Bengaluru: ಸಿಲಿಂಡರ್ ಸ್ಫೋಟ; ಐವರಿಗೆ ಗಂಭೀರ ಗಾಯ
Team Udayavani, Jul 10, 2024, 11:18 AM IST
ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ ಐವರು ಗಾಯಗೊಂಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಉತ್ತರಪ್ರದೇಶ ಮೂಲದ ರಾಕೇಶ್ (33), ಕೃಷ್ಣ (24), ಹರಿರಾಮ್ (28), ರಾಮ್‌ಧನ್ (28) ಮತ್ತು ಅಶೋಕ್ (28) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸೋಹಿಬ್ ಎಂಬಾತ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಉತ್ತರ ಪ್ರದೇಶ ಮೂಲದ ಗಾಯಾಳುಗಳು, ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಕುಮಾರಸ್ವಾಮಿ ಲೇಔಟ್‌ನ ಚಂದ್ರನಗರದಲ್ಲಿರುವ ಶೀಟ್ ಮನೆಯಲ್ಲಿ ದೂರುದಾರ ಸೋಹಿಬ್ ಜತೆ ವಾಸವಾಗಿದ್ದರು. ನಿರ್ಮಾಣ ಹಂತದ ಮನೆಗಳಿಗೆ ಪಿಒಪಿ ಸೀಲಿಂಗ್ ಹಾಕುವ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗಲು ಗ್ಯಾಸ್ ಸ್ಟೌವ್ ಹಚ್ಚಿ ಚಪಾತಿ ಬೇಯಿಸುತ್ತಿದ್ದರು.
ಈ ವೇಳೆ ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಆಗ ಐವರು ಗಾಯಗೊಂಡಿದ್ದಾರೆ. ದೂರುದಾರ ಸೋಹಿಬ್ ಶೌಚಾಲಯದಲ್ಲಿದ್ದರಿಂದ ಯಾವುದೇ ಗಾಯಗಳಾಗಿಲ್ಲ. ಸದ್ಯ ಗಾಯಾಳುಗಳು ಶೇ.30ರಷ್ಟು ಗಾಯಗೊಂಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.