ಸಲಿಂಗಕಾಮ ತಂದ ಸಾವು
Team Udayavani, May 22, 2017, 12:41 PM IST
ಬೆಂಗಳೂರು: ಏ. 4ರಂದು ರಾತ್ರಿ ಅತ್ತ ವಿಶ್ವವಿಖ್ಯಾತ ಕರಗ ಮಹೋತ್ಸವ ನಡೆಯುತ್ತಿದ್ದರೆ, ಇನ್ನೊಂದು ಕಡೆ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ನಡೆದಿತ್ತು. ಕರಗದ ಸುದ್ದಿ ಜತೆಗೇ ಈ ಕೊಲೆ ಸುದ್ದಿಯೂ ಸದ್ದು ಮಾಡಿತ್ತು. ಸದ್ಯ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಸಲಿಂಗ ಸಾಂಗತ್ಯಕ್ಕೆ ಒತ್ತಾಯಿಸಿದ್ದೇ ಹತ್ಯೆಗೆ ಕಾರಣ ಎಂಬ ಅಂಶ ಬಯಲಾಗಿದೆ. ಇದರ ಜತೆಗೆ, ಮಾರುಕಟ್ಟೆ ವ್ಯಾಪ್ತಿಯಲ್ಲಿ ದರೋಡೆ ಕೋರರು ಕಳ್ಳತನಕ್ಕೆಂದೇ ವಾಟ್ಸ್‌ಆéಪ್ ಗ್ರೂಪ್ ಮಾಡಿಕೊಂಡಿದ್ದ ಸಂಗತಿ ಈ ಪ್ರಕರಣದಿಂದ ಬೆಳಕಿಗೆ ಬಂದಿದೆ.
ಹಾಸನ ಮೂಲದ ಸದ್ಯ ಮೂಡಲಪಾಳ್ಯದಲ್ಲಿ ವಾಸವಿದ್ದ ಮುರುಳೀಧರ ಎಂಬಾತನನ್ನು ಏ.4ರಂದು ರಾತ್ರಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ಸದ್ಯ ಕಗ್ಗಲೀಪುರದಲ್ಲಿ ವಾಸವಾಗಿರುವ ರಸೂಲ್‌ನನ್ನು ಬಂಧಿಸಲಾಗಿದೆ. ಬಂಧಿತ ರಸೂಲ್ ನಗರದ ಹಲವು ಠಾಣೆ ವ್ಯಾಪ್ತಿಯಲ್ಲಿ ದರೋಡೆ, ಪಿಕ್ ಪ್ಯಾಕೆಟ್, ಡಾಕಾಯಿತಿ ಪ್ರಕರಣಗಳಲ್ಲಿ ಪೋಲಿಸರ ವಾಟೆಂಡ್ ಲಿಸ್ಟ್‌ನಲ್ಲಿದ್ದ. ಅಲ್ಲದೆ, ಜೈಲು ಸೇರಿ ಬಿಡುಗಡೆಯಾಗಿ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಂದು ನಡೆದಿದ್ದು ಇಷ್ಟು: ಏ. 4ರಂದು ಕರಗ ಮಹೋತ್ಸವ ನೋಡಲು ಬಂದಿದ್ದ ಮುರಳೀಧರ್ ರಾತ್ರಿ 11 ಗಂಟೆ ಸುಮಾರಿಗೆ ಮಾರುಕಟ್ಟೆ ಕಾಂಪ್ಲೆಕ್ಸ್ ಬಳಿಯಿರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದ. ಅದೇ ಸಮಯಕ್ಕೆ ಪಿಕ್‌ಪಾಕೆಟ್‌ಗಾಗಿ ರಸೂಲ್ ಕೂಡ ಅಲ್ಲಿಗೆ ಬಂದಿದ್ದ. ಶೌಚಾಲಯದ ಹೊರಗೆ ವಿದ್ಯುತ್ ದೀಪಗಳ ಬೆಳಕು ಇದ್ದ ಕಾರಣ, ರಸೂಲ್ ಜನರ ಕಣ್ಣು ತಪ್ಪಿಸಲು ಶೌಚಾಲಯಕ್ಕೆ ಹೋಗಿ, ಅಲ್ಲಿಂದ ಟೂಲ್ಸ್ ಬಜಾರ್ ಕಡೆ ತೆರಳಲು ಯತ್ನಿಸಿದ್ದ.
ಆ ವೇಳೆ ಅಲ್ಲಿಯೇ ಇದ್ದ ಮುರಳೀಧರ್ ತನ್ನ ಮುಂದೆ ನಡೆದು ಹೋಗುತ್ತಿದ್ದ ರಸೂಲ್‌ನನ್ನು ನೋಡಿ ಮಾದಕ ನಗೆ ಬೀರಿದ್ದ. ರಸೂಲ್ ಕೂಡ ಸ್ಪಂದಿಸಿದ್ದರಿಂದ ಮುರಳೀಧರ್ ಆತನನ್ನು ಹಿಂಬಾಲಿಸಿದ. ಇದರಿಂದ ಅನುಮಾನ ಗೊಂಡ ರಸೂಲ್ ಮುರಳೀಧರನನ್ನು ಈ ಬಗ್ಗೆ ಪ್ರಶ್ನಿಸಿದ್ದ. ಆಗ ಮುರಳೀಧರ್ ಸಲಿಂಗಕಾಮಕ್ಕೆ ಆಹ್ವಾನಿಸಿದಾಗ ರಸೂಲ್ ಒಪ್ಪಿದ್ದ. ಇಬ್ಬರೂ ಟೂಲ್ಸ್ ಬಜಾರ್‌ನ ಪಶ್ಚಿಮ ಗೇಟ್ ಕಡೆ ಹೋಗಿದ್ದರು.
ಅಲ್ಲಿ ಜನರಿಲ್ಲದ ಕಡೆ ಮುರಳೀಧರ್ ರಸೂಲ್‌ನನ್ನು ತಬ್ಬಿಕೊಂಡಿದ್ದಾನೆ. ಆಗ ರಸೂಲ್ ತನ್ನ ಬಳಿ ಇದ್ದ ಚಾಕುವಿನಿಂದ ಮುರಳೀಧರ್‌ನ ಎಡ ತೊಡೆ ಮತ್ತು ಹೊಟ್ಟೆ ಭಾಗಕ್ಕೆ ಇರಿದಿದ್ದ. ಆಗ ಮುರಳೀಧರ ಜೋರಾಗಿ ಕೂಗಿಕೊಂಡಿದ್ದ. ಗಾಬರಿಗೊಂಡ ರಸೂಲ್ ಆತನ ಬಳಿಯಿದ್ದ 350 ರೂ. ಕಸಿದು ಪರಾರಿಯಾಗಿದ್ದಾನೆ. ಮುರಳೀಧರ್ ಬಳಿ ಇದ್ದ ಐಷಾರಾಮಿ ಮೊಬೈಲ್ ಮತ್ತು ಹಣ ಕಸಿದು ಕೊಳ್ಳಲು ಯೋಚಿಸಿ ಆತ ಸಲಿಂಗ ಕಾಮಕ್ಕೆ ಕರೆದಾಗ ಒಪ್ಪಿಕೊಂಡೆ. ಸಲಿಂಗ ಕಾಮ ನಡೆಸುವ ಉದ್ದೇಶ ನನಗಿರಲಿಲ್ಲ ಎಂದು ರಸೂಲ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
ಕುಡಿದ ಮತ್ತಲ್ಲಿ ರಹಸ್ಯ ಬಹಿರಂಗಗೊಳಿಸಿದ್ದ ಹಂತಕ
ಕಲಾಸಿಪಾಳ್ಯ, ಮಾರುಕಟ್ಟೆ ವ್ಯಾಪ್ತಿಯಲ್ಲಿ ಪಿಕ್ ಪ್ಯಾಕೇಟ್, ದರೋಡೆ, ಡಕಾಯಿತಿ ಕೃತ್ಯದಲ್ಲಿ ತೊಡಗಿದ್ದ ಯುವಕರು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಇತ್ತೀಚೆಗೆ ಮಾಹಿತಿ ಸಿಕ್ಕಿತ್ತು. ಅದರಂತೆ ಆ ಗ್ರೂಪ್‌ನಲ್ಲಿದ್ದ 40-50 ಮಂದಿಯನ್ನು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಮುರಳೀಧರನ ಹಂತಕನ ಬಗ್ಗೆ ಸಣ್ಣ ಸುಳಿವು ಸಿಕ್ಕಿತ್ತು. ಜತೆಗೆ ಆರೋಪಿ ಕೊಲೆ ಮಾಡಿದ ನಂತರ ರಸೂಲ್ ಕಲಾಸಿಪಾಳ್ಯದ ಸ್ಥಳವೊಂದರಲ್ಲಿ ಮದ್ಯ,
-ಗಾಂಜಾ ಸೇವಿಸುತ್ತ ಕೊಲೆ ರಹಸ್ಯವನ್ನು ಸ್ನೇಹಿತರೊಂದಿಗೆ ಹೇಳಿಕೊಂಡಿದ್ದ. ಈ ಮಾಹಿತಿ ಬಾತ್ಮೀದಾರರ ಮೂಲಕ ಪೊಲೀಸರಿಗೆ ಸಿಕ್ಕಿತ್ತು. ಅದರಂತೆ ಪತ್ತೆಕಾರ್ಯ ನಡೆಸಿದಾಗ ಕೊತ್ತಂಬರಿ ಮಂಡಿ ಬಳಿ ಅನುಮಾನಸ್ಪದವಾಗಿ ರಸುಲ್ ಓಡಾಡುತ್ತಿದ್ದುದು ಗೊತ್ತಾಯಿತು. ಅದರಂತೆ ಆತನನ್ನು ಕರೆದೊಯ್ದು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆ ಮಾಡುವ 5 ದಿನಗಳ ಹಿಂದೆ ನಡೆದಿತ್ತು ವಿವಾಹ
ಆರೋಪಿ ರಸೂಲ್ ಈ ಮೊದಲು ಕೆ.ಆರ್.ಮಾರುಕಟ್ಟೆಯ ಕೊತ್ತಂಬರಿ ಸೊಪ್ಪಿನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ. ಜೈಲಿನಿಂದ ಹೊರಬಂದ ನಂತರ ಮಂಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿ ಕನಕಪುರ ಮೂಲದ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಅದೂ ಹತ್ಯೆ ನಡೆಯುವ ಕೇವಲ ಐದು ದಿನಗಳ ಹಿಂದಷ್ಟೇ. ಅಲ್ಲದೆ, ಆಕೆಯನ್ನು ಕರೆತಂದು ಕಗ್ಗಲೀಪುರದ ಬಾಡಿಗೆ ಮನೆಯೊಂದರಲ್ಲಿ ಸಂಸಾರ ನಡೆಸುತ್ತಿದ್ದ. ಘಟನೆ ನಡೆದ ನಂತರ ಇಲ್ಲಿಂದ ಮನೆ ಬದಲಿಸುವ ಇಚ್ಚೆ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ.
ಸಾಕ್ಷ್ಯಾಧಾರಗಳ ನಾಶ
ಹತ್ಯೆ ನಡೆದ ಬಳಿಕ ರಸೂಲ್ ಅಲ್ಲೇ ಇದ್ದ ಕೊಳಾಯಿಯಲ್ಲಿ ಚಾಕುವನ್ನು ತೊಳೆದು ಎಸೆದು ಓಡಿಹೋಗಿದ್ದ. ಅಲ್ಲದೆ, ಹತ್ಯೆಯಾದ ಮಾರನೇ ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಕಲಾಸಿಪಾಳ್ಯದ ಲೇಟೆಸ್ಟ್ ಬಾತ್ ರೂಂಗೆ ಬಂದು ರಕ್ತದ ಕಲೆ ಅಂಟಿಕೊಂಟ್ಟಿದ್ದ ಬಟ್ಟೆಗಳನ್ನು ಸೌದೆ ಒಲೆಯಲ್ಲಿ ಹಾಕಿ ಸುಟ್ಟು ಸಾಕ್ಷ್ಯಾಧಾರ ನಾಶ ಪಡಿಸಿದ್ದ. ಘಟನೆ ನಡೆದ ಬಳಿಕ 15 ದಿನ ನಾಪತ್ತೆಯಾಗಿದ್ದ ಆರೋಪಿ, ಬಳಿಕ ಘಟನಾ ಸ್ಥಳಕ್ಕೆ ಬಂದು ಆಗುತ್ತಿರುವ ಬೆಳವಣಿಗೆಗಳ ಮಾಹಿತಿ ಪಡೆದುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.