ಸಿರಿಧಾನ್ಯದಿಂದ ಕಾಯಿಲೆಗಳಿಗೆ ಮುಕ್ತಿ
Team Udayavani, May 6, 2019, 3:07 AM IST
ಬೆಂಗಳೂರು: ಸಿರಿಧಾನ್ಯಗಳನ್ನು ಸೇವಿಸುವುದರಿಂದ ಮಾರಣಾಂತಿಕ ಕಾಯಿಲೆಗಳಿಂದಲೂ ಮುಕ್ತಿ ಹೊಂದಬಹುದು ಎಂದು ಸಿರಿಧಾನ್ಯ ತಜ್ಞ ಡಾ. ಖಾದರ್ ಹೇಳಿದರು.
ಗ್ರಾಮೀಣ ನ್ಯಾಚುರಲ್ ಮತ್ತು ಗ್ರಾಮೀಣ ಕುಟುಂಬ ಸಹಯೋಗದಲ್ಲಿ ಲಾಲ್‌ಬಾಗ್‌ನಲ್ಲಿ ನಡೆದ ಕರ್ನಾಟಕ ಸಿರಿಧಾನ್ಯಗಳ ವೈಭವ ಹಾಗೂ ಸಾವಯುವ ಆಹಾರ ಮೇಳದಲ್ಲಿ ನಡೆದ “ನಿಮ್ ಪ್ರಶ್ನೆಗೆ ಡಾ. ಖಾದರ್ ಉತ್ತರ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಹಾರ ಮತ್ತು ಆರೋಗ್ಯಕ್ಕೆ ನೇರ ಸಂಪರ್ಕ ಇದೆ ಎನ್ನುವುದನ್ನು ಹೇಳಲು ಯಾರು ಸಿದ್ಧರಿಲ್ಲ ಎಂದರು.
ಹೈಬ್ರಿಡ್ ತಳಿಯ ಆಹಾರವನ್ನು ಸೇವಿಸುತ್ತಿರುವುದರಿಂದ ಹಲವು ಹೊಸ ರೋಗಗಳು ಸೃಷ್ಟಿಯಾಗಿವೆ. ಸಿರಿಧಾನ್ಯಗಳನ್ನು ನಿಯಮಿತವಾಗಿ ಆಹಾರದಲ್ಲಿ ಬಳಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ನಾರಿನಾಂಶವೇ ಇಲ್ಲದ ಆಹಾರ ಸೇವಿಸುತ್ತಿರುವುದರಿಂದ ನಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತಿದೆ. ದೇಹದ ರಕ್ತಕಣಗಳಲ್ಲಿ ಶುದ್ಧತೆ ಸಹ ಕಡಿಮೆಯಾಗಿದೆ. ಸಣ್ಣ ಮಕ್ಕಳಿಗೆ ಬೊಜ್ಜು, ಮಧುಮೇಹ, ಕ್ಯಾನ್ಸರ್‌ನಂತ ರೋಗಗಳು ಬರುತ್ತಿರುವುದಕ್ಕೆ ಮುಖ್ಯ ಕಾರಣವೇ ನಮ್ಮ ಆಹಾರ ಪದ್ಧತಿ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ನ್ಯಾ. ಎಚ್.ಎನ್. ನಾಗಮೋಹನದಾಸ್, ಸಿರಿಧಾನ್ಯದ ಚಳವಳಿ ಈಗ ವಿದೇಶಗಳಿಗೂ ಹಬ್ಬಿದೆ ಅದಕ್ಕೆ ಡಾ. ಖಾದರ್ ಅವರ ಪರಿಶ್ರಮವೇ ಕಾರಣ. ಖಾದರ್ ನಡೆಸಿಕೊಂಡು ಬಂದಿರುವ ಅಭಿಯಾನವೇ ಇದಕ್ಕೆ ಮುಖ್ಯ ಕಾರಣ ಎಂದರು.
ನಮ್ಮ ಮುಂದಿನ ಪೀಳಿಗೆಗೆ ನಮ್ಮ ಪರಿಸರದ ಜೊತೆಗೆ ಶುದ್ಧ ಆಹಾರ ಸಂಸ್ಕೃತಿಯನ್ನು ಬಿಟ್ಟು ಹೋಗಬೇಕು. ಆ ಬದಲಾವಣೆ ಉಂಟಾಗಬೇಕಾದರೆ, ನಮ್ಮ ಕೃಷಿ ಬಿಕ್ಕಟ್ಟುಗಳು ಬಗೆಹರಿಯಬೇಕು. ಸಿರಿಧಾನ್ಯ ಬೆಳೆಯುವುದು ಮತ್ತು ಬೆಳೆಸುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.
“ಹಾಲು ಕುಡಿಯುವುದನ್ನು ಬಿಟ್ಟು ಬಿಡಿ!’: ಹಾಲು ಕುಡಿಯುವುದು ನಮ್ಮ ಸಂಸ್ಕೃತಿಯೇ ಅಲ್ಲ, ಇದು ಪಾಶ್ಚಿಮಾತ್ಯ ಸಂಸ್ಕೃತಿ. ಹಾಲು, ಕಾಫಿ, ಟೀ ಕುಡಿತುವುದನ್ನು ಸಂರ್ಪೂಣವಾಗಿ ಬಿಟ್ಟುಬಿಡಿ ಎಂದು ಡಾ. ಖಾದರ್ ಹೇಳಿದರು. ಸಂವಾದದಲ್ಲಿ ಮಾತನಾಡಿದರು.
ಹಾಲು ಕುಡಿಯುವುದರಿಂದಲೇ ದೇಹದಲ್ಲಿನ ಹಾರ್ಮೋನ್ಸ್‌ನಲ್ಲಿ ಸಮಸ್ಯೆ ಉಂಟಾಗುತ್ತಿದೆ. ಹಾಲು ಕುಡಿಯುವುದನ್ನು ಸಂರ್ಪೂಣವಾಗಿ ನಿಲ್ಲಿಸುವುದರಿಂದ ಆರೋಗ್ಯದಲ್ಲಿ ಉಂಟಾಗುತ್ತಿರುವ ಅರ್ಧ ಸಮಸ್ಯೆಗಳಿಂದ ಮುಕ್ತವಾಗಬಹುದು. ಮೊಟ್ಟೆ ತಿನ್ನುವುದು, ಕಾಫಿ, ಟೀ ಕುಡಿಯುವುದನ್ನು ಬಿಟ್ಟರೆ ಆರೋಗ್ಯ ಸುಧಾರಿಸಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.