ರಾಜ್ಯದಿಂದ ಕೇಂದ್ರಕ್ಕೆ 12 ಐಎಸ್‌ಒ ಕಂಟೈನರ್‌ಗಳಿಗೆ ಬೇಡಿಕೆ


Team Udayavani, May 10, 2021, 9:50 PM IST

Demand for containers

ಬೆಂಗಳೂರು: ರಾಜ್ಯದಲ್ಲಿ ಆಮ್ಲಜನಕಉತ್ಪಾದನೆಯಾಗುತ್ತಿದ್ದರೂ, ಅದರ ಪೂರೈಕೆಯಲ್ಲಿತುಸು ವಿಳಂಬವಾಗುತ್ತಿರುವುದರಿಂದ ರೈಲುಮಾರ್ಗಗಳ ಮೂಲಕ ಸರಬರಾಜು ಮಾಡಲುಸರ್ಕಾರ ಚಿಂತನೆ ನಡೆಸಿದೆ.

ಈ ಸಂಬಂಧ ವಿಶಿಷ್ಟ ಮಾದರಿಯ ಅಂದರೆಐಎಸ್‌ಒ  ಮಾದರಿಯ 12ಕಂಟೈನರ್‌ಗಳಿಗಾಗಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದ್ದು,ಮಂಜೂರು ಮಾಡುವ ನಿರೀಕ್ಷೆ ಇದೆ.ಒಂದು ವೇಳೆ ಈ ಐಎಸ್‌ಒ ಟ್ಯಾಂಕರ್‌ಗಳುಮಂಜೂರಾದರೆ, ಈಗ ಸರಬರಾಜು ಆಗುತ್ತಿರುವಸಮಯಕ್ಕಿಂತ ದುಪ್ಪಟ್ಟು ವೇಗದಲ್ಲಿ ಆಮ್ಲಜನಕಸಾಗಿಸಲು ಸಾಧ್ಯವಾಗಲಿದೆ. ಉದಾಹರಣೆಗೆಕಳಿಂಗದಿಂದ ನಿತ್ಯ ಸುಮಾರು 60 ಟನ್‌ ಆಮ್ಲಜನಕ ರಾಜ್ಯಕ್ಕೆ ಮಂಜೂರಾಗಿದೆ.

ಇದು ರಸ್ತೆಮೂಲಕ ತಲುಪಲು ಮೂರು ದಿನಗಳು ಹಿಡಿಯುತ್ತದೆ. ಆದರೆ, ರೈಲು ಮಾರ್ಗವಾಗಿ ರಾತ್ರೋರಾತ್ರಿ ಬಂದುಬಿಡುತ್ತದೆ ಎಂದು ಆಮ್ಲಜನಕಪೂರೈಕೆ ಉಸ್ತುವಾರಿ ತಂಡದಲ್ಲಿರುವ ಉನ್ನತಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿನೀಡಿದರು.

ಐಎಸ್‌ಒ ಕಂಟೈನರ್‌ನಲ್ಲಿ ಬರುವ ಆಮ್ಲಜನಕವನ್ನು ನಂತರ ಕ್ರಯೋಜನಿಕ್‌ ಟ್ಯಾಂಕರ್‌ಗಳಿಗೆಶಿಫ್ಟ್ ಮಾಡಲಾಗುತ್ತದೆ. ಆ ಮೂಲಕ ನಾನಾಭಾಗಗಳಿಗೆ ಪೂರೈಸಲಾಗುತ್ತದೆ.

ಐಎಸ್‌ಒ ಟ್ಯಾಂಕರ್‌ ಮೊರೆ ಯಾಕೆ?

ಸಾಮಾನ್ಯವಾಗಿ ರಸ್ತೆ ಮೂಲಕ ಪೂರೈಸ ಲಾಗುವ ಆಮ್ಲಜನಕ ಟ್ಯಾಂಕರ್‌ಗಳು ಸುರಕ್ಷತೆ ದೃಷ್ಟಿಯಿಂದ ಗಂಟೆಗೆ ಗರಿಷ್ಠ 50 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ‌ ಅಲ್ಲದೆ,ರಾತ್ರಿ 11ರಿಂದ ಬೆಳಗಿನಜಾವ 5ರವರೆಗೆ ಕಡ್ಡಾಯವಾಗಿ ಕಾರ್ಯಾಚರಣೆ ನಿಷಿದ್ಧ. ಯಾಕೆಂದರೆ, ಅದು ಮಲಗುವ ಸಮಯ.ಆದರೆ, ಐಎಸ್‌ಒ ಟ್ಯಾಂಕರ್‌ಗಳು ರೈಲು ಎಂಜಿನ್‌ಗೆ ಜೋಡಣೆ ಮಾಡಲಾಗಿರುತ್ತದೆ. ಗಂಟೆಗೆ ಸರಾಸರಿ 100 ಕಿ.ಮೀ. ವೇಗದಲ್ಲಿ ಪೂರೈಕೆ ಆಗುತ್ತವೆ. ಈ ವೇಗದಲ್ಲಿ ಕಂಟೈನರ್‌ಗಳು ಬರುವುದರಿಂದ ಹೆಚ್ಚು ಒತ್ತಡ ಉಂಟಾಗುತ್ತದೆ. ಪರಿಣಾಮ ಆಮ್ಲಜನಕ ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಅವಧಿಯಲ್ಲಿ ಸರಬರಾಜು ಆಗುತ್ತದೆ. ಸದ್ಯ ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹಾಹಾಕಾರ ಉಂಟಾಗಿರುವುದರಿಂದ ಹೆಚ್ಚು ಉಪಯುಕ್ತ ಆಗಲಿದೆ ಎಂದೂ ತಜ್ಞರು ತಿಳಿಸಿದರು.

ಈಚೆಗೆ ಬಹ್ರೆನ್‌ನಿಂದ 80 ಮೆಟ್ರಿಕ್‌ ಟನ್‌ ಆಮ್ಲಜನಕ ರಾಜ್ಯದ ಕರಾವಳಿ ಮೂಲಕ ಬಂದಿಳಿಯಿತು. ಇಲ್ಲಿ ಆಮ್ಲಜನಕಕ್ಕಿಂತ ಹೆಚ್ಚಾಗಿ ನಾಲ್ಕು ಕಂಟೈನರ್‌ಗಳು ಬಂದಿವೆ. ಇದು ನಮಗೆ ಪ್ರಸ್ತುತ ಸಂದರ್ಭದಲ್ಲಿ ಅತಿ ಮುಖ್ಯವಾಗಿದೆ.ಇದರೊಂದಿಗೆ ಕೇಂದ್ರದಿಂದಲೂ 12 ಕಂಟೈನರ್‌ಗಳು ಮಂಜೂರಾದರೆ ಇನ್ನಷ್ಟು ಅನುಕೂಲ ಆಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.