ದಲಿತರು ಒಟ್ಟಾಗಬೇಕಿದೆ

Team Udayavani, Mar 5, 2017, 11:54 AM IST

dalitas.jpg

ಬೆಂಗಳೂರು: ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ದಲಿತರನ್ನು ಸ್ವಾರ್ಥಕ್ಕಾಗಿಯಷ್ಟೇ ಬಳಸಿಕೊಳ್ಳುತ್ತಿದೆ, ಈ ಬಗ್ಗೆ ದೇಶದ ಇಡೀ ದಲಿತ ಸಮುದಾಯ ಎಚ್ಚರಗೊಳ್ಳಬೇಕಿದೆ ಎಂದು ರೋಹಿತ್‌ ವೇಮುಲ ತಾಯಿ ರಾಧಿಕಾ ವೇಮುಲ ಹೇಳಿದ್ದಾರೆ. 

ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್‌)ದ ವತಿಯಿಂದ ಶನಿವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ “ಪ್ರಜಾಪ್ರಭುತ್ವದ ಉಳಿವಿಗಾಗಿ ಮೀಸಲಾತಿ ಉಳಿಸೋಣ’ ಘೋಷವಾಕ್ಯದಡಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ದಲಿತರು ದೇಶದ ದೊಡ್ಡ ಶಕ್ತಿ. ಆದರೆ, ದಲಿತರನ್ನು ಒಡೆದು ಆಳುವಿಕೆ ಮೊದಲಿಂದಲೂ ನಡೆಯುತ್ತಿದೆ. ದಲಿತ ನಾಯಕರನ್ನು ವಿಭಜಿಸಿ ದಲಿತ ಶಕ್ತಿಯನ್ನು ಛಿದ್ರಗೊಳಿಸಲಾಗಿದೆ.

ಆ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ದಲಿತರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಇದು ಪ್ರತಿಯೊಬ್ಬ ದಲಿತನಿಗೂ ಅರ್ಥವಾಗಬೇಕಿದೆ ಎಂದು ಹೇಳಿದರು. ದಲಿತರು ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ತತ್ವಾದರ್ಶಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಅದರಿಂದ ದಲಿತರು ದೇಶದ ಚುಕ್ಕಾಣಿ ಹಿಡಿಯುಲು ಸಾಧ್ಯವಾಗಲಿದೆ. ದಲಿತರಿಗೆ ಅಧಿಕಾರ ಸಿಕ್ಕಾಗ ಮಾತ್ರ ಅವರ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಹರಿದು ಹಂಚಿ ಹೋಗಿರುವ ದಲಿತರು ಒಟ್ಟಾಗಿ ಹೋರಾಟಕ್ಕೆ  ಇಳಿಯಬೇಕಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ  ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌.ದ್ವಾರಕನಾಥ್‌ ಮಾತನಾಡಿ, “ಕೇಂದ್ರ ಸರ್ಕಾರ ಮೀಸಲಾತಿ ರದ್ದುಪಡಿಸುವ ಹುನ್ನಾರ ನಡೆಸುತ್ತಿದೆ. ಹಾಗೇನಾದರೂ ಆದರೆ ಮತ್ತೆ ಈ ದೇಶದ ದಲಿತರು, ಪರಿಶಿಷ್ಟರು, ಹಿಂದುಳಿದ ವರ್ಗಗಳು ದಾಸ್ಯಕ್ಕೆ ನೂಕಲ್ಪಡುತ್ತವೆ. ಮೇಲ್ಪಂಗ್ತಿಯ ಕೆಲವೇ ಸಮುದಾಯಗಳು ದೇಶದ ಅಧಿಕಾರ ಹಿಡಿದು ಉಳಿದವರ ಮೇಲೆ ಸವಾರಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕೆ ಎಂದೂ ಅವಕಾಶ ನೀಡಬಾರದು. ದಲಿತರೂ ಸೇರಿದಂತೆ ಅವಕಾಶ ವಂಚಿತ ಎಲ್ಲ ಸಮುದಾಯಗಳೂ ಒಗ್ಗಟ್ಟಾಗಿ ಮೀಸಲಾತಿ ಉಳಿವಿಗಾಗಿ ಹೋರಾಟ ನಡೆಸಬೇಕಿದೆ,” ಎಂದು ಹೇಳಿದರು. 

ಬಿವಿಎಸ್‌ ಮುಖಂಡ ಡಾ.ಶಿವಕುಮಾರ್‌ ಮಾತನಾಡಿ, “”ಬಡ್ತಿ ವಿಚಾರದಲ್ಲಿ ಮೀಸಲಾತಿ ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌ ಆದೇಶದಿಂದ ದಲಿತ ನೌಕರರಿಗೆ ಅನ್ಯಾಯವಾಗುತ್ತಿದೆ. ಭಾಷಣಗಳಲ್ಲಿ ದಲಿತ, ಅಹಿಂದ ಪರ ಎನ್ನುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರವಾಗಿ ಸಮರ್ಥವಾದ ಮಂಡಿಸುವಲ್ಲಿ ವಿಫ‌ಲವಾಗಿದೆ. ಕೂಡಲೇ ಸರ್ಕಾರ ಈ ಆದೇಶ ತೆರವಿಗೆ ಅಥವಾ ಮರು ಪರಿಶೀಲನೆಗೆ ಮೇಲ್ಮನವಿ ಸಲ್ಲಿಸಬೇಕು,” ಎಂದು ಆಗ್ರಹಿಸಿದರು.

ಸಾವಿನ ಸತ್ಯ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು
ವಿವಿಧ ಪಕ್ಷಗಳ ನಾಯಕರು ರೋಹಿತ್‌ ವೇಮುಲ ಸಾವಿನ ರಹತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು ಎಂದು ರಾಧಿಕಾ ವೇಮುಲ ಇದೇ ವೇಳೆ ಆರೋಪಿಸಿದರು. ವಿವಿಧ ಪಕ್ಷಗಳ ನಾಯಕರು ರೋಹಿತ್‌ ವೇಮುಲ ಸಾವಿನ ರಹಸ್ಯ ಮುಚ್ಚಿಡಲು ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದರು. ನನಗೆ ಸಾಂತ್ವನ ಹೇಳುವ ನೆಪದಲ್ಲಿ ಬಂದ ಹಲವು ಮುಖಂಡರು ವಿವಿಧ ಕೊಡುಗೆಗಳ ಆಮಿಷ ಒಡ್ಡಿದ್ದರು. ಈ ಆಮಿಷಗಳ ಹಿಂದೆ ರೋಹಿತ್‌ನ ಸಾವಿನ ಸತ್ಯ ಬಚ್ಚಿಡುವ ಪ್ರಯತ್ನಗಳಿದ್ದವು ಎಂದು ಹೇಳಿದರು.

ಟಾಪ್ ನ್ಯೂಸ್

Udupi: ನಗರ ಠಾಣೆಯ ಪೊಲೀಸರಿಂದ ರಾತ್ರಿ ಕಾರ್ಯಾಚರಣೆ

Udupi: ವೇಶ್ಯಾವಾಟಿಕೆ ಹಿನ್ನೆಲೆ; ಪೊಲೀಸರಿಂದ ರಾತ್ರಿ ಕಾರ್ಯಾಚರಣೆ

BBK11: ಬಿಗ್ ಬಾಸ್ ‌ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್

BBK11: ಬಿಗ್ ಬಾಸ್ ‌ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್

Vijayapura: ಸೈಬರ್ ಕ್ರೈಂ; ನೊಂದವರ ಖಾತೆಗೆ 7.48 ಕೋಟಿ ರೂ. ಮರು ಜಮೆ

Vijayapura: ಸೈಬರ್ ಕ್ರೈಂ; ನೊಂದವರ ಖಾತೆಗೆ 7.48 ಕೋಟಿ ರೂ. ಮರು ಜಮೆ

army

J&K ; ಮತ್ತೆ ಉಗ್ರರ ಅಟ್ಟಹಾಸ: ದಾಳಿಯಲ್ಲಿ ನಾಗರಿಕ ಸಾ*ವು, ಹಲವು ಯೋಧರಿಗೆ ಗಾಯ

1-kutti

Mangaluru CCB: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊ*ಲೆ ಆರೋಪಿ ಬಂಧನ

court

Koppal; ಮರುಕುಂಬಿ ಪ್ರಕರಣ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

1-bharat

BJP; ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBMP: ಬಿಬಿಎಂಪಿಯಲ್ಲಿ 2067 ಕೋಟಿ ರೂ. ಅಕ್ರಮ: ಎನ್‌.ಆರ್‌.ರಮೇಶ್‌

BBMP: ಬಿಬಿಎಂಪಿಯಲ್ಲಿ 2067 ಕೋಟಿ ರೂ. ಅಕ್ರಮ: ಎನ್‌.ಆರ್‌.ರಮೇಶ್‌

4

Kannada Pustaka Habba: ನಾಡಿದ್ದಿನಿಂದ ಡಿ.1ರವರೆಗೆ ಕನ್ನಡ ಪುಸ್ತಕ ಹಬ್ಬ

Blackmail: ಅಶ್ಲೀಲ ವಿಡಿಯೋ; ಅಕ್ಕನಿಂದ ತಂಗಿಯ ಬ್ಲ್ಯಾಕ್‌ಮೇಲ್ ‌

Blackmail: ಅಶ್ಲೀಲ ವಿಡಿಯೋ; ಅಕ್ಕನಿಂದ ತಂಗಿಯ ಬ್ಲ್ಯಾಕ್‌ಮೇಲ್ ‌

Bengaluru Rain: ದ್ವೀಪದಂತಾದ ಬಡಾವಣೆ, ಅಪಾರ್ಟ್‌ಮೆಂಟ್‌ಗಳು!

Bengaluru Rain: ದ್ವೀಪದಂತಾದ ಬಡಾವಣೆ, ಅಪಾರ್ಟ್‌ಮೆಂಟ್‌ಗಳು!

Bengaluru Rain: ರಾಜಧಾನಿಯ ಹಿಂಡಿ ಹಿಪ್ಪೆ ಮಾಡಿದ ಹಿಂಗಾರು  

Bengaluru Rain: ರಾಜಧಾನಿಯ ಹಿಂಡಿ ಹಿಪ್ಪೆ ಮಾಡಿದ ಹಿಂಗಾರು  

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ನಗರ ಠಾಣೆಯ ಪೊಲೀಸರಿಂದ ರಾತ್ರಿ ಕಾರ್ಯಾಚರಣೆ

Udupi: ವೇಶ್ಯಾವಾಟಿಕೆ ಹಿನ್ನೆಲೆ; ಪೊಲೀಸರಿಂದ ರಾತ್ರಿ ಕಾರ್ಯಾಚರಣೆ

BBK11: ಬಿಗ್ ಬಾಸ್ ‌ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್

BBK11: ಬಿಗ್ ಬಾಸ್ ‌ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್

Vijayapura: ಸೈಬರ್ ಕ್ರೈಂ; ನೊಂದವರ ಖಾತೆಗೆ 7.48 ಕೋಟಿ ರೂ. ಮರು ಜಮೆ

Vijayapura: ಸೈಬರ್ ಕ್ರೈಂ; ನೊಂದವರ ಖಾತೆಗೆ 7.48 ಕೋಟಿ ರೂ. ಮರು ಜಮೆ

POlice

Udupi: 30ಕ್ಕೂ ಮೊಬೈಲ್‌ಪೋನ್‌ಗಳು ಮರಳಿ ಮಾಲಕರ ಮಡಿಲಿಗೆ

complaint

Kasaragod: ಸಚಿತಾ ರೈ ವಿರುದ್ಧ ಇನ್ನೆರಡು ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.