್ತೂಂದೆಡೆ, ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಿರುತ್ತಿದ್ದನಗರ ಕೊರೊನಾ ಲಾಕ್‌ಡೌನ್‌ನಿಂದ ಸಂಪೂರ್ಣಸ್ತಬ್ಧವಾಗಿತ್ತು. ಇದೇ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ವರ್ಕ್‌ಫ್ರಂ ಹೋಂ ಪ್ರವೃತ್ತಿಯಿಂದಾಗಿ ಸಾಮಾನ್ಯ ದಿನಗಳಿಗಿಂತನಗರದಲ್ಲಿ ವಾಹನ ಸಂಚಾರ ವಿರಳವಾಗಿದೆ. ಈಸಂದರ್ಭವನ್ನು ನಗರದ ಜನರು ಸದ್ಬಳಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಕೊರೊನಾ ಸೋಂಕು ಪ್ರಕರಣಗಳುಕಡಿಮೆಯಾಗಿದ್ದರೂ, ಸೋಂಕು ಇನ್ನೂ ನಮ್ಮ ಮಧ್ಯೆಇದೆ. ಹೀಗಾಗಿ, ಸಾರ್ವಜನಿಕ ಸಾರಿಗೆಯಿಂದದೂರ ಉಳಿಯಲು ಸೈಕಲ್ ಸವಾರಿಯತ್ತಮುಖ ಮಾಡುತ್ತಿದ್ದಾರೆ.
ತೈಲ ದರ ಹೆಚ್ಚಳ ಕಾರಣ: ಪ್ರಸ್ತುತಪೆಟ್ರೋಲ್ ದರ 105 ರೂ.ಆಸುಪಾಸಿಗೆ ಏರಿಕೆಯಾಗಿದೆ.ಮನೆಯಲ್ಲಿ ಸೈಕಲ್‌ಇದ್ದವರುಜತೆಗೆ,ಲಾಕ್‌ಡೌನ್ ಅವಧಿಯಲ್ಲಿ ಸೈಕಲ್‌ಖರೀದಿಸಿದವರ ಪೈಕಿ ಶೇ.10 ಮಂದಿಪೆಟ್ರೋಲ್ ದರ ಏರಿಕೆಯಿಂದಬೇಸತ್ತು ನಿತ್ಯ ಅಗತ್ಯ ವಸ್ತುಗಳಖರೀದಿಗೆ ಹಾಗೂ ವಾರದಲ್ಲಿ ಒಂದೆರಡುದಿನ ಕಚೇರಿಗೆ ತೆರಳಲು ಸೈಕಲ್ ಪೆಡಲ್‌ತುಳಿಯುತ್ತಿದ್ದಾರೆ.ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸೈಕಲ್‌ಗೆ ಹೆಚ್ಚು ಬೇಡಿಕೆ ಇತ್ತಾದರೂ,ಪೂರೈಕೆ ಕೊರತೆಯಿಂದ ಎರಡರಿಂದ ಮೂರು ತಿಂಗಳುಕಾದು ಸೈಕಲ್ ಖರೀದಿ ಮಾಡಿದ್ದಾರೆ. ಅಲ್ಲದೆ,ಮುಂಚಿತವಾಗಿಯೇ ಸೈಕಲ್‌ಗಳನ್ನು ಬುಕ್ ಮಾಡಿದ್ದಾರೆ.
ಇಂದಿಗೂ ಐಶಾರಾಮಿ ನ್ಪೋರ್ಟ್ಸ್ ಸೈಕಲ್ ವಿಚಾರದಲ್ಲಿಇದೇ ವ್ಯವಸ್ಥೆ ಮುಂದುವರಿದಿದೆ. ಅದರಲ್ಲೂ ಚೀನಾಉತ್ಪನ್ನಗಳು ಸ್ಥಗಿತವಾದ ಬಳಿಕ ಸಾಕಷ್ಟು ಸಮಸ್ಯೆಯಾಗಿದೆ.ಸೈಕಲ್‌ಗಳ ಬಿಡಿಭಾಗಗಳು ಸಿಗುತ್ತಿಲ್ಲ. ಸಿಟಿ ಬೈಕ್, ಎಂಟಿಬಿಅಡ್ವೆಂಚರ್, ರೇಸ್ ಸೈಕಲ…, ಇ ಬೈಕ್ ಬ್ಯಾಟರಿ ಚಾಲಿತ ಸೈಕಲ…ಗಳು ಹೆಚ್ಚು ಬಳಕೆಯಲ್ಲಿವೆ. ಸಾಮಾನ್ಯ ಸೈಕಲ್‌ಗಿಂತ ಗೇರ್‌ಸೈಕಲ…ಗಳು ಹೆಚ್ಚು ಖರೀದಿಯಾಗುತ್ತಿವೆ ಎಂದುಕಮರ್ಷಿಯಲ್ ಸ್ಟ್ರೀಟ್‌ನ ಟ್ರ್ಯಾಕ್ ಅಂಡ್ ಟೈರ್ಸ್ ಸೈಕಲ್‌ಶಾಪ್ ಮಾಲೀಕಕುಮಾರ್ ಮಾಹಿತಿ ನೀಡಿದ್ದಾರೆ.
ಬಾಡಿಗೆ ಸೈಕಲ್ಗೂ ಹೆಚ್ಚು ಬೇಡಿಕೆ: ನಗರದಲ್ಲಿ ಸೈಕಲ್‌ಜಾಥಾಗಳು, ಅಭಿಯಾನಗಳು ಹೆಚ್ಚಳವಾದ ಹಿನ್ನೆಲೆ ಬಾಡಿಗೆಸೈಕಲ್‌ಗಳಿಗೆ ಬೇಡಿಕೆ ಹೆಚ್ಚಿದೆ. ಜಾಥಾದಲ್ಲಿ ಒಂದು ದಿನಅಥವಾಕೆಲಗಂಟೆಗಳಕಾಲಮಾತ್ರ ಸೈಕಲ್‌ಬಳಸಲಾಗುತ್ತಿದೆ.ಇದಕ್ಕಾಗಿ ಸಾವಿರಾರು ರೂ. ಖರ್ಚುಮಾಡುವ ಬದಲುಬಾಡಿಗೆ ಸೈಕಲ್‌ಗಳನ್ನೇ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೈಲದರ ಏರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಹಲವರುಸೈಕಲ್‌ಗಳನ್ನು ಬಾಡಿಗೆ ತೆಗೆದುಕೊಂಡಿದ್ದರು. ಇನ್ನುಯುವಕರು, ಸ್ನೇಹಿತರು, ಸಹೋದ್ಯೋಗಿಗಳೊಟ್ಟಿಗೆ ತೆರಳಲುಬಾಡಿಗೆ ಸೈಕಲ್ ಮೊರೆ ಹೋಗುತ್ತಿದ್ದಾರೆ ಎಂದು ಜಾಲಹಳ್ಳಿಕ್ರಾಸ್‌ನ ಬಾಡಿಗೆ ಸೈಕಲ್ ವ್ಯಾಪಾರಿ ಶಿವರಾಜ್ ಹೇಳಿದ್ದಾರೆ.
ಹಳೆಯ ಸೈಕಲ್ ರಿಪೇರಿ: ಮಕ್ಕಳು ಇರುವ ಮನೆಗಳಲ್ಲಿಸಾಮಾನ್ಯವಾಗಿ ಸೈಕಲ್‌ಗಳು ಇರುತ್ತವೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚು ಜನರು ಹಳೆಯ ಸೈಕಲ್‌ಗಳನ್ನುರಿಪೇರಿ ಮಾಡಿಸಿದ್ದಾರೆ. ಪ್ರಸ್ತುತ ಮಕ್ಕಳಿಗೆ ಇನ್ನೂ ಶಾಲೆಗಳುಪ್ರಾರಂಭವಾಗಿಲ್ಲ. ಆದರೆ, ತೈಲ ದರ ಏರಿಕೆಯಾಗಿದೆ. ಈಹಿನ್ನೆಲೆಯಲ್ಲಿ ಪೋಷಕರು ಅಗತ್ಯ ವಸ್ತುಗಳನ್ನು ಖರೀದಿಸಲುಬೈಕ್ ಬಿಟ್ಟು ಮಕ್ಕಳ ಸೈಕಲ್ ಬಳಕೆ ಮಾಡುತ್ತಿದ್ದಾರೆ.
ಲಾಕ್‌ಡೌನ್‌ನಲ್ಲಿ ಬಳಕೆ ಮಾಡದೆ ರಿಪೇರಿಗೆ ಬಂದಿರುವ ಸಾಕಷ್ಟುಸೈಕಲ್‌ಗಳನ್ನು ಈಗ ಮತ್ತೆ ರಿಪೇರಿ ಮಾಡಿಸಲು ತರುತ್ತಿದ್ದಾರೆಎಂದು ಶಿವಾಜಿನಗರ ಸೈಕಲ್ ಶಾಪ್‌ನ ಅಮೀರ್‌ಹೇಳಿದ್ದಾರೆ.
ವಾರಾಂತ್ಯದಲ್ಲಿ ಹೆಚ್ಚು ಸೈಕಲ್ ಸವಾರಿ: ನಗರದಲ್ಲಿಸಾಮಾನ್ಯ ದಿನಗಳಿಗಿಂತ ವಾರಾಂತ್ಯದಲ್ಲಿ ಮೂರು ಪಟ್ಟುಹೆಚ್ಚು ಸೈಕಲ್‌ಗಳು ರಸ್ತೆಗಿಳಿಯುತ್ತಿವೆ. ಈ ಪೈಕಿ ಶೇ.30 ಮಂದಿನಗರದ ಕೇಂದ್ರ ಭಾಗಗಳಾದ ವಿಧಾನಸೌಧ, ಕಬ್ಬನ್‌ಉದ್ಯಾನ, ಎಂ.ಜಿ.ರಸ್ತೆ, ರಾಜಭವನ, ಚರ್ಚ್ ಸ್ಟ್ರೀಟ್, ಕೆ.ಆರ್.ವೃತ್ತ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳು,ಉದ್ಯಾನಗಳು, ಪ್ರವಾಸಿ ಸ್ಥಳಗಳಲ್ಲಿ ಸೈಕಲ್ ಸವಾರಿ ಮೂಲಕಖುಷಿ ಪಡುತ್ತಾರೆ. ಶೇ.50 ನಗರದ ಹೊರಭಾಗದ ಮೈಸೂರುರಸ್ತೆ, ಕನಕಪುರ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೆಸರಘಟ್ಟ ರಸ್ತೆ,ಮದ್ರಾಸ್ ರಸ್ತೆ, ವರ್ತುಲ ರಸ್ತೆ, ವಿಮಾನ ನಿಲ್ದಾಣ ರಸ್ತೆಗಳಲ್ಲಿ15ರಿಂದ20ಕಿ.ಮೀ. ಹೋಗಿ ಬರುತ್ತಾರೆ. ಉಳಿದಂತೆ ಶೇ.20ಜನರು ಬೆಂಗಳೂರಿಗೆ ಸಮೀಪವಿರುವ ಸ್ಥಳಗಳು, 50ರಿಂದ70 ಕೀ.ಮೀ. ಆಸುಪಾಸಿನ ಪ್ರವಾಸಿತಾಣಗಳಾದ ನಂದಿಬೆಟ್ಟ,ಶಿವಗಂಗೆ ಬೆಟ್ಟ, ತುಮಕೂರು, ಬನ್ನೇರುಘಟ್ಟಕ್ಕೆವಾರಾಂತ್ಯದಲ್ಲಿ ಸೈಕಲ್ ಸವಾರಿ ಹೋಗಿ ಬರುತ್ತಿದ್ದಾರೆ.
ವಿಕಾಸ್ ಆರ್. ಪಿಟ್ಲಾಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.