ಸೆಲ್ಫಿಯಲ್ಲಿ ಸೆರೆಯಾದ ಸ್ನೇಹಿತನ ಸಾವು!


Team Udayavani, Sep 26, 2017, 11:30 AM IST

Vishvas-Selfi.jpg

ರಾಮನಗರ/ಬೆಂಗಳೂರು: ಬೆಂಗಳೂರು ಮೂಲದ ವಿದ್ಯಾರ್ಥಿಯೊಬ್ಬ ಕನಕಪುರ ತಾಲೂಕಿನ ರಾಮಗೊಂಡ್ಲು ಗ್ರಾಮದ ಕಲ್ಯಾಣಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾನೆ. ಭಾನುವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ ಸಹಪಾಠಿಗಳು ತೆಗೆದುಕೊಂಡ ಸೆಲ್ಫಿಯಲ್ಲಿ ವಿದ್ಯಾರ್ಥಿ ಮುಳುಗುತ್ತಿರುವ ದೃಶ್ಯ ಸೆರೆಯಾಗಿದೆ!

ಬೆಂಗಳೂರಿನ ನ್ಯಾಷನಲ್‌ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ವಿಶ್ವಾಸ್‌ (17) ಮೃತನು. ಬೆಂಗಳೂರಿನ ಹನುಮಂತ ನಗರದ ನಿವಾಸಿ ಗೋವಿಂದರಾಜು , ಲಕ್ಷ್ಮಿದಂಪತಿಯ ಪುತ್ರ ವಿಶ್ವಾಸ್‌, ಎನ್‌ಸಿಸಿ ಕ್ಯಾಂಪ್‌ ನಿಮಿತ್ತ ಸಹಪಾಠಿಗಳೊಂದಿಗೆ ರಾಮಗೊಂಡ್ಲು ಗ್ರಾಮಕ್ಕೆ ಬಂದಿದ್ದ ವೇಳೆ ದುರಂತ ಸಂಭವಿಸಿದೆ.

ಟ್ರಕ್ಕಿಂಗ್‌ ಮುಗಿಸಿ ನೀರಿಗಿಳಿದಿದ್ದರು: ಬೆಂಗಳೂರಿನ ನ್ಯಾಷನಲ್‌ ಪಿಯು ಕಾಲೇಜಿನ ಎನ್‌ಸಿಸಿ ವಿಭಾಗದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪ್‌ ನಿಮಿತ್ತ ಕನಕಪುರ ತಾಲೂಕಿನ ರಾಮಗೊಂಡ್ಲು ಗ್ರಾಮಕ್ಕೆ ತೆರಳಿದ್ದರು. ಭಾನುವಾರ ಬೆಳಗ್ಗೆ ಅಲ್ಲಿನ ಗುಡ್ಡವೊಂದರಲ್ಲಿ ಟ್ರಕ್ಕಿಂಗ್‌ ಮುಗಿಸಿದ್ದಾರೆ. ಬಳಿಕ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣಿ ಬಳಿ ಬಂದು ಈಜಲು ಕಲ್ಯಾಣಿಗೆ ಇಳಿದಿದ್ದಾರೆ.

ಈ ನಡುವೆ ಕೆಲ ವಿದ್ಯಾರ್ಥಿಗಳು ಕಲ್ಯಾಣಿ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದು, ಇದೇ ವೇಳೆ ವಿಶ್ವಾಸ್‌ ಕಲ್ಯಾಣಿ ನೀರಿನಲ್ಲಿ ಮುಳುಗಿದ್ದಾನೆ. ಈ ದೃಶ್ಯ ಯುವಕರು ತೆಗೆದುಕೊಂಡ ಸೆಲ್ಫಿಯಲ್ಲಿ ಸೆರೆಯಾಗಿದೆ. ಆದರೆ, ವಿಶ್ವಾಸ್‌ ಮುಳುಗುವುದನ್ನು ಯಾರೂ ಗಮನಿಸಿಲ್ಲ. ಸೆಲ್ಫಿ ತೆಗೆದುಕೊಂಡ ನಂತರ ವಿದ್ಯಾರ್ಥಿಗಳು ಅಲ್ಲಿಂದ ಹೊರಟಿದ್ದಾರೆ. ಆದರೆ, ಘಟನಾ ಸ್ಥಳದಿಂದ ದಾರು ಕಿ.ಮೀ ದೂರು ಹೋದ ನಂತರ ವಿಶ್ವಾಸ್‌ ನಾಪತ್ತೆಯಾಗಿರುವುದು ಗೊತ್ತಾಗಿದೆ. ತಕ್ಷದಣ ಕಲ್ಯಾಣಿ ಬಳಿ ವಾಪಸ್‌ ಹೋದ ವಿದ್ಯಾರ್ಥಿಗಳ ತಂಡ, ಕಲ್ಯಾಣಿಯೊಳಗೆ ಹುಡುಕಾಡಿದಾಗ ವಿಶ್ವಾಸ್‌ನ ಶವ ಪತ್ತೆಯಾಗಿದೆ.

ಈಜು ಬಾರದಿದ್ದರೂ ನೀರಿಗೆ ಇಳಿದಿದ್ದ ವಿಶ್ವಾಸ್‌, ಮೇಲೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮೃತನ ಪೋಷಕರು, ಎನ್‌ಸಿಸಿ ಅಧಿಕಾರಿ ಗಿರೀಶ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹಪಾಠಿಗಳಿಂದ ಅಂತಿಮ ದರ್ಶನ: ಜಯನಗರ ನ್ಯಾಷನಲ್‌ಕಾಲೇಜು ಆವರಣದಲ್ಲಿ ಮೃತ ವಿಶ್ವಾಸ್‌ನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸಾವಿರಾರು ಸಹಪಾಠಿಗಳು ಅಗಲಿದ ಸ್ನೇಹಿತನಿಗಾಗಿ ಕಂಬಿನಿ ಮಿಡಿದರು. ಈ ವೇಳೆ ಮೃತ ವಿಶ್ವಾಸ್‌ ಪೋಷಕರು ಮತ್ತು ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜು ಸುತ್ತ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

“ಅಂತ್ಯ ಕ್ರಿಯೆಗಾಗಿ ವಿಶ್ವಾಸ್‌ ಕುಟುಂಬಕ್ಕೆ ಆಡಳಿತ ಮಂಡಳಿಯಿಂದ 50 ಸಾವಿರ ರೂ. ನೀಡಲಾಗಿದೆ. ಕುಟುಂಬಕ್ಕೆ ಇನ್ನು ಹೆಚ್ಚಿನ ಪರಿಹಾರ ಕೊಡುವ ಸಂಬಂಧ ಚರ್ಚಿಸಲು ಮಂಗಳವಾರ ಆಡಳಿತ ಮಂಡಳಿಯ ಸಭೆ ಕರೆಯಲಾಗಿದೆ. ಮಾನವೀಯತೆ ಆಧಾರದಲ್ಲಿ ಆರ್ಥಿಕ ಸಹಾಯ ಮಾಡಲಿದ್ದೇವೆ,’ ಎಂದು ನಾಗರಾಜ್‌ ತಿಳಿಸಿದ್ದಾರೆ.

ಸೆಲ್ಫಿ ಮುಖ್ಯವಾಯಿತಾ?: ಎನ್‌ಸಿಸಿ ಕ್ಯಾಂಪ್‌ಗೆ ತೆರಳಿದ್ದ ಮಗನ ಸಾವಿಗೆ ಕಾಲೇಜು ಆಡಳಿತ ಮಂಡಳಿ ಮತ್ತು ಎನ್‌ಸಿಸಿ ಅಧಿಕಾರಿ ಗಿರೀಶ್‌ ಕಾರಣ ಎಂದು ಆರೋಪಿಸಿ ಮೃತ ವಿದ್ಯಾರ್ಥಿಯ ಪೋಷಕರು ಸೋಮವಾರ ಕಾಲೇಜು ಮುಂದೆ ಪ್ರತಿಭಟಿಸಿದರು. “ನನ್ನ ಮಗ ನೀರಿನಲ್ಲಿ ಬಿದ್ದು ಮೃತಪಟ್ಟರೂ, ಎನ್‌ಸಿಸಿ ಅಧಿಕಾರಿ ಗಿರೀಶ್‌ ನಮಗೆ ಮಾಹಿತಿ ನೀಡಿಲ್ಲ. ಕಗ್ಗಲಿಪುರ ಠಾಣೆ ಪೊಲೀಸರು ದೂರವಾಣಿ ಮೂಲಕ ಮಗನ ಸಾವಿನ ವಿಚಾರ ತಿಳಿಸಿದರು. ನನ್ನ ಮಗ ಸಾಯುತ್ತಿದ್ದರೂ, ಆತನ ಸ್ನೇಹಿತರಿಗೆ ಸೆಲ್ಫಿ ಮುಖ್ಯವಾಯಿತಾ,’ ಎಂದು ವಿಶ್ವಾಸ್‌ ಪೋಷಕರು ಆಕ್ರೋಶ ವ್ಯಕಪಡಿಸಿದರು.

ಕ್ಯಾಂಪ್‌ಗೆ ಅನುಮತಿ ಪಡೆದಿರಲಿಲ್ಲ: “ನ್ಯಾಷನಲ್‌ ಕಾಲೇಜಿನ ಎನ್‌ಸಿಸಿ ಅಧಿಕಾರಿ ಗಿರೀಶ್‌, ಕ್ಯಾಂಪ್‌ ನಡೆಸುವ ಬಗ್ಗೆ ಪ್ರಾಂಶುಪಾಲರಿಂದಾಗಲಿ, ಎನ್‌ಸಿಸಿಯ ಹಿರಿಯ ಅಧಿಕಾರಿಯಿಂದಾಗಲೀ ಅನುಮತಿ ಪಡೆದಿಲ್ಲ. ಘಟನೆ ಭಾನುವಾರ ನಡೆದಿದ್ದು, ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಪ್ರಿನ್ಸಿಪಾಲ್‌ರಿಗೆ ಕರೆ ಮಾಡಿ ವಿಶ್ವಾಸ್‌ ಸಾವಿನ ಮಾಹಿತಿ ನೀಡಿದ್ದಾರೆ. ಯಾರ ಅನುಮತಿ  ಪಡೆದು ವಿದ್ಯಾರ್ಥಿಗಳನ್ನು ಕರೆದೊಯ್ದಿರಿ ಎನ್ನುವ ಪ್ರಶ್ನೆಗೆ ಗಿರೀಶ್‌ ಸ್ವಷ್ಟವಾಗಿ ಉತ್ತರ ನೀಡುತ್ತಿಲ್ಲ.

ಅದೊಂದು ಸ್ವಯಂ ಪ್ರೇರಿತ ಸ್ವತ್ಛತಾ ಕಾರ್ಯ ಎಂದು ಸಬೂಬು ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದು, ಒಂದೊಮ್ಮೆ ಗಿರೀಶ್‌ ತಪ್ಪು ಮಾಡಿರುವುದು ಸಾಬೀತಾದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ,’ ಎಂದು ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ  ಪ್ರೊ ಎಸ್‌.ಎನ್‌.ನಾಗರಾಜ ರೆಡ್ಡಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.