ಡೇರ್‌ ಡೆವಿಲ್‌ ಡ್ರಗ್‌ ಡೀಲ್‌!


Team Udayavani, Jul 16, 2018, 12:26 PM IST

blore-1.gif

ಭಾರತದ ಮಾದಕ ದ್ರವ್ಯ ರಾಜಧಾನಿ ಎಂದು ಕರೆಸಿಕೊಳ್ಳುವುದು ಪಂಜಾಬ್‌. ಯುವ ಪೀಳಿಗೆಯನ್ನು ಡ್ರಗ್ಸ್‌ ಕಪಿಮುಷ್ಟಿಯಿಂದ ಪಾರು ಮಾಡಲು ಅಲ್ಲಿನ ಸರ್ಕಾರ ಹೆಣಗುತ್ತಿದೆ. ಇದೀಗ ಕರ್ನಾಟಕದಲ್ಲೂ ಡ್ರಗ್ಸ್‌ ಮಾಫಿಯಾ ವ್ಯಾಪಕವಾಗುತ್ತಿದೆ. ಪಂಜಾಬ್‌ನಂತೆ ಇಲ್ಲೂ ವಿದ್ಯಾರ್ಥಿಗಳು, ಯುವಜನರೇ ಟಾರ್ಗೆಟ್‌. ಅದರಲ್ಲೂ ಸಿಲಿಕಾನ್‌ ಸಿಟಿಯ ಶಾಲಾ ಕಾಲೇಜುಗಳ ಬಳಿ, ಕೊಳಚೆ ಪ್ರದೇಶ, ಪ್ರತಿಷ್ಠಿತ ಹೋಟೆಲ್‌, ಪಬ್‌, ಬಾರ್‌ಗಳಲ್ಲಿ ಮಾದಕ ಲೋಕದ ಬೇರುಗಳಿವೆ. ನಗರದಲ್ಲಿ ಭಯವಿಲ್ಲದೇ ನಡೆಯುತ್ತಿರುವ ಡ್ರಗ್‌ ಮಾಫಿಯಾದ ಆಳ-ಅಗಲದ ಮಾಹಿತಿ ಈ ಬಾರಿಯ “ಸುದ್ದಿ ಸುತ್ತಾಟ’ದಲ್ಲಿ 

ಆ “ಧಮ್‌’ ಬಿರಿಯಾನಿ ಕೊಡಣ್ಣ.  ಎಷ್ಟು ಬೇಕು? ನನ್ನ ಹತ್ರ ಇಷ್ಟೈತೆ. ಅದಕ್ಕೆ ಎಷ್ಟು ಬರುತ್ತೋ ಅಷ್ಟು ಕೊಡಣ್ಣ. ಮೊದುಲು ತಲೆನೋವು ಕಡಿಮೆಯಾದ್ರೆ ಸಾಕು. ಒಂದು ಫ‌ುಲ್‌ ಧಮ್‌ ಬಿರಿಯಾನಿ ರೇಟ್‌ ಎಷ್ಟು ಗೊತ್ತಾ? 1,500 ರೂ.! ಅರ್ಧ ಎಲ್ಲ ಕೊಡೋಲ್ಲ. ಬೇಕಾದ್ರೆ ಫ‌ುಲ್‌ ತಗೋ.  ಇಲ್ಲಾಂದ್ರೆ ಹೊಯ್ತಾ ಇರು…. ಇದು ಯಾವುದೋ ಧಮ್‌ ಬಿರಿಯಾನಿ ಹೊಟೇಲ್‌ನಲ್ಲಿ ನಡೆದ ಚೌಕಾಸಿ ವ್ಯವಹಾರ ಅಲ್ಲ. ನಗರದ ಹೊರಭಾಗದಲ್ಲಿ ಅವ್ಯಾಹತವಾಗಿ ನಡೆಯುವ ಮಾದಕ ವಸ್ತು ಗಾಂಜಾ ವ್ಯಾಪಾರ. ಇದಿಷ್ಟೇ ಅಲ್ಲ, ಮಾದಕ ವಸ್ತುಗಳಿಗೆ ಹಲವು ಕೋಡ್‌ವರ್ಡ್‌ಗಳಿವೆ. ಗಾಂಜಾ, ಅಫಿಮು, ಚರಸ್‌ ಕೊಡಿ
ಎಂದು ಕೇಳಿದರೆ ಒದ್ದು ಕಳಿಸುತ್ತಾರೆ. ಅದೇ ಧಮ್‌ ಬಿರಿಯಾನಿ, ರೆಗ್ಯುಲರ್‌, ಮಾಲು, ಬೇಬಿ ಕೊಡಿ ಎಂದರೆ ಮೊದಲು ಮುಖ ನೋಡುತ್ತಾರೆ. ಬಳಿಕ ಅವರು ಹೇಳಿದಷ್ಟು ಹಣ ಕೊಟ್ಟರೆ ಮಾಲು ಸಿಗುತ್ತದೆ. ಇಲ್ಲಿ ಚೌಕಾಶಿಗೆ ಅವಕಾಶ ಇಲ್ಲ. ಕಡಿಮೆ ಕೊಡಿ ಸಾಕು ಎನ್ನುವಂತಿಲ್ಲ. ಕೊಟ್ಟಷ್ಟನ್ನು ಕೇಳಿದಷ್ಟು ದುಡ್ಡಿಗೆ ಕೊಳ್ಳಬೇಕು. ತಮಿಳುನಾಡಿನಿಂದ ಆಗಾಗ ಬರುವ ಪೆಡ್ಲರ್‌ಗಳು (ಡ್ರಗ್ಸ್‌ ಮಾರಾಟಗಾರರು) ಹೊಸೂರು ರಸ್ತೆ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಾರೆ. ಪ್ರತಿ 100-150 ಗ್ರಾಂಗೆ ಒಂದೂವರೆ ಸಾವಿರ ರೂ. ನಿಗದಿ ಮಾಡಿ ಯಾವುದೇ ಭಯವಿಲ್ಲದೆ ಗ್ರಾಹಕರಿಗೆ ಮಾರಾಟ ಮಾಡಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಾರೆ.

ಕೋಡ್‌ವರ್ಡ್‌ಗಳಲ್ಲಿ ಮಾಲು ಕೇಳಿ ಪಡೆದುಕೊಳ್ಳುವುದು ಕೂಡ ಅಷ್ಟು ಸುಲಭವಲ್ಲ. “ರೆಗ್ಯುಲರ್‌ ಕಸ್ಟಮರ್‌’ ಹೊರತುಪಡಿಸಿ ಬೇರೆ ಯಾರಾದರೂ ಕೋಡ್‌ವರ್ಡ್‌ನಲ್ಲಿ ಕೇಳಿದಾಗ ಮೊದಲು, ಯಾರೋ ನೀನು? ಯಾವತ್ತೂ ಇಲ್ಲಿ ನೋಡೇ ಇಲ್ಲ ಎನ್ನುತ್ತಾರೆ. ಗುರುತು ಹೇಳಿ ಯಾರೋ ಕಳುಹಿಸಿದರು ಎಂದ ಬಳಿಕವಷ್ಟೇ, ಪ್ಯಾಕೆಟ್‌ಗೆ 800 ರೂ. ಆಗುತ್ತದೆ. ಎಷ್ಟು ಬೇಕು ಎಂದು ಕೇಳುತ್ತಾರೆ.

ವಿದ್ಯಾರ್ಥಿಗಳೇ ಟಾರ್ಗೆಟ್‌
ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನೇ  ಧೆಕೋರರು ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಜಯನಗರ, ಚಂದ್ರಲೇಔಟ್‌, ವಿಜಯನಗರ, ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ ಬಳಿಯ ಕಾಲೇಜುಗಳ ಸುತ್ತಮುತ್ತ ವಿದ್ಯಾರ್ಥಿಗಳು ನೇರವಾಗಿ ಪೆಡ್ಲರ್‌ಗಳನ್ನು ಭೇಟಿಯಾಗಿ ಖರೀದಿಸುತ್ತಿದ್ದಾರೆ. ಈ ಕಾಲೇಜುಗಳ ಆಸುಪಾಸಿನಲ್ಲಿರುವ ಪೆಟ್ಟಿಗೆ ಅಂಗಡಿಗಳು, ಬೇಕರಿಗಳು, ಪಾನ್‌ ಸ್ಟಾಲ್‌ಗ‌ಳು, ನಾಲ್ಕೈದು ಮಂದಿ ನಿಂತುಕೊಳ್ಳುವ ಸಣ್ಣ ಪ್ರಮಾಣದ ಹೋಟೆಲ್‌ಗ‌ಳಲ್ಲಿ ಕೋಡ್‌ವರ್ಡ್‌ಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ. ಈ ಸ್ಥಳಗಳಲ್ಲಿ ವ್ಯಸನಿಗಳು ಮಾಲು ಬೇಕೆಂದು ಕೇಳಿದೊಡನೆ ಅಂಗಡಿಯಾತ 5 ಗ್ರಾಂ ತೂಕದ ಸಣ್ಣ ಪ್ಯಾಕೆಟ್‌ ಕೈಗಿಡುತ್ತಾನೆ.

ರಾಜಧಾನಿಗೆ ಮಾದಕ ವಸ್ತುಗಳು ಬರೋದು ಎಲ್ಲಿಂದ?
ಒಡಿಶಾ, ಅಸ್ಸಾಂ, ಆಂಧ್ರ ಸೇರಿ ಕೆಲ ನಕ್ಸಲ್‌ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಗಾಂಜಾ, ಕೋಲಾರ, ಚಿಕ್ಕಬಳ್ಳಾಪುರ ಮೂಲಕ ಹೊಸಕೋಟೆ ಮಾರ್ಗವಾಗಿ ನಗರ ತಲುಪಿಸುತ್ತಿದೆ. ಉತ್ತರ ಭಾರತ ಹಾಗೂ ಸ್ಥಳೀಯರು ಅವ್ಯಾಹತವಾಗಿ ಈ ದಂಧೆಯಲ್ಲಿ ತೊಡಗಿದ್ದಾರೆ.

ಕೊಕೇನ್‌, ಹೆರಾಯಿನ್‌, ಅಫಿಮು ಸೇರಿದಂತೆ ಐಷಾರಾಮಿ ಮಂದಿ ಬಳಸುವ ಮಾದಕ ವಸ್ತುಗಳು ವಿದೇಶಗಳಿಂದ ದೆಹಲಿ, ಮುಂಬೈ ಮಾರ್ಗವಾಗಿ ನಗರಕ್ಕೆ ಪೂರೈಕೆಯಾಗುತ್ತವೆ. ನಗರದಲ್ಲಿರುವ ಪೆಡ್ಲರ್‌ಗಳು ಅಕ್ರಮವಾಗಿ ಆನ್‌ಲೈನ್‌ ಹಾಗೂ ನೇರವಾಗಿ ಸಣ್ಣ-ಸಣ್ಣ ಪ್ಯಾಕೆಟ್‌ಗಳ ಮೂಲಕ ಮಾದಕ ವ್ಯಸನಿಗಳಿಗೆ ಪೂರೈಸುತ್ತಿದ್ದಾರೆ. ಅದರಲ್ಲೂ ಪೂರ್ವ ಬೆಂಗಳೂರು, ವೈಟ್‌ಫಿಲ್ಡ್‌ ಪ್ರದೇಶಗಳಲ್ಲಿ ವಿದೇಶಿಗರ ಡ್ರಗ್ಸ್‌ ದಂಧೆ ಹೆಚ್ಚಾಗಿದೆ. ಪ್ರವಾಸಿ, ಶಿಕ್ಷಣ ವೀಸಾದಡಿ ಬೆಂಗಳೂರಿಗೆ ಬರುವ ವಿದೇಶಿಗರು ವಾಪಸ್‌ ಹೋಗದೆ, ಜೀವನ ನಿರ್ವಹಣೆಗಾಗಿ ಡಗ್ಸ್‌ ದಂಧೆಯಲ್ಲಿ ತೊಡಗಿದ್ದಾರೆ.

ಉಗಾಂಡ, ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬರುವ ವಿದೇಶಿಯರು ತಮ್ಮ ದೇಹದೊಳಗೆ ಮಾದಕವಸ್ತು ಹಾಗೂ ಮಾತ್ರೆಗಳನ್ನು ಇಟ್ಟುಕೊಂಡು ನಗರ ಪ್ರವೇಶಿಸಿ, ನಂತರ ಗ್ರಾಂ. ಲೆಕ್ಕದಲ್ಲಿ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಮಾರಾಟ ಮಾಡುತ್ತಾರೆ.ಬೆಂಗಳೂರಿಗೆ ಮುಂಬೈ, ಗೋವಾ, ಚೆನ್ನೈ ಹಾಗೂ ವೈಜಾಕ್‌ ಮೂಲಕ ಮಾದಕ ವಸ್ತು ಪೂರೈಕೆಯಾಗುತ್ತದೆ. ಗಾಂಜಾ, ಚರಸ್‌ ಹೊರತುಪಡಿಸಿದರೆ, ಕೊಕೇನ್‌, ಎಲ್‌ ಎಸ್‌ಡಿ, ಬ್ರೌನ್‌ಶುಗರ್‌, ಎಂಡಿಎಂ ಆಪಾಘಾನಿಸ್ತಾನ, ಪಾಕಿಸ್ತಾನ, ಇರಾನ್‌, (ಗೋಲ್ಡನ್‌ ಕ್ರೆಸೆಂಟ್‌) ಹಾಗೂ ಮ್ಯಾನ್ಮಾರ್‌, ಥೈಲ್ಯಾಂಡ್‌, ಲಾವೋಸ್‌ (ಗ್ಲೋಲ್ಡನ್‌ ಟ್ರೈಯಾಂಗಲ್‌)ಗಳಿಂದ ಜಲ ಮತ್ತು ವಾಯು ಮಾರ್ಗದ ಮೂಲಕ ದೇಶಕ್ಕೆ ಬರುತ್ತವೆ. ನಂತರ ರಸ್ತೆ ಮಾರ್ಗದ ಮೂಲಕ ಪ್ರಮುಖ ನಗರಗಳಿಗೆ ತಲುಪುತ್ತವೆ.

ವಾರ್ಷಿಕ 200 ಕೋಟಿ ವ್ಯವಹಾರ ಬೆಂಗಳೂರಿನಲ್ಲಿ ವ್ಯಾಪಕವಾಗಿರುವ ಮಾದಕ ವಸ್ತು ದಂಧೆಯ ವಹಿವಾಟು ನೂರಾರು ಕೋಟಿಗಳ ಲೆಕ್ಕದಲ್ಲಿ ನಡೆಯುತ್ತದೆ. ಮಾದಕ ವಸ್ತು ನಿಯಂತ್ರಣ ಘಟಕ ಹಾಗೂ ನಗರ ಪೊಲೀಸರ ಪ್ರಕಾರ ವಾರ್ಷಿಕ 200 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಡ್ರಗ್ಸ್‌ ವ್ಯವಹಾರ ನಡೆಯುತ್ತಿದೆ. ಹೋಲ್‌ಸೇಲ್‌ ಮೌಲ್ಯ ಹಾಗೂ ರಿಟೇಲ್‌ ಮೌಲ್ಯದ ನಡುವೆ ವ್ಯತ್ಯಾಸ ಇರುತ್ತದೆ.

ಮಧ್ಯವರ್ತಿಗಳು ಹಣದಾಸೆಗೆ ಅತ್ಯಧಿಕ ಮೊತ್ತಕ್ಕೆ ಮಾರಾಟ ಮಾಡುತ್ತಾರೆ. ಮಾನಸಿಕ ಒತ್ತಡಕ್ಕೊಳಗಾಗುವ ವ್ಯಕ್ತಿಯೇ ಮಾದಕ ವ್ಯಸನಿಯಾಗುತ್ತಾನೆ. ಹೀಗಾಗಿ ವ್ಯಸನಿಗಳ ದೌರ್ಬಲ್ಯ ಬಳಸಿಕೊಂಡು ಪೆಡ್ಲರ್‌ಗಳು ಮನಬಂದಂತೆ ಬೆಲೆ ನಿಗದಿ ಮಾಡುತ್ತಾರೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.

ಮೇಕ್‌ ಎ ಸಿಂಗಲ್‌ ಪಫ್!
ಯುವತಿಯರು ಕೂಡ ಮಾದಕ ದ್ರವ್ಯಕ್ಕೆ ಮಾರು ಹೋಗಿದ್ದು, “ಮೇಕ್‌ ಎ ಸಿಂಗಲ್‌ ಪಫ್’ ಎಂದು ಯುವಕರನ್ನು ಕೇಳಿ ಪಡೆಯುತ್ತಾರೆ. ಕೆಲವರು ಸಿರಿಂಜ್‌ಗಳ ಮೂಲಕ ಇಂಜೆಕ್ಟ್ ಮಾಡಿಕೊಂಡು ಅಮಲು ಏರಿಸಿಕೊಳ್ಳುತ್ತಾರೆ. ಈ ವೇಳೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗಳೂ ನಡೆದಿವೆ. ವಾರಾಂತ್ಯದಲ್ಲಿ ಪ್ರತಿಷ್ಠಿತ ಹೋಟೆಲ್‌ಗ‌ಳಲ್ಲಿ ನಡೆಯುವ ಪಾರ್ಟಿಗಳಲ್ಲಿ ಭಾಗಿಯಾಗುವ ಯುವತಿಯರು ಅಮಲು ಏರಿಸಿಕೊಳ್ಳುತ್ತಿದ್ದಾರೆ. ವಿಪರ್ಯಾಸವೆಂದರೆ ಕಾಲೇಜು ಯುವತಿಯರು, ಯುವಕರ ಜತೆ ಸೇರಿ ಮಾದಕ ವಸ್ತು ಸೇವಿಸುತ್ತಿರುವ ದೃಶ್ಯಗಳು ನಗರದ ಪ್ರತಿಷ್ಠಿತ ಕಾಲೇಜುಗಳ ಬಳಿ ಕಂಡುಬರುತ್ತಿವೆ.

ಇನ್ನು ಪಬ್‌, ಡ್ಯಾನ್ಸ್‌ ಬಾರ್‌ಗಳ ಡ್ಯಾನ್ಸರ್‌ಗಳು ಸಿಂಗಲ್‌ ಪಫ್ ಎಳೆದುಕೊಂಡೇ ಸ್ಟೇಜ್‌ಗೆ ಬರುತ್ತಾರೆ. ಈ ಕುರಿತು “ಉದಯವಾಣಿ’ ಪಬ್‌ಗಳ ಸಿಬ್ಬಂದಿ ಜತೆ ಮಾತನಾಡಿದಾಗ, ಡ್ಯಾನ್ಸರ್‌ಗಳು ಡ್ರಗ್ಸ್‌ ಸೇವಿಸುವುದು ಸಾಮಾನ್ಯ. ಅದು ಒಳಗೆ ಹೋಗದಿದ್ದರೆ ಕೆಲವರಿಗೆ ಮೈ-ಕೈ ಶೇಕ್‌ ಆಗುವುದೇ ಇಲ್ಲ. ವೀಕೆಂಡ್‌ನ‌ಲ್ಲಿ ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲೇ ಡ್ರಗ್ಸ್‌ ಸಿಗುತ್ತೆ ಎನ್ನುತ್ತಾರೆ.

ಮತ್ತೂಂದು ಪ್ರಮುಖ ಅಂಶವೆಂದರೆ, ಮಾದಕ ವಸ್ತು ಮಾರಾಟ ದಂಧೆಯಲ್ಲಿ ಸ್ಥಳೀಯರಿಗಿಂತ ಉತ್ತರ ಭಾರತ ಹಾಗೂ ವಿದೇಶಿ ಪ್ರಜೆಗಳೇ ಹೆಚ್ಚು ತೊಡಗಿದ್ದಾರೆ. ಜತೆಗೆ ವಿದ್ಯಾರ್ಥಿಗಳೇ ಮಾದಕ ವಸ್ತು ಪೂರೈಸುವ ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ “ಡ್ರಗ್ಸ್‌ ಯಾರ್ಡ್‌’ ಎಂಬ ಹಣೆಪಟ್ಟಿ ಕಳಚಲು
ಟೊಂಕಕಟ್ಟಿ ನಿಂತಿರುವ ನಗರ ಪೊಲೀಸರು ಹೊಸ ಮಾದರಿಯಲ್ಲಿ ಕಾರ್ಯಾಚರಣೆಗಿಳಿದಿದ್ದಾರೆ.

ಬಾತ್ಮೀದಾರರ ಮಾಹಿತಿಯನ್ನಾಧರಿಸಿ ದಾಳಿ ನಡೆಸುತ್ತಿದ್ದ ಅಧಿಕಾರಿಗಳು, ಇದೀಗ ಮಾದಕ ವಸ್ತು ಬಳಕೆದಾರರಿಗೆ ಆಪ್ತಸಮಾಲೋಚನೆ ಕೊಡಿಸಿ ಇವರ ಹೇಳಿಕೆಯನ್ನಾಧರಿಸಿ ಪೆಡ್ಲರ್‌ಗಳ ಮನೆಗಳಿಗೇ ದಾಳಿ ನಡೆಸಿ ಬಂಧಿಸುತ್ತಿದ್ದಾರೆ.

ಹೇಗೆಲ್ಲ ಬರುತ್ತೆ?
„ ಆಂಧ್ರಪ್ರದೇಶದಿಂದ ರೈಲಿನಲ್ಲಿ ಬರುವಾಗ ಸಿಲಿಂಡರ್‌ ಹಿಂಭಾಗವನ್ನು ವೃತ್ತಕಾರದಲ್ಲಿ ಕತ್ತರಿಸಿ ಒಂದು ಭಾಗದಲ್ಲಿ ಬೀಗ ಹಾಗೂ ಮತ್ತೂಂದು ಭಾಗದಲ್ಲಿ ತೆರೆಯಲು ಅನುಕೂಲವಾಗುವಂತೆ ಚಿಲಕ ಅಳವ ಡಿಸಿ ಗಾಂಜಾ ಸರಬರಾಜು „ ವಿದೇಶಗಳಿಂದ ಸೋಪಿನ ಬಾಕ್ಸ್‌ಗಳು, ದೇಹದೊಳಗೆ (ಪ್ಲಾಸ್ಟಿಕ್‌ ಕೋಟೆಡ್‌ ಮಾತ್ರೆಗಳನ್ನು ನುಂಗಿ). „ ರೈಲು, ಬಸ್‌ಗಳಲ್ಲಿ ಗಾಂಜಾ ಸರಬರಾಜು 

ಯಾವೆಲ್ಲಾ ಡ್ರಗ್ಸ್‌ ಇವೆ?
ಗಾಂಜಾ, ಭುಕ್ಕಿ, ಹೆರಾಯಿನ್‌, ಅಫೀಮು, ನಿಕೋಟಿನ್‌, ಕೋಕೈನ್‌, ಕೋಕ ಬಿಲೆಗಳು, ಬ್ರೌನ್‌ಶುಗರ್‌, ಕೋಕಾ ಹೂ, ಹಶೀಷ್‌, ಹಶೀಷ್‌ ಎಣ್ಣೆ, ಓಪಿಯಂ, ಆ್ಯಂಫೆಟಮಿನ್‌, ಬೆನ್ಸೋಡಯಾ ಮಾತ್ರೆಗಳು  (ಅಲ್ಟ್ರಾಜೊಲಮ್‌, ಲೋರಾಜಿಪಮ್‌, ರಾಹಿಪ್ನಾಲ್‌, ಡಯಾಜಿಪಮ್‌ (ವ್ಯಾಲಿಯಂ) ಔಷಧಿಗಳು. ಮೆಥಾಪಿಟೋಮೈನ್‌, ಮಾರಿಜುಲ್ಲಾ, ಎಲ್‌ಎಸ್‌ಡಿ.

ಟ್ರೋಲ್‌ಫ್ರೀ ನಂಬರ್‌ “1908′ ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಮಾರಾಟ ದಂಧೆಯ ಹೆಡೆಮುರಿ ಕಟ್ಟಲು ಸಿಸಿಬಿ ಪೊಲೀಸರು “1908′ ಟ್ರೋಲ್‌ ಫ್ರೀ ನಂಬರ್‌ ತೆರೆದಿದ್ದಾರೆ. ಒಂದು ವೇಳೆ ಮಾದಕ ವಸ್ತು ಮಾರಾಟ ಕಂಡು ಬಂದರೆ ಕೂಡಲೇ ಈ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಸಿಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಎಲ್ಲೆಲ್ಲಿ ಮಾರಾಟ?
ನಗರದ ಹೊರವಲಯ ಹಾಗೂ ವಿದೇಶಿಯರ ಬಾಹುಳ್ಯ ಹೆಚ್ಚಿರುವ, ಅಕ್ರಮವಾಗಿ ನಡೆಯುವ ಬಾರ್‌, ಕ್ಲಬ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಮಾರಾಟ ನಡೆಯುತ್ತಿದೆ. ಜತೆಗೆ ಆಫ್ರಿಕಾ, ನೈಜಿರಿಯಾ ಪ್ರಜೆಗಳು ನೆಲೆಸಿರುವ ಕೊತ್ತನೂರು, ಬಾಣಸವಾಡಿ, ಕೆ.ಆರ್‌.ಪುರಂ, ಇಂದಿರಾನಗರ, ರಾಮಮೂರ್ತಿನಗರ, ಹೆಣ್ಣೂರು ಠಾಣೆ, ಸುದ್ದುಗುಂಟೆಪಾಳ್ಯ, ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಇನ್ನು ಗಾಂಜಾ ಮಾರಾಟ ಹೊಸಕೋಟೆ, ಮೈಸೂರು ರಸ್ತೆ, ಬಾಣಸವಾಡಿ, ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌, ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಮೈಕೋ ಲೇಔಟ್‌, ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ಸಕ್ರಿಯವಾಗಿದೆ.

ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ್ರೆ ಹೋಮ್‌ ಡಿಲೆವರಿ 
ನಗರದಲ್ಲಿ ಇತ್ತೀಚೆಗೆ ರಿಯಲ್‌ ಎಸ್ಟೇಟ್‌, ಶಸ್ತ್ರಾಸ್ತ್ರ ಮಾರಾಟ ದಂಧೆಯೇ ದೊಡ್ಡದ್ದು ಎನ್ನಲಾಗಿತ್ತು. ಆದರೆ, ಮಾದಕ ವಸ್ತು ಮಾರಾಟ ದಂಧೆ ಎಂಬುದು ಇವೆಲ್ಲಕ್ಕಿಂತ ಜೋರಾಗಿಯೇ ನಡೆಯುತ್ತಿದೆ. ಈ ಮೊದಲು ಪೆಡ್ಲರ್‌ ಇರುವ ಸ್ಥಳಕ್ಕೆ ಹೋಗಿ ಖರೀದಿಸಬೇಕಿತ್ತು. ಆದರೆ, ಈಗ ಆನ್‌ಲೈನ್‌ನಲ್ಲಿ ಬುಕ್‌ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಹೋಮ್‌ ಅಥವಾ ಸ್ಪಾಟ್‌ ಡೆಲಿವರಿ ಆಗುತ್ತದೆ. ಅಷ್ಟು ಪ್ರಬಲವಾಗಿ ಡ್ರಗ್ಸ್‌ ಮಾರಾಟ ಜಾಲ ನಗರದಲ್ಲಿ ಬೇರು ಬಿಟ್ಟಿದೆ. ಕೇವಲ ಪಾರ್ಟಿ, ಪಬ್‌, ಐಷಾರಾಮಿ ಹೋಟೆಲ್‌ಗ‌ಳಲ್ಲಿ ಪೂರೈಕೆ ಆಗುತ್ತಿದ್ದ “ಹೈಫೈ ಡ್ರಗ್‌’ ಇದೀಗ ಶಾಲಾ, ಕಾಲೇಜುಗಳು, ಗೂಡಂಗಡಿಗಳು, ಬೀಡಾಸ್ಟಾಲ್‌, ಬೇಕರಿಗಳಲ್ಲಿ ಕೋಡ್‌ ವರ್ಡ್‌ಗಳ ಮೂಲಕ ಪೂರೈಕೆ ಆಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಸಿನಿಮಾ ನಟರು, ಉದ್ಯಮಿಗಳು, ಸಾಫ್ಟ್ವೇರ್‌ ಎಂಜಿನಿಯರ್‌ಗಳು ಇದರ ದಾಸರಾಗುತ್ತಿದ್ದಾರೆ. ಮತ್ತೂ ಆತಂಕದ ಸಂಗತಿ ಎಂದರೆ ಶಾಲಾ ಮಕ್ಕಳು ಕೂಡ ಮಾದಕ ದ್ರವ್ಯ ವ್ಯಸನಿಗಳಾಗುತ್ತಿರುವುದು. ಇದಕ್ಕೆ ಕಾರಣ ಅಂತರ್ಜಾಲದಲ್ಲಿ ಮಾದಕ ವಸ್ತು ಮಾರಾಟ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿರುವುದು.

ಹೆಚ್ಚು ಅಂತರ್ಜಾಲ ಬಳಕೆ ಮಾಡುವ ಹೈಸ್ಕೂಲ್‌ ವಿದ್ಯಾರ್ಥಿಗಳು ಒಮ್ಮೆ ಟ್ರೈ ಮಾಡೋಣ ಎಂದು ಆನ್‌ಲೈನ್‌ ಮೂಲಕ ಗಾಂಜಾ ಮತ್ತು ಅಫೀಮು ತರಿಸುತ್ತಾರೆ. ಇದಕ್ಕಾಗಿ ಮನೆಯಲ್ಲಿ ಹಣ ಕಳವು ಮಾಡುತ್ತಾರೆ. ಖರೀದಿಸಿದ ಡ್ರಗ್ಸ್‌ ಅನ್ನು ಹಾಸಿಗೆ ಕೆಳಗೆ ಹಾಗೂ ಶಾಲಾ ಬ್ಯಾಗ್‌ಗಳಲ್ಲಿ ಗೌಪ್ಯವಾಗಿಟ್ಟುಕೊಂಡು ಸೇವಿಸುತ್ತಾರೆ. ಜತೆಗೆ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ಗಳಲ್ಲಿ ನಶೆ, ಒನ್‌ ಪಫ್, ಗಾಂಜಾ ಎಂಬೆಲ್ಲ ಹೆಸರುಗಳಲ್ಲಿ ತೆರೆಯುವ ಖಾತೆಗಳ ಗ್ರೂಪ್‌ಗ್ಳನ್ನು ಸಂಪರ್ಕಿಸಿದಾಗಲೂ ಮಾದಕ ವಸ್ತು ಸಿಗುತ್ತಿರುವುದು ಅಪಾಯವನ್ನು ಇನ್ನಷ್ಟು ಹೆಚ್ಚಿಸಿದೆ.

ರೈಲು ನಿಲ್ದಾಣ, ಸ್ಲಂಗಳಲ್ಲಿ ಗಾಂಜಾ ಅಡ್ಡೆಗಳಿವೆ. ಪ್ರತಿ ನಿತ್ಯ ನಸುಕಿನ 4 ಗಂಟೆ ಹಾಗೂ ಸಂಜೆ 7 ಗಂಟೆ ವೇಳೆಗೆ ಈ ಪ್ರದೇಶಗಳಿಗೆ ಗಾಂಜಾ ಹಾಗೂ ಅಫೀಮು ಪೂರೈಕೆ ಆಗುತ್ತಿದೆ. ಇದನ್ನು ಆರಂಭದಲ್ಲಿ ಬಳಸುವ ಮಕ್ಕಳು ಕೊನೆಗೆ ಪೆಡ್ಲರ್‌ಗಳಾಗಿ ಬದಲಾಗುತ್ತಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಳ್ಳುವ ದಂಧೆಕೋರರು, ಕೊಳೆಗೇರಿ ಮಕ್ಕಳಿಗೆ ಅಲ್ಪಸ್ವಲ್ಪ ಹಣ ಹಾಗೂ ಮಾದಕ ವಸ್ತು ಕೊಟ್ಟು ದಂಧೆ ನಡೆಸುತ್ತಿದ್ದಾರೆ. 

ಡ್ರಗ್ಸ್‌ ಪೆಡ್ಲಿಂಗ್‌ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗುವುದು. ನಗರ ಭಾಗಗಳಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡ್ರಗ್ಸ್‌ ಮಾಫಿಯಾ ವ್ಯಾಪಕವಾಗಿ ಹರಡಿದ್ದು, ಇದನ್ನು ತಡೆಗಟ್ಟಲು ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. 
  ಡಾ.ಜಿ.ಪರಮೇಶ್ವರ್‌, ಉಪಮುಖ್ಯಮಂತ್ರಿ

ರಾಜ್ಯದಲ್ಲಿ 4ರಿಂದ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಡ್ರಗ್ಸ್‌ ವ್ಯಸನಿಗಳಾಗಿದ್ದಾರೆ. ರಾಜಧಾನಿಯಲ್ಲಿ 40ರಿಂದ 50 ಡ್ರಗ್ಸ್‌ ಮಾಫಿಯಾ ಲೀಡರ್‌ಗಳಿದ್ದು, ಅವರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಗೊಳಿಸಿದರೆ, ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.
  ಆರ್‌.ಅಶೋಕ್‌, ಬಿಜೆಪಿ ಶಾಸಕ

ಡ್ರಗ್ಸ್‌ ಮಾರಾಟ ಜಾಲದ ಬಗ್ಗೆ ಪೊಲಿಸರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ದೂರು ಕೊಟ್ಟರೆ ಕ್ರಮ ತೆಗೆದುಕೊಂಡಂತೆ ಮಾಡುತ್ತಾರೆ. ಈ ವ್ಯವಹಾರ ಹೀಗೇ ಬಿಟ್ಟರೆ, ನರ ಸತ್ತ ಯುವ ಜನಾಂಗದಿಂದಲೇ ದೇಶ ಹಾಳಾಗುವುದರಲ್ಲಿ ಸಂದೇಹವಿಲ್ಲ. 
  ಸುರೇಶ್‌ ಕುಮಾರ್‌, ಬಿಜೆಪಿ ಶಾಸಕ

ಡ್ರಗ್ಸ್‌ ಹಾವಳಿ ಕುರಿತು ಹಿರಿಯ ಅಧಿಕಾರಿಗಳ ಸಭೆ ಕರೆದು ಜಿಲ್ಲಾ ಮಟ್ಟದಲ್ಲಿ ಎಸ್ಪಿಗಳಿಗೆ ಸೂಚನೆ ಕೊಡಿ. ಡ್ರಗ್ಸ್‌ ಮಾಫಿಯಾ ಮಟ್ಟ ಹಾಕುವ ಅಧಿಕಾರಿಗಳಿಗೆ ಪ್ರಶಸ್ತಿ ಕೊಡುವ ಮೂಲಕ ಪ್ರೋತ್ಸಾಹ ನೀಡಬೇಕು.
  ಬಿ.ಎಸ್‌. ಯಡಿಯೂರಪ್ಪ, ಪ್ರತಿಪಕ್ಷದ ನಾಯಕ

ಮಾದಕ ವಸ್ತು ಮಾರಾಟ ಜಾಲ ತಡೆಗಟ್ಟಲು ನಮ್ಮ ಕಾನೂನು ಕಠಿಣವಾಗಿದ್ದರೂ ಪೊಲೀಸರಿಗೆ ಸಂಪೂರ್ಣ ಅಧಿಕಾರವಿಲ್ಲ. ಬಂಧಿತರ ಪರವಾಗಿ ಶಿಫಾರಸ್ಸು ಮಾಡುವುದರಿಂದ ಪೊಲೀಸರ ಕೈ ಕಟ್ಟಿ ಹಾಕಿದಂತಾಗುತ್ತದೆ.
  ಡಾ.ಭರತ್‌ ಶೆಟ್ಟಿ, ಬಿಜೆಪಿ ಶಾಸಕ

 ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.