Bengaluru: ಸಿಲಿಂಡರ್‌ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ

Team Udayavani, Jan 14, 2025, 11:45 AM IST

Bengaluru: ಸಿಲಿಂಡರ್‌ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ

ಪೀಣ್ಯ ದಾಸರಹಳ್ಳಿ: ಅಡುಗೆ ಸಿಲಿಂಡರ್‌ನ ಪೈಪ್‌ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ ಉತ್ತರ ಭಾರತ ಮೂಲದ ದಂಪತಿ, ಮಗು ಸೇರಿ ಐವರು ಗಾಯಗೊಂಡಿರುವ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯ ಚೊಕ್ಕಸಂದ್ರದ ಪಾಪಯ್ಯ ಲೇಔಟ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಅಸ್ಸಾ ಮೂಲದ ಬಿಜುದಾಸ್‌(35), ಆತನ ಪತ್ನಿ ಅಂಜಲಿದಾಸ್‌(26) ಮತ್ತು ದಂಪತಿಯ 4 ವರ್ಷದ ಮಗಳು ಮಂಜುಶ್ರೀ ಹಾಗೂ ಪಕ್ಕದ ಮನೆಯ ನಿವಾಸಿಗಳಾದ ಶೋಭಾ (40) ಮತ್ತು ಮಂಜುನಾಥ್‌ (18) ಗಾಯಗೊಂಡವರು.

ಸದ್ಯ ಬಿಜುದಾಸ್‌ ಮತ್ತು ಆತನ ಪತ್ನಿ ಅಂಜಲಿದಾಸ್‌, ಮಂಜುಶ್ರೀಗೆ ವಿಕ್ಟೋ ರಿಯಾ ಆಸ್ಪತ್ರೆ ಸುಟ್ಟಗಾಯಗಳ ವಿಭಾಗದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೋಭಾ ಮತ್ತು ಮಂಜುನಾಥ್‌ಗೆ ಸಣ್ಣ ಪ್ರಮಾಣದಲ್ಲಿ ಗಾಯ ಗಳಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು. ಬಿಜುದಾಸ್‌ ಐದಾರು ವರ್ಷಗಳ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದು, ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಂಜಲಿದಾಸ್‌ ಮನೆಯಲ್ಲೇ ಇರುತ್ತಾರೆ. ಭಾನುವಾರ ರಾತ್ರಿ ದಂಪತಿ ಹಾಗೂ ಮಗು ಊಟ ಮುಗಿಸಿ ನಿದ್ರೆಗೆ ಜಾರಿದ್ದಾರೆ. ಈ ವೇಳೆ ಸಿಲಿಂಡರ್‌ನ ಪೈಪ್‌ನಿಂದ ಅನಿಲ ಸೋರಿಕೆಯಾಗಿದೆ. ಇದು ದಂಪತಿಯ ಗಮನಕ್ಕೆ ಬಂದಿಲ್ಲ. ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಅಂಜಲಿ ಹಾಲು ಕಾಯಿಸಲು ಅಡುಗೆ ಮನೆಗೆ ಹೋಗಿ, ಲೈಟ್‌ ಆನ್‌ ಮಾಡುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ.

ಬೆಂಕಿಯ ಕೆನ್ನಾಲಿಯಿಂದ ದಂಪತಿ ಹಾಗೂ ಮಗುವಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಗಾಯಗೊಂಡಿದ್ದ ದಂಪತಿ ಸೇರಿದಂತೆ ಐದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಪೀಣ್ಯಾ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

da

BBK11: ದೈತ್ಯರನ್ನೇ ಮಣ್ಣು ಮುಕ್ಕಿಸಿ ಮಹತ್ವದ ಟಾಸ್ಕ್ ನಲ್ಲಿ ಮಿಂಚಿದ ಧನರಾಜ್

Women’s Ashes: Another win for Australia

Women’s Ashes: ಆಸ್ಟ್ರೇಲಿಯಕ್ಕೆ ಮತ್ತೊಂದು ಗೆಲುವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Kadaba ಮರ್ದಾಳ: ಮನೆಗೆ ನುಗ್ಗಿ ಕಳ್ಳತನ

Kadaba ಮರ್ದಾಳ: ಮನೆಗೆ ನುಗ್ಗಿ ಕಳ್ಳತನ

Sabarimala: Over 2 lakh devotees watch Makar Jyoti

Sabarimala: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಮಕರ ಜ್ಯೋತಿ ವೀಕ್ಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court: ಜಯಲಲಿತಾ ಸಂಬಂಧಿಗೆ ಚಿನ್ನ, ವಸ್ತು ಮರಳಿಸಲು ಹೈ ನಕಾರ

High Court: ಜಯಲಲಿತಾ ಸಂಬಂಧಿಗೆ ಚಿನ್ನ, ವಸ್ತು ಮರಳಿಸಲು ಹೈ ನಕಾರ

Theft Case: ಕೆಲಸಕಿದ್ಕ ಹೋಟೆಲ್‌ನಲ್ಲಿ ಕದ್ದ ಮ್ಯಾನೇಜರ್‌

Theft Case: ಕೆಲಸಕಿದ್ಕ ಹೋಟೆಲ್‌ನಲ್ಲಿ ಕದ್ದ ಮ್ಯಾನೇಜರ್‌

Bengaluru: ಗಣರಾಜ್ಯೋತವ ವೇಳೆ ಬಾಂ*ಬ್ ಸ್ಪೋ*ಟ ಹುಸಿ ಕರೆ; ಆರೋಪಿ ಸೆರೆ

Bengaluru: ಗಣರಾಜ್ಯೋತವ ವೇಳೆ ಬಾಂ*ಬ್ ಸ್ಪೋ*ಟ ಹುಸಿ ಕರೆ; ಆರೋಪಿ ಸೆರೆ

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ವೈದ್ಯನ ಕೊಲೆಗೈದು ನದಿಗೆ ಎಸೆದಿದ್ದ ಹಂತಕರು!

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

da

BBK11: ದೈತ್ಯರನ್ನೇ ಮಣ್ಣು ಮುಕ್ಕಿಸಿ ಮಹತ್ವದ ಟಾಸ್ಕ್ ನಲ್ಲಿ ಮಿಂಚಿದ ಧನರಾಜ್

Women’s Ashes: Another win for Australia

Women’s Ashes: ಆಸ್ಟ್ರೇಲಿಯಕ್ಕೆ ಮತ್ತೊಂದು ಗೆಲುವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.