ದಿಣ್ಣೂರು ಮುಖ್ಯ ರಸ್ತೆ ಪರಿಶೀಲಿಸಿದ ಡಿಸಿಎಂ
Team Udayavani, Jun 29, 2019, 3:06 AM IST
ಬೆಂಗಳೂರು: ಆರ್.ಟಿ ನಗರ ಬಳಿಯ ದಿಣ್ಣೂರು ಮುಖ್ಯರಸ್ತೆ ಅಗಲೀಕರಣ ವಿಚಾರವಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಶುಕ್ರವಾರ ಸ್ಥಳಕ್ಕೆ ತೆರಳಿದ್ದ ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ಅಭಿಪ್ರಾಯ ಪಡೆದರು.
ದಿಣ್ಣೂರು ಮುಖ್ಯರಸ್ತೆ ಕಡಿದಾದ್ದರಿಂದ ನಿತ್ಯ ವಾಹನ ದಟ್ಟಣೆ ಅಧಿಕವಾಗಿದೆ. ಹೀಗಾಗಿ, ಈ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಲು ನಿರ್ಧರಿಸಲಾಗಿತ್ತು. ಸದ್ಯ 25 ಅಡಿ ಅಗಲವಿರುವ 4.1 ಕಿ.ಮೀ ರಸ್ತೆಯನ್ನು 69.45 ಕೋಟಿ ರೂ.ವೆಚ್ಚದಲ್ಲಿ 80 ಅಡಿಗೆ ವಿಸ್ತರಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಇದಕ್ಕಾಗಿ ಈಗಾಗಲೇ ನೀಲನಕ್ಷೆ ಕೂಡಾ ಸಿದ್ಧಪಡಿಸಿತ್ತು.
ಆದರೆ, ಅಗಲೀಕರಣದಿಂದ ಸರ್ಕಾರಿ ಕಟ್ಟಡ ಸೇರಿದಂತೆ ಸಾಕಷ್ಟು ಮನೆ, ಖಾಸಗಿ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರವಾಗಿ ಪರಿಶೀಲನೆ ಹಾಗೂ ಸ್ಥಳೀಯರ ಅಹವಾಲು ಸ್ವೀಕರಿಸಿದರು. ಈ ವೇಳೆ ಮನವಿ ಮಾಡಿದ ಸ್ಥಳೀಯರು 80 ಅಡಿ ರಸ್ತೆ ಅಗಲೀಕರಣ ಮಾಡಿದರೆ ಒಟ್ಟು 579 ಕಟ್ಟಗಳು ಒಡೆಯಬೇಕುತ್ತದೆ.
ಈ ಸಂಬಂಧ ಸ್ಥಳೀಯರು ಇರುವ 25 ಅಡಿ ರಸ್ತೆಗೆ ಎರಡೂ ಬದಿಯಲ್ಲಿ ತಲಾ 10 ಅಡಿ ಜಾಗ ಪಡೆದು ಒಟ್ಟು 50 ಅಡಿ ರಸ್ತೆ ಮಾಡುವಂತೆ ಮನವಿ ಮಾಡಿದ್ದಾರೆ. ಸ್ಥಳಿಯರ ಮನವಿಗೆ ಸ್ವೀಕರಿಸಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಈ ಬಗ್ಗೆ ಪಾಲಿಕೆ ಆಯುಕ್ತ ಹಾಗೂ ಮೇಯರ್ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗವುದು.
ರಸ್ತೆ ಅಗಲೀಕರಣದಲ್ಲಿ ಕಟ್ಟಡ ಕಳೆದುಕೊಂಡವರಿಗೆ ಪರಿಹಾರ ಅಥವಾ ಟಿಡಿಆರ್ ನೀಡಬೇಕಾ ಎಂಬುದರ ಬಗ್ಗೆಯೂ ಪಾಲಿಕೆ ಆಯುಕ್ತ, ಮೇಯರ್ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಗರದ ನಾಲ್ಕು ಭಾಗಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅತ್ಯಾಧುನಿಕ ಕ್ರೀಡಾಂಗಣ, ಕಬ್ಬನ್ ಉದ್ಯಾನದ ರೀತಿಯಲ್ಲಿ ಉದ್ಯಾನ ನಿರ್ಮಾಣ ಮಾಡಲು ಚಿಂತಿಸಲಾಗಿದೆ.
ಇದಕ್ಕಾಗಿ ಜಾಗ ಗುರುತಿಸಲು ಬಿಬಿಎಂಪಿಗೆ ಸೂಚನೆ ನೀಡಿದ್ದು, ಮುಂದಿನ ಬಜೆಟ್‌ನಲ್ಲಿ ಹಣ ಒದಗಿಸಲು ನಿರ್ಧರಿಸಲಾಗಿದೆ ಎಂದರು. ಈ ವೇಳೆ ಶಾಸಕರಾದ ಭೈರತಿ ಸುರೇಶ್, ಅಖಂಡ ಶ್ರೀನಿವಾಸ್ ಮೂರ್ತಿ, ಸಚಿವ ಜಮೀರ್ ಅಹಮದ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಇದ್ದರು.
ಶಾಲಾ ಮಕ್ಕಳಿಗೆ ಕ್ಷಮೆ ಕೇಳಿದ ಡಿಸಿಎಂ: ದಿಣ್ಣೂರು ಮುಖ್ಯರಸ್ತೆಯಲ್ಲಿ ಪರಿಶೀಲನೆಗೆ ತೆರಳಿವಾಗ ಡಿಸಿಎಂ ಬರುತ್ತಿದ್ದಾರೆ ಎಂದು ಆರ್.ಟಿ.ನಗರ ಮುಖ್ಯ ರಸ್ತೆ ಹಾಗೂ ದಿಣ್ಣೂರು ರಸ್ತೆಯಲ್ಲಿ ಜೀರೋ ಟ್ರಾಫಿಕ್ ಮಾಡಲಾಗಿತ್ತು. ಜೀರೊ ಟ್ರಾಫಿಕ್ ಬಿಸಿ ಶಾಲಾ ಬಸ್‌ಗಳಿಗೂ ತಟ್ಟಿದ್ದು, ಇದರಿಂದಾಗಿ ಮಕ್ಕಳು ಶಾಲೆಗೆ ತಲುಪುವುದು 30 ನಿಮಿಷ ತಡವಾಗಿದೆ.
ಈ ವಿಚಾರ ತಿಳಿದ ಬಳಿಕ ಡಿಸಿಎಂ ಮಕ್ಕಳ ಕ್ಷಮೆ ಕೇಳಿದ್ದಾರೆ. “ಆ್ಯಂಬುಲೆನ್ಸ್ ,ಶಾಲಾ ವಾಹನಕ್ಕೆ ಅಡ್ಡಿ ಮಾಡಬೇಡಿ ಎಂದು ಪೊಲೀಸರಿಗೆ ತಿಳಿಸಲಾಗಿತ್ತು. ಆದರೂ, ಕೆಲವೊಮ್ಮೆ ಇಂತಹ ಘಟನೆ ನಡೆಯುತ್ತವೆ. ಶಾಲಾ ಮಕ್ಕಳಿಗೆ ತಡವಾಗಿದ್ದು, ನನಗೂ ಬೇಸರ ತಂದಿದ್ದು, ಎಲ್ಲರಿಗೂ ಕ್ಷಮೆ ಕೇಳುವೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.