ವಿವಿಧ ರೈಲುಗಳ ಸೇವೆ ಮುಂದುವರಿಕೆಗೆ ನಿರ್ಧಾರ
Team Udayavani, Aug 1, 2018, 3:16 PM IST
ಬೆಂಗಳೂರು: ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಕೃಷ್ಣರಾಜಪುರಂ- ಕಾಚೇಗುಡಾ (07604-07605) ವಾರದ ವಿಶೇಷ ರೈಲನ್ನು ಅ.29ರವರೆಗೆ ಹಾಗೂ ಯಶವಂತಪುರ-ವಿಶಾಖಪಟ್ಟಣಂ ವಾರದ ತತ್ಕಾಲ್ ಎಕ್ಸ್‌ಪ್ರೆಸ್ (06579/06580) ರೈಲುಗಳ ಸೇವೆಯನ್ನು ಸೆ.28ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ.
ಕೃಷ್ಣರಾಜಪುರಂದಿಂದ ಸೋಮವಾರ ಮಧ್ಯಾಹ್ನ 3:25ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 6:55ಕ್ಕೆ ಕಾಚೇಗುಡಾಕ್ಕೆ ಬಂದು ಸೇರಲಿದೆ. ಅದೇ ರೀತಿ ರವಿವಾರ ಸಂಜೆ 6 ಗಂಟೆಗೆ ಕಾಚೇಗುಡಾದಿಂದ ಪ್ರಯಾಣ ಬೆಳೆಸುವ ರೈಲು ಮರುದಿನ ಬೆಳಗ್ಗೆ 6 ಗಂಟೆಗೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಲಿದೆ.
ತತ್ಕಾಲ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ ಶುಕ್ರವಾರ ಸಂಜೆ 6:35ಕ್ಕೆ ಹೊರಡಲಿದ್ದು, ಮರುದಿನ ಮಧ್ಯಾಹ್ನ 2:35ಕ್ಕೆ ವಿಶಾಖಪಟ್ಟಣಂಗೆ ಬಂದು ಸೇರಲಿದೆ. ಅದೇ ರೀತಿ ವಿಶಾಖಪಟ್ಟಣಂ ನಿಲ್ದಾಣದಿಂದ ರವಿವಾರ ಮಧ್ಯಾಹ್ನ 1:45ಕ್ಕೆ ಹೊರಡ ಲಿದ್ದು, ಮರುದಿನ ಬೆಳಗ್ಗೆ 9:05ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ.
ಆ. 5ರಿಂದ ಯಶವಂತಪುರ- ವಿಶಾಖಪಟ್ಟಣಂ ವೀಕ್ಲಿ ತತ್ಕಾಲ್ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು 2ಟೀರ್ ಎಸಿ ಕೋಚ್, ಒಂದು ದ್ವಿತೀಯ ದರ್ಜೆ ಸ್ಲಿಪರ್ ಕೋಚ್ ಜೋಡಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.